ರಾಜ್ಯಪಾಲರ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಕಾಂಗ್ರೆಸ್ ನಿರ್ಧಾರ
ನವ ದೆಹಲಿ, ಮೇ 16: ಬಹುಮತ ಇದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನ ನೀಡದಿರುವ ರಾಜ್ಯಪಾಲರ ಕ್ರಮದ ವಿರುದ್ಧ ಕಾಂಗ್ರೆಸ್ ಪಕ್ಷವು ನ್ಯಾಯಾಲಯದ ಮೆಟ್ಟಿಲೇರಲಿದೆ.

ಈ ಬಗ್ಗೆ ನವ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪಿ.ಚಿದಂಬಂರಂ, ಕಪಿಲ್ ಸಿಬಲ್ ಮತ್ತು ಸರ್ಜೆವಾಲಾ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಪಕ್ಷದ ಮುಖಂಡರು ತಮ್ಮ ಶಾಸಕರನ್ನು ರಾಜಭವನಕ್ಕೆ ಕರೆತಂದು ಪೆರೆಡ್ ಆಡಲು ಸಿದ್ದವಾಗಿದ್ದರೂ ಕೂಡ ಬಹುಮತ ಇಲ್ಲದ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದಾರೆ ಎನ್ನಲಾಗಿರುವ ಕಾರಣ ಕಾಂಗ್ರೆಸ್ ಈ ನಿರ್ಣಯ ತೆಗೆದುಕೊಂಡಿದೆ ಎಂದು ಪಿ.ಚಿದಂಬರಂ ಅವರು ಹೇಳಿದ್ದಾರೆ.
ರಾಜ್ಯಪಾಲರು ಹಾಗೇನಾದರೂ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದೇ ಆದಲ್ಲಿ ಅದು ಬಿಜೆಪಿಗೆ ಶಾಸಕರನ್ನು ಹಣ ಬಲದಿಂದ ಕೊಂಡು ಕೊಳ್ಳಲು ಅವಕಾಶ ನೀಡಿದಂತೆ ಎಂದು ಪಿ.ಚಿದಂಬರಂ ಹೇಳಿದರು.












Click it and Unblock the Notifications