ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮಂಗಳೂರಿನಲ್ಲಿ ಚಿನ್ನ-ವಜ್ರದ ಪಾರ್ಕ್: ಕಾಂಗ್ರೆಸ್ ಭರವಸೆ
ಬೆಂಗಳೂರು, ಮೇ 2: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಗ್ಯಾರಂಟಿ ಘೋಷಣೆಯ ಮೂಲಕ ಹಲವು ಭರವಸೆಯನ್ನು ರಾಜ್ಯದ ಜನರಿಗೆ ನೀಡಿದ್ದ ಕಾಂಗ್ರೆಸ್ ಇಂದು ಪ್ರಣಾಳಿಕೆ ಮೂಲಕ ಮತ್ತಷ್ಟು ಭರವಸೆಗಳನ್ನು ನೀಡಿದೆ.
ಬೆಂಗಳೂರು ಶಾಂಗ್ರಿಲಾ ಖಾಸಗಿ ಹೋಟೆಲ್‌ನಲ್ಲಿಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಈಗಾಗಲೇ ಮಹಿಳೆಯರಿಗೆ, ಯುವಕರ ಹಾಗೂ ರೈತರ ಸಮುದಾಯಕ್ಕೆ ಗ್ಯಾರಂಟಿ ಘೋಷಣೆ ಮಾಡಿದ್ದು, ಜೊತೆಗೆ ರಾಜ್ಯದಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕೂಡ ಈ ಹಿಂದೆಯೇ ರಾಹುಲ್ ಗಾಂಧಿ ಘೋಷಣೆ ಮಾಡಿದ್ದರು. ಕಾಂಗ್ರೆಸ್ ರಾಜ್ಯ ಚುನಾವಣಾ ಪ್ರಣಾಳಿಕೆಯಲ್ಲಿ ಸಾರಿಗೆ ಕ್ಷೇತ್ರಕ್ಕೆ ಮತ್ತಷ್ಟು ಭರವಸೆಗಳನ್ನು ನೀಡಿದೆ.

ಸಾರಿಗೆ ಕ್ಷೇತ್ರಕ್ಕೆ ಕಾಂಗ್ರೆಸ್ ಭರವಸೆ
* ಶಕ್ತಿ-ರಾಜ್ಯದಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ.
*ಸಾರ್ವಜನಿಕರಿಗೆ ಸಾರಿಗೆ ಪಾಲನ್ನು ಶೇ 55ರಿಂದ ಶೇ 70ಕ್ಕೆ ಹೆಚ್ಚಿಸುವುದು.
*ಬಿಎಂಟಿಸಿ ಬಸ್‌ಗಳ ಸಂಖ್ಯೆ 10 ಸಾವಿರಕ್ಕೆ ಹೆಚ್ಚಳ.
* ಕೆಎಸ್ಆರ್‌ಟಿಸಿ ಬಸ್‌ಗಳ ಸಂಖ್ಯೆ 15,000ಕ್ಕೆ ಹೆಚ್ಚಳ.
*ಎರಡು ವರ್ಷಗಳಲ್ಲಿ ಒಟ್ಟು ಬಸ್‌ಗಳ ಸಂಖ್ಯೆಯಲ್ಲಿ ಶೇ50ರಷ್ಟು ಬಸ್‌ಗಳು ವಿದ್ಯುತ್ ಚಾಲಿತ ಬಸ್ಸುಗಳೇ ಇರುವಂತೆ ಯೋಜನೆ
*ಸಾರ್ವಜನಿಕರ ಪಾಲ್ಗೊಳ್ಳುವಿಕೆಯಲ್ಲಿ ಗ್ರಾಮೀಣ ಮಿನಿಬಸ್ ಕಾರ್ಯಕ್ರಮ ಆರಂಭ
ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಭರವಸೆ
*ಮಂಗಳೂರಿನಲ್ಲಿ ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನು ಉತ್ತೇಜಸುವ ಸಲುವಾಗಿ ಅತ್ಯಂತ ಭದ್ರತೆಯ ವಲಯದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಚಿನ್ನ ಮತ್ತು ವಜ್ರದ ಪಾರ್ಕ್ ಸ್ಥಾಪನೆ.
*ರಾಜ್ಯದ ಗಡಿ ಭಾಗಗಳಾದ ತಲಪಾಡಿ (ಕೇರಳ), ನಿಪ್ಪಾಣಿ (ಮಹಾರಾಷ್ಟ್ರ), ಬೀದರ್ (ಮಹಾರಾಷ್ಟ್ರ/ತೆಲಂಗಾಣ) ಸರ್ಜಾಪುರ (ತಮಿಳುನಾಡು), ಶ್ರೀನಿವಾಸಪುರಗಳಲ್ಲಿ (ಆಂಧ್ರ) ಕೈಗಾರಿಕೆಗಳ ಉತ್ತೇಜನಕ್ಕಾಗಿ ಗಡಿ ಕೈಗಾರಿಕಾ ಅಭಿವೃದ್ಧಿ ನಿಗಮ ಸ್ಥಾಪನೆ. ಇದಕ್ಕಾಗಿ ಐದು ವರ್ಷಗಳಲ್ಲಿ 5,000 ಕೋಟಿ ರೂ ನಿಗದಿ.
*ಸ್ಟಾರ್ಟ್‌ಅಪ್ ನಿಧಿ- ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರೂ 10 ಕೋಟಿ ನೀಡಿಕೆ.
*ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಮೈಸೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡಗಳಲ್ಲಿ ಆಧುನಿಕ ಟೆಕ್ ಪಾರ್ಕ್ ಮೇಲ್ದರ್ಜೆಗೆ. ಇಲ್ಲಿ 10 ಲಕ್ಷ ಐಟಿ ಉದ್ಯೋಗಿಗಳಗೆ ಅವಕಾಶ.
*ಬ್ರಹ್ಮಾವರದ ವಾಣಿ ವಿಲಾಸ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನರಾರಂಭಕ್ಕೆ ಉತ್ತೇಜನ.
*ನಗರಗಳಲ್ಲಿ ಮಾಲಿನ್ಯ ರಹಿತ ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆಗಾಗಿ 2 ಚಕ್ರ ಮತ್ತು 3 ಚಕ್ರದ ಎಲೆಕ್ಟಿಕ್ ವಾಹನಗಳ ಖರೀದಿಗೆ ರಾಜ್ಯ ಜಿಎಸ್‌ಟಿ ಯಲ್ಲಿ ರಿಯಾಯಿತಿ.
* ಬಳ್ಳಾರಿ ಅಂತಾರಾಷ್ಟ್ರೀಯ ಗುಣಮಟ್ಟದ ಜೀನ್ ಬಟ್ಟೆಗಳ ರಾಷ್ಟ್ರೀಯ ಕೇಂದ್ರವಾಗುವಂತೆ ರೂ.5000 ಕೋಟಿಯ ಹೂಡಿಕೆಯೊಂದಿಗೆ ಅಪರಲ್ ಪಾರ್ಕ್ ನಿರ್ಮಿಸಿ ಉದ್ಯೋಗವನ್ನು ಹೆಚ್ಚಿಸಲು ಕ್ರಮ.
*ಐಟಿ ಕ್ಷೇತ್ರ ವಿಸ್ತರಣೆ- ರಾಜ್ಯದ ಜಿಡಿಪಿಯಲ್ಲಿ ಶೇ 25ರಷ್ಟು ಕೊಡುಗೆ ಹಾಗೂ ದೇಶದ ಐಟಿ ಕ್ಷೇತ್ರದಲ್ಲಿ ರಾಜ್ಯದ ಪಾಲು ಶೇ 33ರಷ್ಟು ಇರುವಂತೆ ನೋಡಿಕೊಳ್ಳಲು ಐಟಿ ಕ್ಷೇತ್ರ ವಿಸ್ತರಣೆಗೆ ಕ್ರಮ.
ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSME)
*ಸ್ಥಳೀಯ ಆರ್ಥಿಕತೆಯ ಉತ್ತೇಜನಕ್ಕಾಗಿ ಸಣ್ಣ ವ್ಯಾಪಾರಿಗಳಿಗೆ ಹಾಗೂ ಅಂಗಡಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು 1 ಸಾವಿರ ಕೋಟಿ ರೂಪಾಯಿಯ ಕಲ್ಯಾಣ ನಿಧಿ ಸ್ಥಾಪನೆ.
*ಹೆಚ್ಚಿನ ಎಂಎಸ್‌ಎಂಇಗಳು ಅದರಲ್ಲೂ ಮುಖ್ಯವಾಗಿ ಕಿರು ಉದ್ಯಮಗಳು ಸಾಲ ಪಡೆಯುವುದನ್ನು ಖಾತರಿಪಡಿಸಲು ರಾಜ್ಯ ಮಟ್ಟದ ಕ್ರೆಡಿಟ್ ಗ್ಯಾರಂಟಿ ಯೋಜನೆ ಜಾರಿ.












Click it and Unblock the Notifications