KSRTC ನಿವೃತ್ತ ನೌಕರರ ಪತ್ನಿಯರಿಗೆ ರಿಯಾಯಿತಿ ಬಸ್ ಪಾಸ್
ಬೆಂಗಳೂರು, ಡಿಸೆಂಬರ್ 30 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಿವೃತ್ತ ನೌಕರರ ಪತ್ನಿಯರಿಗೆ ರಿಯಾಯಿತಿ ದರದ ಬಸ್ ಪಾಸ್ ಗಳನ್ನು ನೀಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿರ್ಧರಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 500 ರೂ. ಪಾವತಿಸಿ ವಾರ್ಷಿಕ ಪಾಸ್ ಪಡೆದು ಸಾಮಾನ್ಯ ವೇಗದೂತ ಬಸ್ ಗಳಲ್ಲಿ ಪ್ರಯಾಣಿಸಲು ಮಾತ್ರ ಅವಕಾಶ ನೀಡಲಾಗಿದೆ.

ದರ್ಜೆ-೨ಕ್ಕೂ ಮೇಲ್ಪಟ್ಟ ನಿವೃತ್ತ ಅಧಿಕಾರಿಗಳ ಪತ್ನಿಯರಿಗೆ ರಾಜಹಂತ ಸೇರಿ ಎಲ್ಲಾ ಬಸ್ ಗಳಲ್ಲೂ ಶೇ.೫೦ರಷ್ಟು ಪ್ರಯಾಣದರ ಪಾವತಿಸಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.











Click it and Unblock the Notifications