ಪೊಲೀಸ್ ಅಧಿಕಾರಿ ಮೇಲೆ ಕೈ ಎತ್ತಿದ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

ಬೆಳಗಾವಿ, ಜೂನ್‌ 13: ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಏಪ್ರಿಲ್‌ 28 ರಂದು ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರ ಮೇಲೆ ಹೊಡೆಯಲು ಕೈ ಎತ್ತಿದ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆರ್.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ ಅವರು ಕ್ಯಾಂಪ್ ಪೊಲೀಸ್ ಠಾಣೆ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಗುರುವಾರ ದೂರು ನೀಡಿದ್ದಾರೆ.

ಸಮಾರಂಭದ ವೇದಿಕೆಯ ಮೇಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡುವಾಗ, ಬಿಜೆಪಿ ಕಾರ್ಯಕರ್ತೆಯರು ಪ್ರತಿಭಟಿಸಿದರು ಎಂಬ ಕಾರಣಕ್ಕೆ, ಸ್ಥಳದಲ್ಲಿದ್ದ ಧಾರವಾಡದ ಹೆಚ್ಚುವರಿ ಎಸ್.ಪಿ ನಾರಾಯಣ ಭರಮನಿ ಅವರ ಮೇಲೆ ಸಿಎಂ ಸಿದ್ದರಾಮಯ್ಯ ಅವರು ದರ್ಪ ತೋರಿದ್ದರು.

Complaint filed against Siddaramaiah for raising his hand on a police officer

ರಾಜ್ಯದ ಮುಖ್ಯಮಂತ್ರಿಯಾಗಿ ಜವಾಬ್ದಾರಿಯುತ ವ್ಯಕ್ತಿಯಾಗಿ ನಾಡಿನ ಸಮಸ್ತ ಚಿಂತನೆ-ಮಂಥನೆಗಳಿಗೆ ಧ್ವನಿಯಾಗುವುದರ ಮೂಲಕ ಕಾರ್ಯಾಂಗದ ಅಧಿಕಾರಿಗಳನ್ನು ಉತ್ತೇಜಿಸುವುದನ್ನು ಮರೆತು, ಅವರು ನಿರತ ಸಮಯದಲ್ಲಿ ಅವರಿಗೆ ಕೀಳರಿಯ ಪದಗಳನ್ನು ಬಳಕೆ ಮಾಡಿದ್ದಲ್ಲದೇ ಗದರಿಸುವ(ಹೆದರಿಸುವ) ಧ್ವನಿಯಲ್ಲಿ 'ಪೋಲಿಸ್ ಸಮವಸ್ತ್ರದ ಮೇಲಿರುವ ಅವರನ್ನು ಹೊಡೆಯಲು ಹೋಗಿ ಅವರ ಆತ್ಮಸ್ಥೆರ್ಯವನ್ನು ಕುಗ್ಗಿಸುವಂಥ ಕೆಲಸ ಮಾಡಿರುವ ಶಾಸಕಾಂಗದ ಮುಖ್ಯಸ್ಥರಾಗಿರುವ ಸಿದ್ದರಾಮಯ್ಯ ಅವರ ಈ ನಡೆಯು ಸಂಪೂರ್ಣವಾಗಿ ಸಂವಿಧಾನದ ಆಶಯಕ್ಕೆ ವಿರೋಧವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಾನೂನು ಸಚಿವರು ಸೇರಿದಂತೆ ಹಲವಾರು ಸಚಿವರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿಯೇ ಸಿದ್ದರಾಮಯ್ಯವರರು ಅಧಿಕಾರಿಗಳೊಂದಿಗೆ ಹೀಗೆ ನಡೆದುಕೊಂಡಿರುವುದು, ರಾಜ್ಯದ ಇತರ ಇಲಾಖೆಗಳ ಹಿರಿಯ/ ಕಿರಿಯ ಅಧಿಕಾರಗಳೆಲ್ಲರೂ ಭಯ ಪಡುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿರುವ ಅವರು, ಘಟನೆಗೆ ಸಂಬಂಧಿಸಿದಂತೆ ಲಭ್ಯವಿರುವ ವೀಡಿಯೋ ದೃಶ್ಯಾವಳಿಗಳ ಸಿ.ಡಿ ಮತ್ತು ಪತ್ರಿಕಾ ವರದಿಗಳನ್ನು ಸಹ ಲಗತ್ತಿಸಿದ್ದು, "ಭಾರತೀಯ ನ್ಯಾಯ ಸಂಹಿತೆ-2023"ರ ಕಲಂ 132ರ ಅಡಿಯಲ್ಲಿ ಸಿದ್ದರಾಮಯ್ಯ ಅವರ ಮೇಲೆ ಪ್ರಕರಣ ದಾಖಲಿಸುವಂತೆ ದೂರು ನೀಡಿದ್ದಾರೆ.

ಎರಡು ವರ್ಷ ಜೈಲು ಶಿಕ್ಷೆ

ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 132ರ ಪ್ರಕಾರ ಸಾರ್ವಜನಿಕ ಸೇವಕನಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುವಾಗ ಅಥವಾ ಆ ವ್ಯಕ್ತಿಯು ಸಾರ್ವಜನಿಕ ಸೇವಕನಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುವುದನ್ನು ತಡೆಯುವ ಉದ್ದೇಶದಿಂದ ಅಥವಾ ಅಂತಹ ಸಾರ್ವಜನಿಕ ಸೇವಕನಾಗಿ ತನ್ನ ಕರ್ತವ್ಯವನ್ನು ಕಾನೂನು ಬದ್ದವಾಗಿ ನಿರ್ವಹಿಸುವಾಗ ಅಂಥಹ ವ್ಯಕ್ತಿಯು ಮಾಡಿದ ಅಥವಾ ಮಾಡಲು ಪ್ರಯತ್ನಿಸಿದ ಪರಿಣಾಮವಾಗಿ, ಸಾರ್ವಜನಿಕ ಸೇವಕನಾಗಿರುವ ಯಾವುದೇ ವ್ಯಕ್ತಿಯ ಮೇಲೆ ಹಲ್ಲೆ ನಡೆಸುವ ಅಥವಾ ಬಲ ಪ್ರಯೋಗ ಮಾಡುವ ಯಾವುದೇ ವ್ಯಕ್ತಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ವರೆಗೆ ಯಾವುದೇ ರೀತಿಯ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+