ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಯಲ್ಲಿ ಪಾಲ್ಗೊಳ್ಳಲು ವಿಮಾನದಲ್ಲಿ ಹುಬ್ಬಳ್ಳಿಗೆ ಹೊರಟ 'ಕಾಮನ್ ಮ್ಯಾನ್'

|
Google Oneindia Kannada News

ಬೆಂಗಳೂರು, ಡಿ.1: ಕೋವಿಡ್ ಆತಂಕ ತೀವ್ರವಾಗುತ್ತಿರುವ ಸಂದರ್ಭದಲ್ಲಿಯೇ ಸ್ವಯಂ ಘೋಷಿತ 'ಕಾಮನ್ ಮ್ಯಾನ್' ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾಸಗಿ ಕಾರ್ಯಕ್ರಮಕ್ಕೆ ಒತ್ತು ನೀಡಿದ್ದಾರೆ.

ಕೋವಿಡ್‌ ರೂಪಾಂತರಿ ಓಮಿಕ್ರಾನ್ ಆತಂಕ ಇರುವುದರಿಂದ ಸರ್ಕಾರ ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸುವಂತೆ ಜನಸಾಮಾನ್ಯರಿಗೆ ಸೂಚಿಸಿದೆ. ಶಾಲಾ-ಕಾಲೇಜುಗಳಲ್ಲಿ ನಡೆಯುವ ಸೆಮಿನಾರ್‌ಗಳನ್ನು ರದ್ದು ಮಾಡಲಾಗಿದೆ. ಮದುವೆ ಮುಂತಾದ ಸಮಾರಂಭಗಳಿಗೆ ಇನ್ನೂ ಬ್ರೇಕ್ ಹಾಕದಿದ್ದರೂ ಸಹ ಹೆಚ್ಚಿನ ಜನರನ್ನು ಸೇರಿಸಿಬೇಡಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂಬ ಮೌಖಿಕ ಸೂಚನೆ ನೀಡಿದೆ. ಈ ಮಧ್ಯೆ ಮುಖ್ಯಮಂತ್ರಿಗಳೇ ಮದುವೆಗಾಗಿ ತಮ್ಮ ಇಡೀ ಒಂದು ದಿನದ ಸಮಯ ಮೀಸಲಿಟ್ಟು ಪ್ರಯಾಣ ಮಾಡುತ್ತಿದ್ದಾರೆ.

ಮುಖ್ಯಮಂತ್ರಿಯ ಅಧಿಕೃತ ಕಾರ್ಯಕಲಾಪ ಪಟ್ಟಿಯನ್ನು ನೋಡಿದಾಗ ಮದುವೆಗಳು, ಆರತಕ್ಷತೆ, ಗೃಹ ಪ್ರವೇಶದಂತಹ ಕಾರ್ಯಕ್ರಮಗಳಿಗೆ ಯಾವುದೇ ಕೊರತೆ ಇರುವುದಿಲ್ಲ. ವಾರದಲ್ಲಿ ಮೂರ್ನಾಲ್ಕು ದಿನವಾದರೂ ಇಂತಹ ಖಾಸಗಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡೇ ಇರುತ್ತಾರೆ. ಇದನ್ನು ಪ್ರತಿಪಕ್ಷಗಳು ಎತ್ತಿ ತೋರಿಸಿದರೂ ಮುಖ್ಯಮಂತ್ರಿ ಅದಕ್ಕೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

Common man Basavaraj bommai fly hubli for weddings

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ (ಡಿ.1) ಹುಬ್ಬಳ್ಳಿ ಧಾರವಾಡ ಪ್ರವಾಸ ಹಮ್ಮಿಕೊಂಡಿದ್ದಾರೆ. ಅವರು ನೀಡಿರುವ ಪ್ರವಾಸ ಪಟ್ಟಿಯನ್ನೇ ನೋಡಿದರೆ ಯಾವುದೇ ಸರ್ಕಾರಿ ಸಭೆ, ಕಾರ್ಯಕ್ಮಮಗಳು ಇಲ್ಲ. ಎರಡು ಮದುವೆ ಇವೆ. ಹೀಗೆ ಖಾಸಗಿ ಕಾರ್ಯಕ್ರಮಗಳಿಗಾಗಿ ಮುಖ್ಯಮಂತ್ರಿ ಇಡೀ ದಿನ ಪ್ರವಾಸ ಮಾಡುತ್ತಿದ್ದಾರೆ. ಇದು ಸರ್ಕಾರಿ ಕಾರ್ಯಕ್ರಮ ಸೇರಿರುವುದಿಲ್ಲ, ಇದು ಅಧಿಕೃತ ಪ್ರವಾಸ ಪಟ್ಟಿಯಲ್ಲಿ ಸೇರಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಎರಡು ಮದುವೆ: ವಿಮಾನ ಪ್ರಯಾಣ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣ ಮೂಲಕ ಇಂಡಿಗೋ ವಿಮಾನದಲ್ಲಿ ಬೆಳಗ್ಗೆ 6.05ಕ್ಕೆ ಹುಬ್ಬಳ್ಳಿಗೆ ಪ್ರಯಾಣ ಬೆಳಸಿದಿದ್ದಾರೆ. ಬೆಳಗ್ಗೆ 7.30ಕ್ಕೆ ಹುಬ್ಬಳ್ಳಿ ತಲುಪಲಿದ್ದಾರೆ. ಬಳಿಕ ಅವರ ಸಮಯವನ್ನು ಕಾಯ್ದಿರಿಸಲಾಗಿದೆ.

ಬೆಳಗ್ಗೆ 11.30ಕ್ಕೆ ಹುಬ್ಬಳ್ಳಿಯ ಅಶೋಕನಗರ ಹತ್ತಿರ ನವನಿಕೇತನ ಸಭಾಭವನದಲ್ಲಿ ನಡೆಯುವ ಮದುವೆ ಕಾರ್ಯಕ್ರಮದಲ್ಲಿ ಸಿಎಂ ಪಾಲ್ಗೊಳ್ಳಲಿದ್ದಾರೆ. ಧಾರವಾಡ ಜಿಲ್ಲಾ ಬಿಜೆಪಿ ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾ ಸಂಚಾಲಕ ವೀರಣ್ಣ ಬಿ. ಕುಬಸದ ಅವರ ಪುತ್ರಿ ರೋಷಿನಿ ಮತ್ತು ಮಂಜು ಗಣೇಶ್ ಆರ್. ಎಂಬುವವರ ವಿವಾಹ ನಡೆಯಲಿದೆ.

ಬಳಿಕ ಮಧ್ಯಾಹ್ನ 12.10ಕ್ಕೆ ರಸ್ತೆ ಮೂಲಕ ಧಾರವಾಡದತ್ತ ಪ್ರಯಾಣ ಬೆಳಸಲಿದ್ದಾರೆ. ಇಲ್ಲಿನ ಡಾ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆಯುವ ಆಶಾ ಮತ್ತು ಕಾಶೀನಾಥ ಅ. ಹಾದಿಮನಿ ಇವರ ಪುತ್ರಿ ನಮ್ರತಾ ಮತ್ತು ರೋಹಿತ್ ಇವರ ವಿವಾಹ ಸಮಾರಂಭದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳಲಿದ್ದಾರೆ.

ಈ ಮದುವೆ ಕಾರ್ಯಕ್ರಮದ ನಂತರ ಮುಖ್ಯಮಂತ್ರಿಗಳ ಸಮಯ ಕಾಯ್ದಿರಿಸಲಾಗಿದೆ. ಬಳಿಕ ರಾತ್ರಿ 8.15ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನದಲ್ಲಿ ಹೊರಟು ರಾತ್ರಿ 9.35ಕ್ಕೆ ಬೆಂಗಳೂರು ತಲುಪಲಿದ್ದಾರೆ.

Recommended Video

ಸರ್ಕಾರದ ನಿರ್ಧಾರ ಎನ್ ಗೊತ್ತಾ? | Oneindia Kannada

English summary
Chief Minister Basavaraj Bommai will visit the Hubli Dharwad on Wednesday. 'Common Man' chief minister Basavaraja Bommai has emphasized the private program while Kovid is worried.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X