ಕರ್ನಾಟಕದಲ್ಲಿ ಕಾಲೇಜುಗಳು ಪುನಾರಂಭ: ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಹಾಜರ್
ಬೆಂಗಳೂರು, ನವೆಂಬರ್ 17: ಕರ್ನಾಟಕದಲ್ಲಿ 8 ತಿಂಗಳ ಬಳಿಕ ಕರ್ನಾಟಕ ಕಾಲೇಜುಗಳು ಆರಂಭವಾಗಿದ್ದು, ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ತರಗತಿಗಳಿಗೆ ಹಾಜರಾಗಿದ್ದಾರೆ.
Recommended Video
ಕೊರೊನಾ ಹಾವಳಿಯಿಂದಾಗಿ ಕಾಲೇಜುಗಳನ್ನು ಮುಚ್ಚಲಾಗಿತ್ತು. ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿರುವ ಕಾರಣ ಕಾಲೇಜುಗಳು ಪುನರಾರಂಭಗೊಂಡಿವೆ.
ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಕಾಲೇಜಿಗೆ ಬರುವಂತೆ ತಿಳಿಸಲಾಗಿದ್ದು, ಉಳಿದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಸಾಕಷ್ಟು ಕಡೆಗಳಲ್ಲಿ ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರಲು ಸಾಧ್ಯವಾಗಿಲ್ಲ, ಕೆಲವು ಪೋಷಕರು ಕಾಲೇಜುಗಳಿಗೆ ಕಳುಹಿಸಿಲ್ಲ, ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ಬಸ್ ಸೇರಿದಂತೆ ವಾಹನಗಳ ಸೌಲಭ್ಯ ಲಭ್ಯವಿರದ ಕಾರಣ ಕಾಲೇಜುಗಳಿಗೆ ಬಂದಿಲ್ಲ, ಹಾಗೂ ಕೆಲವು ವಿದ್ಯಾರ್ಥಿಗಳು ಕೊರೊನಾ ಪರೀಕ್ಷೆ ಮಾಡಿಸಿದ್ದು ವರದಿ ಕೈಸೇರುವುದು 3 ದಿನಗಳು ಹಿಡಿಯುವುದರಿಂದ ಕಾಲೇಜಿಗೆ ಬರಲು ತಡವಾಗುತ್ತಿದೆ.
ಈಗ ಕೇವಲ ಶೇ. 20-30 ವಿದ್ಯಾರ್ಥಿಗಳು ಕಾಲೇಜುಗಳಿಗೆ ಬಂದಿದ್ದಾರೆ.ಶೈಕ್ಷಣಿಕ ಚಟುವಟಿಕೆಗಳನ್ನು ಆರಂಬಿಸಲು ತರಗತಿ ಕೊಠಡಿಗಳು, ಹಾಸ್ಟೆಲ್ ಕೊಠಡಿಗಳು, ಶೌಚಾಲಯ, ಪ್ರಯೋಗಾಲಯಗಳ ಸ್ವಚ್ಛತೆಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.
ಮೊದಲ ಹಂತದಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಖುದ್ದು ತರಗತಿ ಹಾಜರಾತಿಗೆ ಅವಕಾಶ ನೀಡಲಾಗಿದೆ.
ಉಳಿದ ವರ್ಷಗಳ ವ್ಯಾಸಾಂಗದ ವಿದ್ಯಾರ್ಥಿಗಳಿಗೆ ಸದ್ಯಕ್ಕೆ ಆನ್‌ಲೈನ್ ಶಿಕ್ಷಣ ನೀಡಲು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ತೀರ್ಮಾನ ಕೈಗೊಂಡಿವೆ. ಹಂತ ಹಂತವಾಗಿ ಎಲ್ಲಾ ವಿದ್ಯಾರ್ಥಿಗಳು ಭೌತಿಕ ತರಗತಿ ಆರಂಭಿಸುವುದಾಗಿ ತಿಳಿಸಿವೆ.
ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ತಮ್ಮ ಪೋಷಕರಿಂದ ಲಿಖಿತ ಒಪ್ಪಿಗೆ ಪತ್ರ ನೀಡಬೇಕಿದೆ. ಬೋಧಕ ವರ್ಗ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು 72 ಗಂಟೆ ಮುಂಚಿತವಾಗಿ ಕೊವಿಡ್-19 ಆರ್'ಟಿಪಿಸಿಆರ್ ಪರೀಕ್ಷೆಗೊಳಗಾಗಿ ನೆಗೆಟಿವ್ ವರದಿ ನೀಡಬೇಕು ಎಂದು ಸೂಚಿಸಿವೆ.
ತರಗತಿಗೆ ಹಾಜರಾಗುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಿರಬೇಕು, ಕಾಲೇಜು ಆವರಣ, ತರಗತಿಗಳಲ್ಲಿ ವಿದ್ಯಾರ್ಥಿಗಳು ಗುಂಪೂಗೂಡದೆ ಕನಿಷ್ಠ ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪೋಷಕರ ಒಪ್ಪಿಗೆ ಪತ್ರ ಹಾಗೂ ಕೋವಿಡ್ ಪರೀಕ್ಷೆ ಮಾಡಿಸದ ವಿದ್ಯಾರ್ಥಿಗಳು ಹಾಜರಾತಿ ನೀಡಲಾಗುವುದಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.












Click it and Unblock the Notifications