ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಇಲಾಖೆ ವಿಲೀನ, ಆದೇಶ

ಬೆಂಗಳೂರು, ಮಾರ್ಚ್‌ 29; ಕರ್ನಾಟಕ ಸರ್ಕಾರ ಆಡಳಿತ ವೆಚ್ಚವನ್ನು ಕಡಿಮೆ ಮಾಡಲು ಹಲವು ಇಲಾಖೆಗಳ ವಿಲೀನದ ಪ್ರಸ್ತಾಪವನ್ನು ಮಾಡಿತ್ತು, ಈ ಕುರಿತ ಪ್ರಕ್ರಿಯೆಗಳು ಸಹ ಆರಂಭವಾಗಿದ್ದವು. ಈಗ ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಇಲಾಖೆಯನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ವಿಲೀನಗೊಳಿಸುವ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ.

ಬುಧವಾರ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ ಎಂ. ರಾಜಮ್ಮ ಈ ಕುರಿತು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಕಾಯ್ದೆಯು 1959ರಲ್ಲಿ ಜಾರಿಗೆ ಬಂದಿರುತ್ತದೆ, ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಇಲಾಖೆಯು 1977ರಲ್ಲಿ ಸಹಕಾರ ಇಲಾಖೆಯಿಂದ ಬೇರ್ಪಟ್ಟು ಒಂದು ಸ್ವಾಯತ್ತ ಇಲಾಖೆಯಾಗಿ ಆಸ್ತಿತ್ವಕ್ಕೆ ಬಂದಿರುತ್ತದೆ ಎಂದು ತಿಳಿಸಲಾಗಿದೆ.

Co Operative Audit Department To Merge With State Audit And Accounts Department

2013ರಲ್ಲಿ ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿಯಲ್ಲಿ ಆಡಿಟ್‌ ಪ್ಯಾನಲ್‌ಗಳ ಮೂಲಕ ಸನ್ನದು ಲೆಕ್ಕಪರಿಶೋಧಕರು/ ಸನ್ನದು ಲೆಕ್ಕಪರಿಶೋಧಕರ ಸಂಸ್ಥೆ/ ಇಲಾಖಾ ಆಧಿಕಾರಿ/ ಲೆಕ್ಕಪರಿಶೋಧಕರುಗಳನ್ನು ಸಹಕಾರ ಸಂಘಗಳು ತಮ್ಮ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಿರುವುದರಿಂದ ಇಲಾಖೆಯ ಲೆಕ್ಕಪರಿಶೋಧಕರು ಕೈಗೊಳ್ಳುತ್ತಿರುವ ಲೆಕ್ಕಪರಿಶೋಧನೆಯು ಇಳಿಮುಖವಾಗುತ್ತಿದೆ.

ವೇತನ ಆಯೋಗದ ವರದಿ ಶಿಫಾರಸು; ಆರನೇ ವೇತನ ಆಯೋಗದ ವರದಿಯಲ್ಲಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಗಳ ಕಾರ್ಯಗಳು ಒಂದೇ ರೀತಿಯಾಗಿರುವುದರಿಂದ ಎರಡೂ ಇಲಾಖೆಗಳನ್ನು ವಿಲೀನಗೊಳಿಸುವ ಸಂಬಂಧ ಶಿಫಾರಸು ಮಾಡಿರುತ್ತದೆ. ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಮತ್ತು ರಾಜ್ಯ ಲೆಕ್ಕಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆಯ ಕಾರ್ಯವೈಖರಿಯು ಒಂದೇ ತೆರನಾಗಿರುವುದರಿಂದ ಈ ಎರಡೂ ಇಲಾಖೆಗಳನ್ನು ವಿಲೀನಗೊಳಿಸಬಹುದೆಂದೂ ಸಹ ಆಯೋಗದ ಅಭಿಪ್ರಾಯವಾಗಿದೆ.

Co Operative Audit Department To Merge With State Audit And Accounts Department

ಈ ಕುರಿತು ಗಮನಿಸಬೇಕಾದ ಅಂಶವು ರಾಜ್ಯ ಲೆಕ್ಕಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆಯ ಪ್ರಮುಖ ಕಾರ್ಯವು ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನೆಯನ್ನು ನಿಭಾಯಿಸುವುದಾಗಿರುತ್ತದೆ. ಯಾವುವು ಈಗ ಡಬಲ್ ಎಂಟ್ರಿ ಸಿಸ್ಟಮ್‌ ಅನ್ನು ಆಳಪಡಿಸಿಕೊಂಡಿರುತ್ತವೆ. ಸಹಕಾರ ಸಂಘಗಳೂ ಸಹ ಹಲವಾರು ವರ್ಷಗಳಿಂದ ಡಬಲ್ ಎಂಟ್ರಿ ಸಿಸ್ಟಮ್‌ ಅನ್ನು ಅನುಸರಿಸುತ್ತವೆ. ಸ್ಥಳೀಯ ಸಂಸ್ಥೆಗಳು ಮತ್ತು ಸಹಕಾರ ಸಂಘ ಎರಡೂ ಸಂಸ್ಥೆಗಳ ಲೆಕ್ಕಪರಿಶೋಧನೆಗೆ ಸಮಾನವಾದ ಕೌಶಲ್ಯ ಮತ್ತು ಅನುಭವದ ಆಗತ್ಯವಿರುತ್ತದೆ, ಸಹಕಾರ ಸಂಘಗಳು ಈಗ ತನ್ನ ಲೆಕ್ಕಪತ್ರ ನಿರ್ವಹಣೆಗೆ ಅನುಮೋದಿತ ಚಾರ್ಟಡ್್ರ ಆಕೌಂಟೆಂಟ್‌ಗಳನ್ನು ಹೊಂದಲು ಅಥವಾ ಲೆಕ್ಕಪರಿಶೋಧನಾ ಇಲಾಖೆಯಿಂದ ನಿರ್ವಹಿಸಲು ಆದೇಶ ಪಡದುಕೊಂಡಿವೆ.

ಇದರಿಂದಾಗಿ ಇಲಾಖೆಯ ಕಾರ್ಯಬಾಹುಳ್ಯದಲ್ಲಿ ಗಮನಾರ್ಹ ಇಳಿಕೆ ಉಂಟಾಗಿದ್ದರಿಂದ ಪ್ರತ್ಯೇಕ ಇಲಾಖೆಯಾಗಿ ಮುಂದುವರೆಸುವುದು ಸಮರ್ಥನೀಯವಾಗಲಾರದು. ಕರ್ನಾಟಕ ಲೆಕ್ಕಪರಿಶೋಧನ ಮತ್ತು ಲೆಕ್ಕಪತ್ರ ಇಲಾಖೆಯ ಪ್ರಮುಖ ಕಾರ್ಯವು ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನೆಯನ್ನು ನಿಭಾಯಿಸುವುದಾಗಿರುತ್ತದೆ. ಅದೇ ರೀತಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಪ್ರಮುಖ ಕಾರ್ಯವು ಸಹಕಾರ ಸಂಘಗಳಲ್ಲಿನ ಲೆಕ್ಕಪರಿಶೋಧನೆಯನ್ನು ನಿಭಾಯಿಸುವುದಾಗಿರುತ್ತದೆ.

ಸ್ಥಳೀಯ ಸಂಸ್ಥೆಗಳು ಮತ್ತು ಸಹಕಾರ ಸಂಘ, ಎರಡೂ ಸಂಸ್ಥೆಗಳ ಲೆಕ್ಕಪರಿಶೋಧನೆಗೆ ಸಮಾನವಾದ ಕೌಶಲ್ಯ ಮತ್ತು ಅನುಭವದ ಅಗತ್ಯವಿರುತ್ತದೆ. ಸಹಕಾರ ಸಂಘಗಳು ತಮ್ಮ ಲೆಕ್ಕಪತ್ರ ನಿರ್ವಹಣೆಗೆ ಚಾರ್ಟಡ್ ಅಕೌಂಟೆಂಟ್‌ಗಳನ್ನು ಹೊಂದಲು ಅಥವಾ ಲೆಕ್ಕಪರಿಶೋಧನಾ ಇಲಾಖೆಯಿಂದ ನಿರ್ವಹಿಸಲು ಅವಕಾಶ ಪಡೆದುಕೊಂಡಿವೆ. ಇದರಿಂದಾಗಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಕೈಗೊಂಡ ಲೆಕ್ಕಪರಿಶೋಧನೆಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಇಳಿಕೆಯಾಗಿರುತ್ತದೆ.

ಆದರೆ, ಚಾರ್ಟಡ್ ಅಕೌಂಟೆಂಟ್‌ಗಳು ಕೈಗೊಂಡ ಲೆಕ್ಕಪರಿಶೋಧನೆಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿರುತ್ತದೆ. ಆದ್ದರಿಂದ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಒಂದು ಪ್ರತ್ಯೇಕ ವಿಭಾಗವಾಗಿ ವಿಲೀನಗೊಳಿಸುವುದರಿಂದ ಎರಡೂ ಇಲಾಖೆಗಳ ಅಧಿಕಾರಿ/ ನೌಕರರ ಸೇವಾ ವಿಷಯ ಹಾಗೂ ಜೇಷ್ಠತೆಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಅಂಶಗಳ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಒಂದು ಪ್ರತ್ಯೇಕ ವಿಭಾಗವಾಗಿ ವಿಲೀನಗೊಳಿಸಲು ಹಾಗೂ ಇಲಾಖಾ ಲೆಕ್ಕಪರಿಶೋಧಕರಿಂದ ಲೆಕ್ಕ ಪರಿಶೋಧನೆ ಕೈಗೊಳ್ಳಲು ಆಯ್ಕೆ ಮಾಡಿಕೊಂಡಲ್ಲಿ ಅಂತಹ ಸಹಕಾರ ಸಂಘಗಳ ಲೆಕ್ಕಪರಿಶೋಧನೆಯನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಇಲಾಖೆಯಲ್ಲಿ ವಿಲೀನಗೂಂಡ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಸಿಬ್ಬಂದಿಗಳಿಂದ ನಿರ್ವಹಿಸಲು ತೀರ್ಮಾನಿಸಿ ಈ ಆದೇಶವನ್ನು ಹೊರಡಿಸಲಾಗಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಒಂದು ಪ್ರತ್ಯೇಕ ವಿಭಾಗವಾಗಿ ವಿಲೀನಗೊಳಿಸಿದೆ ಹಾಗೂ ಇಲಾಖಾ ಲೆಕ್ಕಪರಿಶೋಧಕರಿಂದ ಲೆಕ್ಕ ಪರಿಶೋಧನೆ ಕೈಗೊಳ್ಳಲು ಆಯ್ಕೆ ಮಾಡಿಕೊಂಡಂತಹ ಸಹಕಾರ ಸಂಘಗಳ ಲೆಕ್ಕಪರಿಶೋಧನೆಯನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಇಲಾಖೆಯಲ್ಲಿ ವಿಲೀನಗೊಂಡ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಸಿಬ್ಬಂದಿಗಳಿಂದ ನಿರ್ವಹಿಸಲು ಆದೇಶಿಸಿದೆ ಎಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+