ಸಿದ್ದಾರಾಮಯ್ಯನವರಿಂದ ಯಾಕೆ ಆವಾಗಾವಾಗ ಇಂಥಾ ಎಡವಟ್ಟುಗಳು?

ತುಂಬಿ ಕೂತ ಸಾರ್ವಜನಿಕ ಸಭೆಯ ವೇದಿಕೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ದೆಗೆ ಶರಣಾಗುವ ದೃಶ್ಯವನ್ನು ಅದೆಷ್ಟೋ ಬಾರಿ ಕನ್ನಡಿಗರು ಕಣ್ತುಂಬಿಸಿಕೊಂಡಾಗಿದೆ.

ಇದರ ಜೊತೆಗೆ ವೇದಿಕೆಯಲ್ಲಿ ಪ್ರಮುಖವಾಗಿ ಬಿಜೆಪಿ ಮತ್ತು ಪ್ರಧಾನಿ ಮೋದಿಯವರನ್ನು ಟೀಕಿಸುವ ಭರದಲ್ಲಿ ಸ್ವಪಕ್ಷೀಯರನ್ನೇ ಸಿದ್ದರಾಮಯ್ಯ ಆವಾಗಾವಾಗ ತರಾಟೆಗೆ ತೆಗೆದುಕೊಳ್ಳುವ ಉದಾಹರಣೆಗಳು ಹೆಚ್ಚುತ್ತಲೇ ಇದೆ. (ಸಿದ್ದು ಮಾತಿಗೆ ಕಾಂಗ್ರೆಸ್‌ನಲ್ಲಿ ಕಿಮ್ಮತ್ತಿಲ್ಲ)

ಒಂದೆರಡು ಬಾರಿ ಆದರೆ ಪರವಾಗಿಲ್ಲ, ಆದರೆ ಪದೇಪದೇ ಸ್ವಪಕ್ಷೀಯರನ್ನೇ ಟೀಕಿಸಿ, ನಂತರ ವೇದಿಕೆಯಲ್ಲಿದ್ದವರು ಎಚ್ಚರಿಸಿದ ನಂತರ ಸಾರಿ..ಸಾರಿ.. ಎಂದು ಮುಖ್ಯಮಂತ್ರಿಗಳು ಯಾಕೀ ಅಚಾತುರ್ಯ ಮಾಡುತ್ತಿರಬಹುದು ಎನ್ನುವುದೇ ಪ್ರಶ್ನೆ?

ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಹಿಂದಿನ ಯುಪಿಎ ಸರಕಾರದ ಆಡಳಿತ ವೈಖರಿಗೆ ಪರೋಕ್ಷವಾಗಿ ಬಿಸಿಮುಟ್ಟಿಸಲು ಉದ್ದೇಶಪೂರ್ವಕವಾಗಿಯೇ ಸಿದ್ದರಾಮಯ್ಯ ಈ ರೀತಿ ಮಾಡುತ್ತಿದ್ದಾರಾ ಎನ್ನುವ ಸಂಶಯ ಕಾಡದೇ ಇರದು. (ಪುತ್ರನ ರಾಜಕೀಯ ಪ್ರವೇಶದ ಬಗ್ಗೆ ಸಿದ್ದರಾಮಯ್ಯ)

ಇದರ ಜೊತೆಗೆ ಹೆಸರನ್ನು ಕೂಡಾ ತಪ್ಪಾಗಿ ಸಂಭೋದಿಸುವ ಎಡವಟ್ಟೂ ಮುಖ್ಯಮಂತ್ರಿಗಳಿಂದಾಗುತ್ತಿದೆ. ಮೊನ್ನೆ ಹೆಬ್ಬಾಳದಲ್ಲಿ ನಡೆದ ಪಕ್ಷದ ಸಭೆಯಲ್ಲೂ ಬಿಬಿಎಂಪಿಯನ್ನು ಬಿಜೆಪಿ ದಿವಾಳಿ ಮಾಡಿದೆ ಎನ್ನುವ ಬದಲು, ಕಾಂಗ್ರೆಸ್ ಸಾಲ ಮಾಡಿದೆ ಎಂದು ಮತ್ತು ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯೆಂದು ಪ್ರಸ್ತಾವಿಸಿ ನಂತರ ಎಚ್ಚೆತ್ತುಕೊಂಡಿದ್ದರು. ಮುಂದಿನ ಪುಟದಲ್ಲಿ ಓದಿ..

ಪ್ರಧಾನಿಯನ್ನು ಗಾಂಧಿ ವಂಶಕ್ಕೆ ಸೇರಿಸಿದ್ದರು

ಪ್ರಧಾನಿಯನ್ನು ಗಾಂಧಿ ವಂಶಕ್ಕೆ ಸೇರಿಸಿದ್ದರು

ಈ ಹಿಂದೆ ತಮ್ಮ ಸ್ವಕ್ಷೇತ್ರ ವರುಣಾದಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, "ಕಾಂಗ್ರೆಸ್ ಗೆಲುವಿಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಗಾಂಧಿ ಅವರ ಶ್ರಮ" ಸಹ ಕಾರಣ ಎಂದು ಹೇಳಿದ್ದರು.

ಕಾಂಗ್ರೆಸ್ಸಿಗರಿಂದ ಸುಳ್ಳನ್ನು ಸತ್ಯವನ್ನಾಗಿ ಮಾಡುವ ಪ್ರಯತ್ನ

ಕಾಂಗ್ರೆಸ್ಸಿಗರಿಂದ ಸುಳ್ಳನ್ನು ಸತ್ಯವನ್ನಾಗಿ ಮಾಡುವ ಪ್ರಯತ್ನ

ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಈ ಕಾಂಗ್ರೆಸ್ಸಿಗರು 1 ಸುಳ್ಳನ್ನು 100 ಬಾರಿ ಹೇಳಿ ಸತ್ಯವನ್ನಾಗಿ ಮಾಡುವ ಪ್ರಯತ್ನ ಮಾಡುತ್ತಾರೆ, ಸುಳ್ಳು ಆರೋಪಗಳನ್ನು ಮಾಡಿ ಅದನ್ನು ಪದೇ ಪದೇ 100 ಬಾರಿ ಹೇಳಿ ಸತ್ಯವನ್ನಾಗಿ ಮಾಡುತ್ತಾರೆ ಎಂದು ಯಡವಟ್ಟು ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

 ಬದುಕಿರುವಾಗಲೇ ಸಂತಾಪ ಸೂಚಿಸಿದ ಸಿದ್ದರಾಮಯ್ಯ

ಬದುಕಿರುವಾಗಲೇ ಸಂತಾಪ ಸೂಚಿಸಿದ ಸಿದ್ದರಾಮಯ್ಯ

ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವಿಧಾನಸಭೆ ಮಾಜಿ ಸ್ಪೀಕರ್ ಎಂ ವಿ ವೆಂಕಟಪ್ಪ ಅವರಿಗೆ ಸಾಯುವ ಮುನ್ನವೇ ಸಿಎಂ ಸಂತಾಪ ಸೂಚಿಸಿದ್ದರು. ಮುಖ್ಯಮಂತ್ರಿಯವರ ಮಾಧ್ಯಮ ವಿಭಾಗ ಮಾಡಿದ ಎಡವಟ್ಟು ಇದಕ್ಕೆ ಕಾರಣವಾಗಿತ್ತು.

ಕಚ್ಚಾತೈಲದ ಬೆಲೆ ಗಣನೀಯವಾಗಿ ಕುಸಿತ

ಕಚ್ಚಾತೈಲದ ಬೆಲೆ ಗಣನೀಯವಾಗಿ ಕುಸಿತ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಗಣನೀಯವಾಗಿ ಕುಸಿದಿದ್ದರೂ ಕೇಂದ್ರದ ಮನಮೋಹನ್ ಸಿಂಗ್ ಸರಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಕಡಿಮೆ ಮಾಡುತ್ತಿಲ್ಲ ಎಂದರು, ಸರ್ ಅದು ಮೋದಿ ಸರಕಾರ ಎಂದು ವೇದಿಕೆಯಲ್ಲಿದ್ದವರು ಎಚ್ಚರಿಸಿದ ಮೇಲೆ ಸಿದ್ದುಗೆ ತಮ್ಮ ತಪ್ಪಿನ ಅರಿವಾಗಿದ್ದು.

ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ

ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ

ತಮ್ಮ ಭಾಷಣದಲ್ಲಿ ಬಿಜೆಪಿಯನ್ನು, ಬಿಜೆಪಿಯ ರೈತ ಚೈತನ್ಯ ಯಾತ್ರೆಯನ್ನು ತರಾಟೆಗೆ ತೆದುಕೊಳ್ಳುತ್ತಿದ್ದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಮಾತಿನ ಭರದಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರೈತರ ಹಿತ ಮರೆತಿದ್ದಾರೆ ಎಂದರು. ಹಿಂದೆ ಕುಳಿತಿದ್ದ ಸಚಿವ ಎಚ್.ಕೆ ಪಾಟೀಲ್ ಮೋದಿ ಎಂದು ಹೇಳಿ ಭಾಷಣವನ್ನು ಸರಿದಾರಿಗೆ ತಂದರು.

ಕಾಂಗ್ರೆಸ್ಸಿನವರು ಸಾಲ ಮಾಡುವುದರಲ್ಲಿ ನಿಸ್ಸೀಮರು

ಕಾಂಗ್ರೆಸ್ಸಿನವರು ಸಾಲ ಮಾಡುವುದರಲ್ಲಿ ನಿಸ್ಸೀಮರು

ಕಾಂಗ್ರೆಸ್ಸಿನವರು ಸಾಲ ಮಾಡುವುದರಲ್ಲಿ ನಿಸ್ಸೀಮರು. ಅವರು ಮಾಡಿದ ಸಾಲವನ್ನು ನಾವು ತೀರಿಸುತ್ತಿದ್ದೇವೆ. ಬಿಬಿಎಂಪಿ ಅಡವಿಟ್ಟಿದ್ದ ಎರಡು ಕಟ್ಟಡಗಳನ್ನು ಬಿಡಿಸಿಕೊಂಡಿದ್ದೇವೆಂದು ಸಿದ್ದರಾಮಯ್ಯ ಕಳೆದ ಭಾನುವಾರ (ಜ 31) ಹೆಬ್ಬಾಳದ ಚುನಾವಣೆಯ ಸಭೆಯಲ್ಲಿ ಹೇಳಿ, ತಮ್ಮ ತಪ್ಪನ್ನು ಮತ್ತೆ ಸರಿಪಡಿಸಿಕೊಂಡರು.

ಇಂದಿರಾ ಗಾಂಧಿ ಪುಣ್ಯಸ್ಮರಣೆ

ಇಂದಿರಾ ಗಾಂಧಿ ಪುಣ್ಯಸ್ಮರಣೆ

ಇಂದಿರಾ ಗಾಂಧಿಯವರ 97ನೇ ಜನ್ಮದಿನದ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಎನ್ನುವ ಬದಲು, ದಿವಂಗತ ಮಾಜಿ ಪ್ರಧಾನಿ ಸೋನಿಯಾ ಗಾಂಧಿ ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+