ಗೃಹಲಕ್ಷ್ಮೀ ಹಣ 3,000 ರೂಪಾಯಿಗೆ ಏರಿಕೆ ಮಾಡಲು... Gruha Lakshmi
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಸಹಾಯ ಮಾಡಿದ್ದೇ ಗ್ಯಾರಂಟಿ ಯೋಜನೆಗಳು. ಗ್ಯಾರಂಟಿ ಯೋಜನೆಗಳ ಪೈಕಿ 'ಗೃಹಲಕ್ಷ್ಮೀ' ಪಾಲು ದೊಡ್ಡದಾಗಿದ್ದು, ಗೃಹಿಣಿಯರು ಇದರಿಂದ ಸಾಕಷ್ಟು ಲಾಭ ಪಡೆಯುತ್ತಿದ್ದಾರೆ. ಹೀಗಿದ್ದಾಗ 'ಗೃಹಲಕ್ಷ್ಮೀ' ಯೋಜನೆ ಬಗ್ಗೆ ನಿರೀಕ್ಷೆಗಳು ಕೂಡ ಹೆಚ್ಚಾಗಿದ್ದವು. ಹೀಗಿದ್ದಾಗಲೇ, ಗೃಹಲಕ್ಷ್ಮೀ ಹಣ 3,000 ರೂಪಾಯಿಗೆ ಏರಿಕೆ ಮಾಡಲು...
ದೇಶದಲ್ಲಿ ಕಾಂಗ್ರೆಸ್ ಪಕ್ಷ ಇನ್ನೇನು ಮುಗಿದು ಹೋದ ಅಧ್ಯಾಯ ಎನ್ನುವಾಗಲೇ ಕನ್ನಡಿಗರು ಹೊಸ ಹುಟ್ಟು ನೀಡಿದ್ದರು. ಗ್ಯಾರಂಟಿ ಯೋಜನೆಗಳ ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರ ದೇಶಾದ್ಯಂತ ಹೊಸ ಸಂಚಲನ ಸೃಷ್ಟಿ ಮಾಡಿತ್ತು. ಅದರಲ್ಲೂ 'ಗೃಹಲಕ್ಷ್ಮೀ' ಯೋಜನೆಯು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಿದ್ದೂ ಅಲ್ಲದೆ, ಬೇರೆ ಬೇರೆ ರಾಜ್ಯಗಳಲ್ಲೂ ಈ ಯೋಜನೆ ಜಾರಿ ಆಗಬೇಕು ಅನ್ನೋ ಬೇಡಿಕೆ ಇಡಲಾಗುತ್ತಿದೆ. ಹೀಗಿದ್ದಾಗಲೇ, ಗೃಹಲಕ್ಷ್ಮೀ ಹಣ 3,000 ರೂಪಾಯಿಗೆ ಏರಿಕೆ ಮಾಡಲು...

ಗೃಹಲಕ್ಷ್ಮೀ ಹಣ 3,000 ರೂಪಾಯಿಗೆ...
ಹೌದು, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇನ್ನೇನು 2 ವರ್ಷ ತುಂಬಲಿದೆ. ಇದೇ ಸಂದರ್ಭದಲ್ಲಿ 'ಗೃಹಲಕ್ಷ್ಮೀ' ಯೋಜನೆ ಮೂಲಕ ಭರ್ಜರಿ ಸುದ್ದಿಗಾಗಿ ಜನ ಕಾಯುತ್ತಿದ್ದರು. ಬಿಜೆಪಿ & ಜೆಡಿಎಸ್ ನಾಯಕರು ಕಾಂಗ್ರೆಸ್ ನಾಯಕರ ವಿರುದ್ಧ ಗ್ಯಾರಂಟಿ ಯೋಜನೆಗಳನ್ನೇ ಮುಂದೆ ಇಟ್ಟುಕೊಂಡು ವಾಗ್ದಾಳಿ ಮಾಡುವಾಗಲೇ, ಗೃಹಲಕ್ಷ್ಮೀ ಹಣ 3,000 ರೂಪಾಯಿಗೆ ಏರಿಕೆ ಮಾಡಲು...
ಕರ್ನಾಟಕ ಬಜೆಟ್ ವೇಳೆ ಗೃಹಲಕ್ಷ್ಮೀ ಹಣ...
ಕಾಂಗ್ರೆಸ್ ಸರ್ಕಾರಕ್ಕೆ ಬಲವಾಗಿ ನಿಂತಿರುವುದೇ ಗ್ಯಾರಂಟಿ ಯೋಜನೆಗಳು. ಇದೇ ಕಾರಣಕ್ಕೆ, ಗೃಹಲಕ್ಷ್ಮೀ ಯೋಜನೆಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುವ ನಿರೀಕ್ಷೆಗಳು ಇವೆ. ಇಂತಹ ಪರಿಸ್ಥಿತಿಯಲ್ಲಿ ಗೃಹಲಕ್ಷ್ಮೀ ಹಣ 3,000 ರೂಪಾಯಿಗೆ ಏರಿಕೆ ಮಾಡಲು ಈ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಚಿಂತನೆ ನಡೆಸಿದೆಯಂತೆ. 2025-26ನೇ ಸಾಲಿನ ಕರ್ನಾಟಕ ಬಜೆಟ್ ಸಮಯದಲ್ಲಿ ಗೃಹಲಕ್ಷ್ಮೀ ಹಣವನ್ನ 3,000 ರೂಪಾಯಿಗೆ ಏರಿಕೆ ಮಾಡುವ ಆದೇಶ ಹೊರಬೀಳುತ್ತಾ? ಅನ್ನೋ ಕುತೂಹಲ ಮೂಡಿದೆ.
ಒಟ್ನಲ್ಲಿ ಈಗಾಗಲೇ ಬಡವರ ಮನೆಗಳಲ್ಲಿ ಸಾಕಷ್ಟು ಸಹಾಯ ಮಾಡುತ್ತಿರುವ 'ಗೃಹಲಕ್ಷ್ಮೀ' ಹಣ ಇನ್ನಷ್ಟು ಬೆಳಕು ತರುವ ನಿರೀಕ್ಷೆ ಇದೆ. ಸಿದ್ದರಾಮಯ್ಯ ಅವರ ಸರ್ಕಾರ ಇದೀಗ 2000 ರೂಪಾಯಿ ಹಣವನ್ನು ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆ ಮೂಲಕ ಹಂಚುತ್ತಿದೆ. ಆದರೆ ಇದೀಗ ಆ ಹಣವನ್ನು 3,000 ರೂಪಾಯಿಗೆ ಏರಿಕೆ ಮಾಡುವ ನಿರೀಕ್ಷೆ ಈಗ ಮೂಡಿ ಸಾಕಷ್ಟು ಕುತೂಹಲ ಕೂಡ ಕೆರಳಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಮಂಡಿಸುವ ಕರ್ನಾಟಕ ಬಜೆಟ್ ಮೇಲೆ ಎಲ್ಲರ ನಿರೀಕ್ಷೆ ಮೂಡಿದೆ.












Click it and Unblock the Notifications