• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ ಸಿಎಂ ಯಡಿಯೂರಪ್ಪ ಆದೇಶ

|

ಬೆಂಗಳೂರು, ಏ. 09: ಕೊರೊನಾ ವೈರಸ್ ನಿಭಾಯಿಸುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ. ಬೆಂಗಳೂರು ನಗರ ಜಿಲ್ಲೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಬಳಿಯೆ ಉಳಿಸಿಕೊಂಡಿದ್ದು, ಬೆಳಗಾವಿ ಜಿಲ್ಲೆಯಲ್ಲಿ ನಾಲ್ವರು ಸಚಿವರಿದ್ದರೂ ಯಾರಿಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಹಂಚಿಕೆ ಮಾಡಿಲ್ಲ. ಬದಲಿಗೆ ಜಗದೀಶ್ ಶೆಟ್ಟರ್ ಅವರಿಗೆ ಹೆಚ್ಚುವರಿಯಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನು ಉಳಿಸಲಾಗಿದೆ.

ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ 1,042 ಬೆಡ್ ವ್ಯವಸ್ಥೆ

ಸಚಿವರಾದ ರಮೇಶ್ ಜಾರಕಿಹೊಳಿ, ಗೋಪಾಲಯ್ಯ ಹಾಗೂ ಶ್ರೀಮಂತ ಪಾಟೀಲ್ ಅವರಿಗೆ ಯಾವುದೆ ಜಿಲ್ಲೆಯ ಉಸ್ತುವಾರಿಯನ್ನು ಹಂಚಿಕೆ ಮಾಡದಿರುವುದು ಕುತೂಹಲ ಮೂಡಿಸಿದೆ. ಉಳಿದಂತೆ ಐವರು ಸಚಿವರಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ಕೊಡಲಾಗಿದೆ. ಸಚಿವರಾದ ಜಗದೀಶ್ ಶೆಟ್ಟರ್, ಮಾಧುಸ್ವಾಮಿ, ಬಸವರಾಜ್ ಬೊಮ್ಮಾಯಿ, ಗೋವಿಂದ ಕಾರಜೋಳ ಹಾಗೂ ಪ್ರಭು ಚೌವ್ಹಾಣ್ ಎರಡೆರಡು ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿದೆ. ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಚಿತ್ರದುರ್ಗ ಜಿಲ್ಲೆಯನ್ನು ಉಳಿಸಿಸಲಾಗಿದ್ದು, ವಸತಿ ಸಚಿವ ವಿ ಸೋಮಣ್ಣ ಅವರ ಬಳಿಯಿದ್ದ ಮೈಸೂರು ಜಿಲ್ಲೆಯನ್ನು ಎಸ್.ಟಿ. ಸೋಮಶೇಖರ್ ಅವರಿಗೆ ಕೊಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಹೀಗಿದೆ:

* ಬೆಂಗಳೂರು ನಗರ ಜಿಲ್ಲೆ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

* ಬೆಂಗಳೂರು ಗ್ರಾಮಾಂತರ ಜಿಲ್ಲೆ : ಕಂದಾಯ ಸಚಿವ ಆರ್. ಅಶೋಕ್

* ಮೈಸೂರು ಜಿಲ್ಲೆ : ಸಹಕಾರ ಸಚಿವ ಎಸ್.ಟಿ. ಸೋಮಶೇಖರ್

* ರಾಮನಗರ ಜಿಲ್ಲೆ : ಡಿಸಿಎಂ ಡಾ. ಅಶ್ವಥ್ ನಾರಾಯಣ್

* ರಾಯಚೂರು ಜಿಲ್ಲೆ : ಡಿಸಿಎಂ ಲಕ್ಷ್ಣಣ ಸವದಿ

* ಬಾಗಲಕೋಟೆ ಜಿಲ್ಲೆ(ಕಲಬುರಗಿ ಜಿಲ್ಲೆ ಪ್ರಭಾರ) : ಡಿಸಿಎಂ ಗೋವಿಂದ ಕಾರಜೋಳ

* ಶಿವಮೊಗ್ಗ ಜಿಲ್ಲೆ : ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ

* ಬೆಳಗಾವಿ ಜಿಲ್ಲೆ (ಬೆಳಗಾವಿ ಅಧಿಕ ಪ್ರಭಾರ) : ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್

* ಚಿತ್ರದುರ್ಗ ಜಿಲ್ಲೆ : ಆರೋಗ್ಯ ಸಚಿವ ಬಿ. ಶ್ರೀರಾಮುಲು

* ಚಾಮರಾಜನಗರ ಜಿಲ್ಲೆ : ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್

* ಕೊಡಗು ಜಿಲ್ಲೆ : ವಸತಿ ಸಚಿವ ವಿ. ಸೋಮಣ್ಣ

* ಚಿಕ್ಕಮಗಳೂರು ಜಿಲ್ಲೆ : ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ

* ಹಾವೇರಿ ಜಿಲ್ಲೆ (ಉಡುಪಿ ಅಧಿಕ ಪ್ರಭಾರ) : ಗೃಹ ಸಚಿವ ಬಸವರಾಜ್ ಬೊಮ್ಮಾಯಿ

* ದಕ್ಷಿಣ ಕನ್ನಡ ಜಿಲ್ಲೆ : ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

* ತುಮಕೂರು ಜಿಲ್ಲೆ (ಹಾಸನ ಜಿಲ್ಲೆ ಅಧಿಕ ಪ್ರಭಾರ) : ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ

* ಗದಗ ಜಿಲ್ಲೆ : ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್

* ಕೋಲಾರ ಜಿಲ್ಲೆ : ಅಬಕಾರಿ ಸಚಿವ ಎಚ್. ನಾಗೇಶ್

* ಬೀದರ್ ಜಿಲ್ಲೆ (ಯಾದಗಿರಿ ಜಿಲ್ಲೆ ಅಧಿಕ ಪ್ರಭಾರ) : ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್

* ವಿಜಯಪುರ ಜಿಲ್ಲೆ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ

* ಉತ್ತರ ಕನ್ನಡ ಜಿಲ್ಲೆ : ಕಾರ್ಮಿಕ ಸಚಿವ ಶಿವರಾಜ್ ಹೆಬ್ಬಾರ್

* ಚಿಕ್ಕಬಳ್ಳಾಪುರ ಜಿಲ್ಲೆ : ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್

* ಮಂಡ್ಯ ಜಿಲ್ಲೆ : ಪೌರಾಡಳಿತ ಸಚಿವ ಕೆ.ಸಿ. ನಾರಾಯಣಗೌಡ

* ಬಳ್ಳಾರಿ ಜಿಲ್ಲೆ : ಅರಣ್ಯ ಸಚಿವ ಆನಂದ್ ಸಿಂಗ್

* ದಾವಣಗೆರೆ ಜಿಲ್ಲೆ : ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ

* ಕೊಪ್ಪಳ ಜಿಲ್ಲೆ : ಕೃಷಿ ಸಚಿವ ಬಿ.ಸಿ. ಪಾಟೀಲ್.

English summary
CM BS Yeddyurappa has cre-appointmented the district in charge minister. CM Yeddyurappa retains the Bangalore urben district incharge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X