ಸ್ಥಳೀಯ ಸಂಸ್ಥೆ ಚುನಾವಣೆ: ಯಾವ ಪಕ್ಷಕ್ಕೆ ಎಷ್ಟು ಸೀಟು?

ಬೆಂಗಳೂರು, ನವೆಂಬರ್ 14: ರಾಜ್ಯದ 9 ಜಿಲ್ಲೆಗಳಲ್ಲಿ ನಡೆದ 14 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳಲ್ಲಿ ಜಯಗಳಿಸಿದೆ. ಚುನಾವಣೆ ನಡೆದ 418 ವಾರ್ಡ್‌ಗಳಲ್ಲಿ 151 ವಾರ್ಡ್‌ಗಳಲ್ಲಿ ಕೈ ಪಾಳೆಯ ಗೆಲುವಿನ ಸಂಭ್ರಮಾಚರಣೆ ಮಾಡಿದೆ. ಆಡಳಿತಾರೂಢ ಬಿಜೆಪಿ 125 ವಾರ್ಡ್‌ಗಳಲ್ಲಿ ಜಯಗಳಿಸಿದೆ. ಈ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ 63 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಅದು ಮೇಲುಗೈ ಸಾಧಿಸಿದೆ.

ಮಹಾನಗರ ಸಂಸ್ಥೆ ಮತ್ತು ಪಟ್ಟಣ ಪಂಚಾಯಿತಿ ಸೇರಿದಂತೆ ಒಂಬತ್ತು ಜಿಲ್ಲೆಗಳ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನ.12ರಂದು ಚುನಾವಣೆ ನಡೆದಿತ್ತು. ಪಕ್ಷೇತರರರು 55 ಸೀಟುಗಳಲ್ಲಿ ಗೆದ್ದಿದ್ದರೆ, ಇತರರು 23 ವಾರ್ಡ್‌ಗಳಲ್ಲಿ ಗೆದ್ದಿದ್ದಾರೆ.

ಕನಕಪುರ ನಗರಸಭೆಯಲ್ಲಿ 31 ವಾರ್ಡ್‌ಗಳಲ್ಲಿ ಏಳು ವಾರ್ಡ್‌ಗಳಲ್ಲಿ ಅವಿರೋಧ ಆಯ್ಕೆಯಾಗಿದ್ದ ಕಾಂಗ್ರೆಸ್, ಒಟ್ಟು 26 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಒಂದು ಮತ್ತು ಜೆಡಿಎಸ್ ನಾಲ್ಕು ವಾರ್ಡ್‌ಗಳಲ್ಲಿ ಗೆದ್ದಿದೆ.

ಕೋಲಾರ ನಗರಸಭೆಯಲ್ಲಿ ಅತಂತ್ರ ಫಲಿತಾಂಶ ಉಂಟಾಗಿದ್ದು, 35 ವಾರ್ಡ್‌ಗಳಲ್ಲಿ ಕಾಂಗ್ರೆಸ್ 12, ಬಿಜೆಪಿ ಮೂರು ಮತ್ತು ಜೆಡಿಎಸ್ ಎಂಟು ಸ್ಥಾನಗಳಲ್ಲಿ ಜಯಗಳಿಸಿದೆ. 12 ವಾರ್ಡ್‌ಗಳಲ್ಲಿ ಇತರರು ಜಯಗಳಿಸಿದ್ದಾರೆ.

ಮಂಗಳೂರಿನಲ್ಲಿ ಬಿಜೆಪಿಗೆ ಅಭೂತಪೂರ್ವ ಜಯ

ಮಂಗಳೂರಿನಲ್ಲಿ ಬಿಜೆಪಿಗೆ ಅಭೂತಪೂರ್ವ ಜಯ

ನಗರಸಂಸ್ಥೆಗಳ ಚುನಾವಣೆಯಲ್ಲಿ ಒಟ್ಟಾರೆಯಾಗಿ ಬಿಜೆಪಿ ಕಾಂಗ್ರೆಸ್ ಎದುರು ಹಿನ್ನಡೆ ಅನುಭವಿಸಿದ್ದರೂ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಮಲ ಪಾಳೆಯಕ್ಕೆ ಭರ್ಜರಿ ಮುನ್ನಡೆ ತಂದುಕೊಟ್ಟಿದೆ. ಎಂಸಿಸಿಯ 60 ವಾರ್ಡ್‌ಗಳ ಪೈಕಿ 44 ರಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಇನ್ನು ಉಳಿದ 14 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಜಯಗಳಿಸಿದೆ. ಇನ್ನು ಎರಡು ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದೆ.

2013ರಲ್ಲಿ ನಡೆದ ಎಂಸಿಸಿ ಚುನಾವಣೆಯಲ್ಲಿ ಕಾಂಗ್ರೆಸ್ 35 ವಾರ್ಡ್‌ಗಳಲ್ಲಿ ಗೆದ್ದಿದ್ದರೆ, ಬಿಜೆಪಿ ಕೇವಲ 20 ಸೀಟುಗಳಲ್ಲಿ ಗೆದ್ದಿತ್ತು ಎನ್ನುವುದು ಗಮನಾರ್ಹ.

ದಾವಣಗೆರೆ ಪಾಲಿಕೆ ಚುನಾವಣೆ (ಅತಂತ್ರ )

ದಾವಣಗೆರೆ ಪಾಲಿಕೆ ಚುನಾವಣೆ (ಅತಂತ್ರ )

ದಾವಣಗೆರೆ ಪಾಲಿಕೆ ಚುನಾವಣೆಯಲ್ಲಿ 45 ವಾರ್ಡ್‌ಗಳಲ್ಲಿ ಕಾಂಗ್ರೆಸ್ 22ರಲ್ಲಿ ಗೆಲುವಿನ ನಗೆ ಬೀರಿದೆ. ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದ್ದರೂ ದಾವಣಗೆರೆಯಲ್ಲಿ ಒಟ್ಟಾರೆ ಫಲಿತಾಂಶ ಅತಂತ್ರವಾಗಿದೆ. ಬಿಜೆಪಿ 17, ಜೆಡಿಎಸ್ ಒಂದು ಮತ್ತು ಇತರರು ಐದು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಮುಳಬಾಗಿಲು, ಮಾಗಡಿ, ಚಿಂತಾಮಣಿ, ಕೆಜಿಎಫ್, ಗೌರಿಬಿದನೂರು

ಮುಳಬಾಗಿಲು, ಮಾಗಡಿ, ಚಿಂತಾಮಣಿ, ಕೆಜಿಎಫ್, ಗೌರಿಬಿದನೂರು

ಮುಳಬಾಗಿಲು ನಗರಸಭೆ (ಅತಂತ್ರ)

ವಾರ್ಡ್‌ಗಳು-31

ಕಾಂಗ್ರೆಸ್- 7

ಬಿಜೆಪಿ- 2

ಜೆಡಿಎಸ್- 10

ಇತರರು- 12


ಕೆಜಿಎಫ್ ನಗರಸಭೆ (ಅತಂತ್ರ)

ವಾರ್ಡ್‌ಗಳು-35

ಕಾಂಗ್ರೆಸ್- 13

ಬಿಜೆಪಿ- 3

ಜೆಡಿಎಸ್- 2

ಇತರರು- 17

ಗೌರಿಬಿದನೂರು ನಗರಸಭೆ (ಅತಂತ್ರ)

ವಾರ್ಡ್‌ಗಳು-31

ಕಾಂಗ್ರೆಸ್- 15

ಬಿಜೆಪಿ- 3

ಜೆಡಿಎಸ್-7

ಇತರರು- 6

ಚಿಂತಾಮಣಿ ನಗರಸಭೆ (ಅತಂತ್ರ)

ವಾರ್ಡ್‌ಗಳು-31

ಕಾಂಗ್ರೆಸ್- 1

ಬಿಜೆಪಿ- 0

ಜೆಡಿಎಸ್-14

ಭಾರತೀಯ ಪ್ರಜಾಪಕ್ಷ-14

ಇತರರು- 2

ಮಾಗಡಿ ಪುರಸಭೆ (ಜೆಡಿಎಸ್)

ವಾರ್ಡ್‌ಗಳು-23

ಕಾಂಗ್ರೆಸ್- 10

ಬಿಜೆಪಿ- 1

ಜೆಡಿಎಸ್- 12

ಬೀರೂರು, ಕಂಪ್ಲಿ, ಕುಂದಗೋಳ, ಕಾರ್ಗಲ್ ಮತ್ತು ಕೂಡ್ಲಿಗಿ

ಬೀರೂರು, ಕಂಪ್ಲಿ, ಕುಂದಗೋಳ, ಕಾರ್ಗಲ್ ಮತ್ತು ಕೂಡ್ಲಿಗಿ

ಬೀರೂರು ನಗರಸಭೆ (ಅತಂತ್ರ)

ವಾರ್ಡ್‌ಗಳು-23

ಕಾಂಗ್ರೆಸ್- 9

ಬಿಜೆಪಿ- 10

ಜೆಡಿಎಸ್- 2

ಇತರರು- 2

ಕಂಪ್ಲಿ ನಗರಸಭೆ (ಬಿಜೆಪಿ)

ವಾರ್ಡ್‌ಗಳು-23

ಕಾಂಗ್ರೆಸ್- 10

ಬಿಜೆಪಿ- 13

ಕುಂದಗೋಳ ಪಟ್ಟಣ ಪಂಚಾಯಿತಿ (ಬಿಜೆಪಿ)

ವಾರ್ಡ್‌ಗಳು-19

ಕಾಂಗ್ರೆಸ್- 5

ಬಿಜೆಪಿ- 12

ಇತರರು- 2


ಜೋಗ್ ಕಾರ್ಗಲ್ ನಗರಸಭೆ (ಬಿಜೆಪಿ)

ವಾರ್ಡ್‌ಗಳು-11

ಕಾಂಗ್ರೆಸ್- 1

ಬಿಜೆಪಿ- 9

ಇತರರು- 1

ಕೂಡ್ಲಿಗಿ ನಗರಸಭೆ (ಅತಂತ್ರ)

ವಾರ್ಡ್‌ಗಳು-20

ಕಾಂಗ್ರೆಸ್- 6

ಬಿಜೆಪಿ- 7

ಜೆಡಿಎಸ್- 4

ಇತರರು- 3

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+