ದೇವೀರಮ್ಮನ ಬೆಟ್ಟ ಹತ್ತುವಾಗ ಪ್ರಜ್ಞೆ ತಪ್ಪಿದ ಯುವತಿ! ಬೆಟ್ಟದಿಂದ ಕೆಳಗೆ ತರಲು ಹರಸಾಹಸ..!

ಚಿಕ್ಕಮಗಳೂರು ಅಕ್ಟೋಬರ್ 31: ಚಿಕ್ಕಮಗಳೂರು ತಾಲೂಕಿನ ಪಶ್ಚಿಮ ಘಟ್ಟಗಳ ತಪ್ಪಲಿನ ದೇವೀರಮ್ಮನ ಗುಡ್ಡ ಹತ್ತುವಾಗ ಯುವತಿಯೊಬ್ಬಳು ಪ್ರಜ್ಞೆತಪ್ಪಿ ಬಿದ್ದ ಘಟನೆ ನಡೆದಿದೆ. ಲೋ ಬಿಪಿಯಿಂದ ಗುಡ್ಡದಲ್ಲೇ ಸುಸ್ತಾಗಿ ಬಿದ್ದ ಯುವತಿಯನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇಂದು ದೀಪಾವಳಿ ಹಬ್ಬದ ಪ್ರಯುಕ್ತ ದೇವೀರಮ್ಮನ ಬೆಟ್ಟದಲ್ಲಿ ಜನ ಸಾಗರವೇ ಕಂಡು ಬಂದಿದೆ. ಮಳೆ ನಡುವೆ ಜಾರುವ ಗುಡ್ಡವನ್ನು ಸಾವಿರಾರು ಭಕ್ತರು ಹತ್ತುತ್ತಿರುವ ದೃಶ್ಯಗಳು ಸೆರೆಯಾಗಿವೆ. ಬೆಟ್ಟ ಹತ್ತುವಾಗ ಭಕ್ತರಿಗೆ ನಾನಾ ರೀತಿಯ ತೊಂದರೆಗಳಾಗಿವೆ. ಈ ವೇಳೆ 25 ವರ್ಷದ ಯುವತಿ ಸಿಂಧು ಬೆಟ್ಟದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇದರಿಂದಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಲು ಜನ ಹರಸಾಹಸ ಪಟ್ಟಿದ್ದಾರೆ.

Chikkamagaluru woman lost consciousness while climbing Deviramma Hill

ಅಲ್ಲದೆ ಬೆಂಗಳೂರು ಮೂಲದ 30 ವರ್ಷದ ದಿವ್ಯಾ ಎಂಬ ಯುವತಿ ಕಾಲು ಜಾರಿ ಕಾಲು ಮುರಿತ ಉಂಟಾಗಿದೆ. ಜೊತೆಗೆ ಮಂಗಳೂರಿನ 55 ವರ್ಷದ ಜಯಮ್ಮ ಎಂಬುವವರು ಕೂಡ ಲೋ ಬಿಪಿಯಿಂದ ಗುಡ್ಡದಲ್ಲೇ ಸುಸ್ತಾಗಿ ಕುಳಿತ ಘಟನೆ ನಡೆದಿದೆ. ಜಾರಿ ಬಿದ್ದು ತರೀಕೆರೆ ಮೂಲದ ವೇಣು ಎಂಬ ಯುವಕನ ತಲೆಗೆ ಗಾಯ ಮಾಡಿಕೊಂಡಿದ್ದಾರೆ.

ಇದರಿಂದಾಗಿ ಎಲ್ಲರನ್ನೂ ಸುರಕ್ಷಿತವಾಗಿ ಸ್ಟ್ರೆಚ್ಚರನಲ್ಲಿ ಹೊತ್ತು ತಂದು ಪೊಲೀಸರು ರಕ್ಷಣೆ ಮಾಡಿದ್ದಾರೆ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರಿಂದ ಎಲ್ಲರ ರಕ್ಷಣೆ ಮಾಡಲಾಗಿದೆ. ರೆಸ್ಕ್ಯೂ ಟೀಂ ಎಲ್ಲರನ್ನೂ ಗುಡ್ಡದಿಂದ ತಂದು ಆಸ್ಪತ್ರೆಗೆ ಸೇರಿಸಿದೆ. ದೇವೀರಮ್ಮನ ಗುಡ್ಡದಲ್ಲಿ ನಿನ್ನೆ ಸಂಜೆಯಿಂದಲೂ ಮಳೆ ಜಾರಾಗಿದೆ. ಈ ಗುಡ್ಡವನ್ನು ಹತ್ತಬೇಕು ಅಂದರೆ 3 ಕಿ.ಮೀ. ಹಗ್ಗ ಹಿಡಿದು ಹತ್ತಬೇಕು.

ಮಳೆ, ಕೆಸರಿನ ನಡುವೆ ಗುಡ್ಡ ಹತ್ತುವುದು ಭಕ್ತರಿಗೆ ಒಂದು ಸವಾಲಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಲೇ ಭಕ್ತರು ಬೆಟ್ಟವನ್ನು ಹತ್ತುವ ಮೂಲಕ ದೇವರ ದರ್ಶನ್ ಪಡೆದು ಪಾರ್ಥನೆ ಸಲ್ಲಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ.

ಡ್ರೋನ್ ನಲ್ಲಿ ಸೆರೆಯಾದ ಪ್ರಸಿದ್ಧ ದೇವೀರಮ್ಮ ಜಾತ್ರಾ ವೈಭವ
ಪ್ರಸಿದ್ಧ ದೇವೀರಮ್ಮ ಜಾತ್ರೆ ಆರಂಭವಾಗಿದೆ. ಹೀಗಾಗಿ ಬೆಟ್ಟದಲ್ಲಿ ಜನ ಸಾಗರವೇ ನೆರೆದಿದೆ. ಇದರ ವೈಭವ ಡ್ರೋನ್ ನಲ್ಲಿ ಸೆರೆಯಾಗಿದೆ. ಸಮುದ್ರಮಟ್ಟದಿಂದ 3000 ಅಡಿ ಎತ್ತರದಲ್ಲಿರುವ ದೇವಿರಮ್ಮ ಬೆಟ್ಟದಲ್ಲಿ ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದಾರೆ. ನಿನ್ನೆ ರಾತ್ರಿಯಿಂದಲೇ ಸಾವಿರಾರು ದೇವಿರಮ್ಮ ಭಕ್ತರು ಬೆಟ್ಟ ಹತ್ತುತ್ತಿದ್ದಾರೆ.

ಬೆಟ್ಟ ಏರುವ ಮನಮೋಹಕ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಡಿದಾದ ಹಾದಿಯಲ್ಲಿ ಬರಿಗಾಲಲ್ಲಿ ಭಕ್ತರು ಬೆಟ್ಟವೇರಿ ದೇವಿರಮ್ಮ ದರ್ಶನ ಪಡೆಯುತ್ತಿದ್ದಾರೆ. ಪಶ್ಚಿಮ ಘಟ್ಟ ತಪ್ಪಲಿನ ತಾಯಿಯ ವಿಹಂಗಮ ನೋಟ ಸೆರೆಯಾಗಿದೆ. ಸಂಜೆ ವೇಳೆಗೆ ಒಂದು ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವರ ದರ್ಶನವಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+