"ಕಸ ಸ್ವಚ್ಛತಾ ವಾಹನ ಚಾಲಕಿ ತಿಪ್ಪೇನಹಳ್ಳಿ ನಂದಿನಿ ಬುದಕು ಮಹಿಳೆಯರಿಗೆ ಸ್ಪೂರ್ತಿ''
ಬೆಂಗಳೂರು, ಅಕ್ಟೋಬರ್ 30: ಅನಿವಾರ್ಯತೆ ಮತ್ತು ಅವಕಾಶ ಮಹಿಳೆಯರ ಸಾಮರ್ಥ್ಯ ಹಾಗೂ ಮನೋಸ್ಥೈರ್ಯವನ್ನು ಸಾಬೀತುಪಡಿಸುವ ಎರಡು ಅಂಶಗಳು. ಬದುಕಿನ ಬಂಡಿಯನ್ನು ಸಾಗಿಸಬೇಕಾದ ಅನಿವಾರ್ಯತೆಗೆ ಸಿಲುಕಿದ ಮಹಿಳೆಯರಿಗೆ ಪೂರಕ ಅವಕಾಶಗಳು ದೊರೆತಲ್ಲಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬಲ್ಲರು. ಆರ್ಥಿಕವಾಗಿ ಸಶಕ್ತರಾಗಬಲ್ಲರು. ಇದಕ್ಕೆ ಉದಾಹರಣೆ ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ಪಂಚಾಯತಿ ವ್ಯಾಪ್ತಿಯ ನಂದಿನಿ.
ನಂದಿನಿ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ತಿಪ್ಪೇನಹಳ್ಳಿ ಗ್ರಾಮದ ಪಂಚಾಯತಿಯಲ್ಲಿ ಕಸ ಸಂಗ್ರಹಣೆಯ ಸ್ವಚ್ಛವಾಹಿನಿ ವಾಹನದ ಚಾಲಕಿಯಾಗಿ ದುಡಿಯುತ್ತಿದ್ದಾರೆ. ಪತಿ ಅನಾರೋಗ್ಯದಿಂದ ಅಕಾಲಿಕ ಮರಣಕ್ಕೀಡಾದ ಬಳಿಕ ಅವರು ಕೈಚೆಲ್ಲಿ ಕೂರಲಿಲ್ಲ. ತನ್ನ ಹಾಗೂ ತಮ್ಮ ಎರಡು ಮಕ್ಕಳ ಭವಿಷ್ಯಕ್ಕಾಗಿ ದುಡಿಮೆಯ ದಾರಿಗಳನ್ನು ಹುಡುಕಿದರು. ದುಡಿಯುವ ದಿಟ್ಟತನ, ಕಲಿಯುವ ಛಲ ಅವರ ಕೈಗೆ ಸ್ಟೀರಿಂಗ್ ಕೊಟ್ಟಿತು. ಅದು ಬದುಕಿಗೆ ಹೊಸ ದಿಕ್ಕು ನೀಡಿತು.

ನಂದಿನಿ ಅವರು ನಂದಾದೀಪ ಸ್ವಸಹಾಯ ಸಂಘದ ಸಹಾಯದಿಂದ ಚಾಲನಾ ತರಬೇತಿ ಪಡೆದಿದ್ದಾರೆ. ಸ್ವಚ್ಛವಾಹಿನಿ ಸಾರಥಿಯಾಗಿ, ಗ್ರಾಮ ಪಂಚಾಯತಿಯಿಂದ ಪ್ರತಿ ತಿಂಗಳು 10 ಸಾವಿರ ರೂ. ವೇತನವನ್ನು ಪಡೆಯುತ್ತಿದ್ದಾರೆ. ಅವರ ಯಶೋಗಾಥೆ ನಮಗೆ ಎರಡು ಆಯಾಮಗಳಲ್ಲಿ ಪ್ರೇರಣಾದಾಯಕವಾಗಿದೆ. ವೈಯಕ್ತಿಕ ಜೀವನದ ಆಘಾತಕ್ಕೆ ಅಂಜದೆ, ಇತರರಿಗೆ ಸ್ಫೂರ್ತಿಯಾಗುವಂತೆ ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವುದು ಹಾಗೂ ಗ್ರಾಮದ ಸ್ವಚ್ಛತೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದಾರೆ ಎಂದು ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಕ್ಸ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ಇಂತಹ ಮಹಿಳೆಯರು ಸದಾ ಸ್ಪೂರ್ತಿ ಎಂದು ಅವರ ಬದುಕನ್ನು ಬಣ್ಣಿಸಿದ್ದಾರೆ.
ಅನಿವಾರ್ಯತೆ ಮತ್ತು ಅವಕಾಶ ಮಹಿಳೆಯರ ಸಾಮರ್ಥ್ಯ ಹಾಗೂ ಮನೋಸ್ಥೈರ್ಯವನ್ನು ಸಾಬೀತುಪಡಿಸುವ ಎರಡು ಅಂಶಗಳು. ಬದುಕಿನ ಬಂಡಿಯನ್ನು ಸಾಗಿಸಬೇಕಾದ ಅನಿವಾರ್ಯತೆಗೆ ಸಿಲುಕಿದ ಮಹಿಳೆಯರಿಗೆ ಪೂರಕ ಅವಕಾಶಗಳು ದೊರೆತಲ್ಲಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬಲ್ಲರು. ಆರ್ಥಿಕವಾಗಿ ಸಶಕ್ತರಾಗಬಲ್ಲರು. ಇದಕ್ಕೆ ಉದಾಹರಣೆ ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ… pic.twitter.com/p1k23N5nTL
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 29, 2025
ಚಾಲಕಿ ನಂದಿನಿ ಹೇಳುವುದೇನು?
ತಮ್ಮ ಬದುಕಿನ ಕುರಿತು ಪ್ರತಿಕ್ರಿಯಿಸಿರುವ ನಂದಿನಿ ಅವರು ತಾವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಶ್ರೀ ನಂದಾದೀಪ ಒಕ್ಕೂಟ, ಸ್ವಸಹಾಯ ಸಂಘದಿಂದ ನನ್ನ ಆಯ್ಕೆ ಮಾಡಿದೆ. ಆರ್‌ಸಿಟಿಯಲ್ಲಿ ಒಂದು ತಿಂಗಳ ವಾಹನ ಚಾಲನಾ ತರಬೇತಿ ಪಡೆದ ನನಗೆ ಅವರೇ ಉಚಿತವಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಟ್ಟರು ಎಂದು ತನ್ನ ಕಷ್ಟಕ್ಕೆ ಸ್ಪಂದಿಸಿ ಸಿಬ್ಬಂದಿ, ಅಧಿಕಾರಿಗಳನ್ನು ಸ್ಮರಿಸಿದ್ದಾರೆ.
ನಾನು ಮೊದಲು ಇತರ ಮಹಿಳೆಯರಂತೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೆ. ಪತಿ ತೀರಿಕೊಂಡ ನಂತರ ಬದುಕಿನ ಭಾರ ನನ್ನೊಬ್ಬಳ ಹೆಗಲಿಗೆ ಬಿತ್ತು. ಎರಡು ಮಕ್ಕಳೊಂದಿಗೆ ಜೀವನ ಸಾಗಿಸಬೇಕಾದ ಅನಿವಾರ್ಯ ಎದುರಾಯಿತು. ಆಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ, ಸ್ವಚ್ಛತಾ ವಾಹನ ಚಾಲಕಿಯಾಗಿ ನನ್ನ ಆಯ್ಕೆ ಮಾಡಿ ತರಬೇತಿ ನೀಡಲಾಯಿತು. ಇದರಿಂದಾಗಿ ಮಾಸಿಕ ಹತ್ತು ಸಾವಿರ ವೇತನ ಸಿಗುತ್ತಿದೆ. ಬದುಕಿನ ಬಂಡಿ ಸಾಗುತ್ತಿದೆ. ವಾಹನ ಮಾತ್ರವಲ್ಲದೇ ಜೀವನವನ್ನು ಸುಸೂತ್ರವಾಗಿ ಮುನ್ನಡೆಸುತ್ತಿದ್ದೇನೆ ಎಂದಿದ್ದಾರೆ. ಮಾತ್ರವಲ್ಲದೇ ಇದಕ್ಕೆ ಕಾರಣವಾದ ಗ್ರಾಮ ಪಂಚಾಯಿತಿ, ಸ್ವಸಹಾಯ ಸಂಘ, ಹಾಗೂ ನಂದಾದೀಪ ಒಕ್ಕೂಟಕ್ಕೆ ಮಹಿಳೆ ನಂದಿನಿ ಧನ್ಯವಾದ ಹೇಳಿದ್ದಾರೆ.












Click it and Unblock the Notifications