ಸಿಎಂ ಸಂದರ್ಶನ: ನಿಮ್ಮ ಪತ್ನಿಯನ್ನ ಯಾಕೆ ಪರಿಚಯ ಮಾಡಿಕೊಟ್ಟಿಲ್ಲ : ಸಿದ್ದರಾಮಯ್ಯ ಕೊಟ್ಟ ಉತ್ತರ ವೈರಲ್
ಬೆಂಗಳೂರು, ಫೆಬ್ರವರಿ 21: ರಾಜಕೀಯದಲ್ಲೇ ಹೆಚ್ಚು ಸಮಯ ಕಳೆಯುವ ನೀವು ಕುಟುಂಬದವರೊಂದಿಗೆ ಯಾವಾಗ ಇರುತ್ತೀರಿ, ಮನೆಯವರು ನಿಮ್ಮ ಸಮಯ ಕೇಳುವುದಿಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.
ಸಿಎಂ @siddaramaiah ಅವರ ಕೌಟುಂಬಿಕ ಬದುಕಿನ ಬಗ್ಗೆ ಲೋಕಾಭಿರಾಮದ ಮಾತುಗಳು.... pic.twitter.com/bJQZjR8Im5
— Karnataka Congress (@INCKarnataka) February 20, 2024
ಸಿದ್ದರಾಮಯ್ಯ ಅವರೊಂದಿಗೆ ಡಿಸಿಎಂ ಡಿಕೆಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ಲಕ್ಷ್ಮಿ ಹೆಬ್ಬಾಳಕರ್, ಜಮೀರ್ ಅಹಮದ್ ಖಾನ್, ಎಂ.ಸಿ.ಸುಧಾಕರ್, ಶಿವರಾಜ ತಂಗಡಗಿ, ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಅತೀಕ್ ಅವರು ಕುಳಿತು ಸಂವಾದದಲ್ಲಿ ತೊಡಗಿರುವ ವಿಡಿಯೋವನ್ನ ಕೆಪಿಸಿಸಿ ಈ ವಿಡಿಯೋ ವನ್ನು ಸಿಎಂ ಅವರ ಕೌಟುಂಬಿಕ ಬದುಕಿನ ಬಗ್ಗೆ ಲೋಕಾಭಿರಾಮದ ಮಾತುಗಳು ಎನ್ನುವ ಹೆಸರನ್ನು ಶೇರ್ ಮಾಡಿದೆ.

ನಾವಂತೂ ನಿಮ್ಮ ಪತ್ನಿಯನ್ನು ಒಮ್ಮೆಯೂ ನೋಡಿಯೇ ಇಲ್ಲ. ನಮಗೂ ಒಮ್ಮೆ ತೋರಿಸಿ ಸರ್. ನಾವು ಅವರನ್ನು ಈವರೆಗೂ ನೋಡಿಲ್ಲ. ಅಮ್ಮ ಅವರನ್ನು ನಾವೆಲ್ಲರೂ ನೋಡಲೇಬೇಕು. ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ ಏಕೆ, ನಿಮ್ಮ ಪತ್ನಿ, ಕುಟುಂಬಕ್ಕೆ ನೀವು ಸಮಯ ಹೇಗೆ ಕೊಡುತ್ತೀರಿ, ರಾಜಕೀಯದಲ್ಲೇ ಹೆಚ್ಚು ಸಮಯ ಕಳೆಯುವ ನೀವು ಕುಟುಂಬದವರೊಂದಿಗೆ ಯಾವಾಗ ಇರುತ್ತೀರಿ, ಮನೆಯವರು ನಿಮ್ಮ ಸಮಯ ಕೇಳುವುದಿಲ್ಲವೇ ಎಂದು ಸಂಪುಟದ ಸದಸ್ಯರು ಸಿದ್ದರಾಮಯ್ಯ ಅವರನ್ನ ಪ್ರಶ್ನಿಸಿದ್ದಾರೆ.
ಇನ್ನೂ ಸಚಿವ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ನೀವು ರಾಜಕೀಯದಲ್ಲಿ ಗುರುತಿಸಿಕೊಂಡವರು. ಬರೀ ರಾಜಕೀಯ ಎಂದುಕೊಂಡುತ್ತೀರಾ, ಕುಟುಂಬಕ್ಕೂ ಸಮಯ ಕೊಡ್ತೀರಾ ಎಂಬ ಪ್ರಶ್ನೆಗೆ, ಸಾರ್ವಜನಿಕ ಜೀವನದಲ್ಲಿ ಇರುವರಿಗೆ ಕುಟುಂಬದ ಕಡೆಗೆ ಸಮಯ ನೀಡಲು ಆಗುವುದಿಲ್ಲ. ರಾಜಕಾರಣಿ ಆಗಬೇಕಾದರೆ ಮದುವೆ ಆಗಬೇಡಿ ಎಂದು ಲೋಹಿಯಾ ಹೇಳುತ್ತಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
ನಾವೆಲ್ಲಾ ಸಿಎಂ ಅವರನ್ನು ನೋಡಬೇಕು. ಅವಕಾಶ ಮಾಡಿಕೊಡಬೇಕು. ಕಾಯಕವೇ ಕೈಲಾಸ ಎಂದು ಬಸವಣ್ಣ ಅವರ ತತ್ವ ನಂಬಿದವರು. ನಿಮ್ಮ ಪತ್ನಿ ದೈವೀ ಭಕ್ತರು ಎಂದು ಕೇಳಿದ್ದೇವೆ. ನಾವು ಅವರನ್ನು ನೋಡಲೇ ಇಲ್ಲ. ಒಮ್ಮೆ ತೋರಿಸಿ ಎನ್ನುವುದು ಲಕ್ಷ್ಮಿ ಹೆಬ್ಬಾಳಕರ್ ಬೇಡಿಕೆ ಇಟ್ಟರು. ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಎಂಸಿ ಸುಧಾಕರ್, ಮನೆಯಲ್ಲಿ ಗೃಹಮಂತ್ರಿಯೇ ಪ್ರಭಾವಿ. ಅವರ ಗೃಹಬಂಧನದಲ್ಲಿಟ್ಟೀದ್ದೀರಾ ಎಂದು ಕೇಳಿದರು. ಈ ಸಂದುರ್ಭದಲ್ಲಿ ಅವರಿಗೆ ಸ್ವಾತಂತ್ರ್ಯ ಕೊಟ್ಟಿದ್ದೀವಿ. ಕುಟುಂಬ ಕಾರ್ಯಕ್ರಮವೊಂದಕ್ಕೆ ಕರೆದರೂ ಅವರು ಬರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಈ ವೇಳೆ ನಾವು ಅಮ್ಮ ಅವರನ್ನು ನಾವು ನೋಡಬೇಕು. ಎಲ್ಲರೂ ಸೇರಿ ಒಮ್ಮೆ ನಿಮ್ಮ ಮನೆಯವರೊಂದಿಗೆ ಊಟ ಮಾಡುತ್ತೇವೆ. ಇದಕ್ಕೆ ಸಿದ್ದರಾಮಯ್ಯ ನಗುತ್ತಲೇ ಸಮ್ಮತಿಸಿದರು.












Click it and Unblock the Notifications