ವಾಟ್ಸ್‌ಅಪ್ ಚಾನಲ್ ಆರಂಭಿಸಿದ ಸಿದ್ದರಾಮಯ್ಯ, ಸಿಎಂ ಫಾಲೋ ಮಾಡಿ
ಬೆಂಗಳೂರು, ಸೆಪ್ಟೆಂಬರ್ 20; ವಾಟ್ಸಪ್ ತನ್ನ ಕೋಟ್ಯಾಂತರ ಗ್ರಾಹಕರಿಗಾಗಿ ವಾಟ್ಸಪ್ ಚಾನಲ್ ಎಂಬ ಹೊಸ ಫೀಚರ್ ಬಿಡುಗಡೆ ಮಾಡಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜಕೀಯ ನಾಯಕರು, ಸಿನಿಮಾ ಮತ್ತು ಕ್ರೀಡಾ ತಾರೆಯರು ಚಾನಲ್ ಆರಂಭಿಸಿ ಎಲ್ಲರನ್ನೂ ತಲುಪುತ್ತಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಟ್ಸಪ್ ಚಾನಲ್ ಆರಂಭಿಸಿದ್ದಾರೆ. ಸರ್ಕಾರವೊಂದರ ಮುಖ್ಯಸ್ಥರ ಪೈಕಿ ಮೊಟ್ಟಮೊದಲ ವಾಟ್ಸಪ್ ಚಾನಲ್ ಅನ್ನು ಆರಂಭಿಸಿ, ಜನಸಂಪರ್ಕ ಸಾಧನೆಯ ನಿಟ್ಟಿನಲ್ಲಿ ಮುಂದಡಿಯಿಟ್ಟವರು ಸಿದ್ದರಾಮಯ್ಯ.

ವಾಟ್ಸಪ್ ಹೊಸ ಫೀಚರ್ ಅನ್ನು ಪರಿಚಯಿಸಿದ ಬಳಿಕ ಸೆಪ್ಟೆಂಬರ್ 12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾನಲ್ ಆರಂಭಿಸಿದ್ದಾರೆ. ಈಗಾಗಲೇ 50,000ಕ್ಕೂ ಅಧಿಕ subscribersಗಳನ್ನು ಚಾನಲ್ ಹೊಂದಿದೆ. ಇಡೀ ದೇಶದ ಇತರ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ವಾಟ್ಸಪ್ ಚಾನಲ್ ಆರಂಭಿಸಿದವರಲ್ಲಿ ಸಿದ್ದರಾಮಯ್ಯ ಮೊದಲಿಗರು.
ನೀವು ಸಿಎಂ ಫಾಲೋ ಮಾಡಿ; ಜನರಿಗೆ ಬೆರಳ ತುದಿಯಲ್ಲಿ ಸರ್ಕಾರದ ದೈನಂದಿನ ಆಗುಹೋಗುಗಳ ಮಾಹಿತಿ ಒದಗಿಸಿ, ಆಡಳಿತವನ್ನು ಮತ್ತಷ್ಟು ಪಾರದರ್ಶಕವಾಗಿಸಲು Chief Minister of Karnataka ಎಂಬ ಹೆಸರಿನ ವಾಟ್ಸಪ್ ಚಾನಲ್ ಕಾರ್ಯಾರಂಭ ಮಾಡಿದೆ.
ಜನರು ವಾಟ್ಸಪ್ ಅಪ್ಲಿಕೇಶನ್‌ನಲ್ಲಿ ಚಾನೆಲ್ ಸೆಕ್ಷನನಲ್ಲಿ Chief Minister of Karnataka ಎಂದು ಸರ್ಚ್ ಮಾಡುವ ಮೂಲಕ ಮುಖ್ಯಮಂತ್ರಿಗಳ ಅಧಿಕೃತ ಚಾನಲ್ ಅನ್ನು Subscribe ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ https://twitter.com/siddaramaiah ಖಾತೆ ಮೂಲಕ ಟ್ವಿಟರ್‌ನಲ್ಲಿ, https://www.facebook.com/Siddaramaiah.Official ಖಾತೆ ಮೂಲಕ ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿದ್ದಾರೆ.
ಅಲ್ಲದೇ ಮುಖ್ಯಮಂತ್ರಿಗಳ ಕಛೇರಿ ಸಹ ತನ್ನ ಅಧಿಕೃತ ಖಾತೆ ಮೂಲಕ ಮುಖ್ಯಮಂತ್ರಿಗಳ ಕುರಿತಾದ ಅಪ್‌ಡೇಟ್ ನೀಡುತ್ತದೆ. ಈಗ ವಾಟ್ಸಪ್ ಚಾನಲ್ ಮೂಲಕ ಸಿದ್ದರಾಮಯ್ಯ ತಮ್ಮ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಜನರನ್ನು ಸುಲಭವಾಗಿ ತಲುಪುತ್ತಿದ್ದಾರೆ.
ಮೋದಿ ವಾಟ್ಸಪ್ ಚಾನಲ್; ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಸೆಳೆಯುವ ಪ್ರಧಾನಿ ನರೇಂದ್ರ ಮೋದಿ ಸಹ ವಾಟ್ಸಪ್ ಚಾನಲ್ ಆರಂಭಿಸಿದ್ದಾರೆ. ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಮೋದಿ ವಾಟ್ಸಪ್ ಚಾನಲ್‌ಗೂ ಬಂದಿದ್ದಾರೆ. ಮೊದಲ ದಿನವೇ 4 ಲಕ್ಷ ಫಾಲೋವರ್ಸ್ ಪಡೆದಿದ್ದಾರೆ.
ಮಂಗಳವಾರ ನರೇಂದ್ರ ಮೋದಿ ನೂತನ ಸಂಸತ್ ಭವನಕ್ಕೆ ಪ್ರವೇಶ ಮಾಡುವ, ಕಾರ್ಯ ನಿರ್ವಹಣೆ ಮಾಡುವ ಫೋಟೋವನ್ನು ವಾಟ್ಸಪ್ ಚಾನಲ್ ಮೂಲಕ ಹಂಚಿಕೊಂಡಿದ್ದಾರೆ. ವಾಟ್ಸಪ್ ಸಮುದಾಯವನ್ನು ಸೇರಲು ರೋಮಾಂಚನವಾಗುತ್ತಿದೆ ಎಂದು ಅವರು ಬರೆದಿದ್ದಾರೆ.
ಮೆಟಾ ಫ್ಲಾಟ್‌ಫಾರಂ ಸಿಒಇ ಮಾರ್ಕ್ ಜುಕರ್ ಬರ್ಗ್ ವಾಟ್ಸಪ್‌ನ ಕೋಟ್ಯಾಂತರ ಗ್ರಾಹಕರಿಗಾಗಿ ವಾಟ್ಸಪ್ ಚಾನಲ್ ಎಂಬ ಹೊಸ ಫೀಚರ್ ಬಿಡುಗಡೆ ಮಾಡಿದ್ದರು. ಈ ಫೀಚರ್ ಈಗಾಗಲೇ ಜನರನ್ನು ಸೆಳೆಯುತ್ತಿದೆ. ನೆಚ್ಚಿನ ರಾಜಕೀಯ ನಾಯಕರು, ಸಿನಿಮಾ ತಾರೆಯರು, ಕ್ರಿಕೆಟ್ ತಾರೆಯರನ್ನು ಜನರು ಚಾನಲ್ ಮೂಲಕ ಫಾಲೋ ಮಾಡುತ್ತಿದ್ದಾರೆ.
ವಾಟ್ಸಪ್ ಚಾನಲ್ ಏಕಮುಖ ಸಂಪರ್ಕದ ವ್ಯವಸ್ಥೆಯಾಗಿದೆ. ಇಲ್ಲಿ ಅಡ್ಮಿನ್ ಮಾತ್ರ ಪೋಸ್ಟ್‌ಗಳನ್ನು ಹಾಕಲು ಸಾಧ್ಯ. ಫಾಲೋವರ್‌ಗಳು ಅವುಗಳನ್ನು ವೀಕ್ಷಿಸುವ ವ್ಯವಸ್ಥೆ ಇದೆ. ಗಣ್ಯರು ಸಾಮಾಜಿಕ ಜಾಲತಾಣಲ್ಲಿ ಲಿಂಕ್ ನೀಡುವ ಮೂಲಕ ಜನರು ತಮ್ಮನ್ನು ಫಾಲೋ ಮಾಡಲು ಆಹ್ವಾನ ನೀಡಬಹುದಾಗಿದೆ.
ಈಗಾಗಲೇ ಹಲವು ರಾಷ್ಟ್ರೀಯ ಸುದ್ದಿ ವಾಹಿನಿಗಳು, ರಾಜಕೀಯ ನಾಯಕರು, ಸಿನಿಮಾ ತಾರೆಯರು, ಕ್ರಿಕೆಟ್ ಆಟಗಾರರು ವಾಟ್ಸಪ್ ಚಾನಲ್ ಆರಂಭಿಸಿದ್ದಾರೆ. ನೀವು ವಾಟ್ಸಪ್ ಚಾನಲ್ ಸೇರಲು ವಾಟ್ಸಪ್‌ನಲ್ಲಿ ಅಪ್‌ಡೇಟ್ ಕ್ಲಿಕ್ ಮಾಡಿ ನಿಮ್ಮ ನೆಚ್ಚಿನ ಜನರನ್ನು ಹುಡುಕಿ, ಫಾಲೋ ಮಾಡಲು ಅವಕಾಶವಿದೆ.
-
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
ಕನ್ನಡಿಗರಿಗಿಂತ ಕೇರಳದವರೇ ಅದೃಷ್ಟವಂತರು: ವಯನಾಡಿಗೆ ಸಿದ್ದರಾಮಯ್ಯರಿಂದ 10 ಕೊಟಿ ರೂ ಅನುದಾನ: ಆಕ್ರೋಶ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?












Click it and Unblock the Notifications