ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ದರ ಹೆಚ್ಚಳಕ್ಕೆ ಮೋದಿ ಮೌನ ಮುರಿಯಲು ಉಮ್ಮನ್ ಚಾಂಡಿ ಆಗ್ರಹ

By Nayana
|
Google Oneindia Kannada News

ಬೆಂಗಳೂರು, ಮೇ 5: ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಇಂಧನ ದರ ಇಳಿಕೆ ಆಗಿದ್ದರೂ ದೇಶದಲ್ಲಿ ಮಾತ್ರ ಹೆಚ್ಚಳ ಆಗುತ್ತಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ದೇಶದ ಜ‌ನತೆಗೆ ಉತ್ತರ ನೀಡಬೇಕು ಎಂದು ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಆಗ್ರಹಿಸಿದ್ದಾರೆ.

ನಾನು ಶುಕ್ರವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದು, ಕಾಂಗ್ರೆಸ್ ಪರ ಅಲೆ ಇದೆ. ಸಿದ್ದರಾಮಯ್ಯ ಸರ್ಕಾರ ಬಡವರ ಬಗ್ಗೆ ವಿಷೇಶ ಕಾಳಜಿವಹಿಸಿ ಅನೇಕ ಕಾರ್ಯಕ್ರಮಗಳನ್ನ ಜಾರಿ ಮಾಡಿದೆ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನ ಮೆಚ್ಚಿ ಮತ್ತೊಮ್ಮೆ ಕರ್ನಾಟಕದ ಜನತೆ ಕಾಂಗ್ರೆಸ್ ಗೆ ಆಶೀರ್ವದಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

Chandy urges Modi to answer to the nation over fuel price

ಶಾಲಾ ಮಕ್ಕಳಿಗೆ ಉಚಿತ ಹಾಲು ವಿತರಿಸುವ ಕ್ಷೀರ ಭಾಗ್ಯ, ಏಷ್ಯದಲ್ಲೇ ದೊಡ್ಡದಾದ ಸೋಲಾರ್ ಪಾರ್ಕ್, ಕಡಿಮೆ ದರದಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರವನ್ನು ನೀಡಲಾಗುತ್ತದೆ. ಬೆಂಗಳೂರಿನ ಪೀಣ್ಯ ಕೈಗಾರಿಕಾ ಭಾಗದ ಇಂದಿರಾ ಕ್ಯಾಂಟೀನ್ ನಲ್ಲಿ ಭೋಜನ ಸ್ವೀಕರಿಸಿದೆ. ಉತ್ತಮ ಗುಣಮಟ್ಟದ ಆಹಾರ, ಕಡಿಮೆ ದರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.

ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಯಾವುದೇ ಭರವಸೆಯನ್ನೂ ಈಡೇರಿಸಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಮುಖವಾಗಿದ್ರೂ, ದೇಶದಲ್ಲಿ ಪೆಟ್ರೋಲ್ ದರ ಮಾತ್ರ ಇಳಿಕೆಯಾಗಿಲ್ಲ.ಜನತೆ ಕೇಂದ್ರದ ಸರ್ಕಾರದ ಧೋರಣೆಯಿಂದ ನೋವುಂಟಾಗಿದೆ ಎಂದರು,

English summary
Kerala former chief minister Oommen Chandy has urged the prime minister Narendra Modi should answer the nation over fuel price hiked in the country since the price had reduced in the international market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X