ಅತ್ಯಾಚಾರದಿಂದ ಮನನೊಂದ ಮಹಿಳೆ ಆತ್ಮಹತ್ಯೆ

ಚಾಮರಾಜನಗರ, ಆ.5 : ಅತ್ಯಾಚಾರದಿಂದ ಮನನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಸುಂಟ್ರಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆಸಿದೆ. ಹತ್ತು ದಿನಗಳ ಹಿಂದೆ ವೆಂಕಟಾಚಲಯ್ಯ ಎಂಬ ವ್ಯಕ್ತಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಮೀನಾಕ್ಷಿ (35) ಎಂದು ಗುರುತಿಸಲಾಗಿದೆ. ಮೀನಾಕ್ಷಿ ಅವರ ಮೇಲೆ ವೆಂಕಟಾಚಲಯ್ಯ (50) ಎಂಬ ವ್ಯಕ್ತಿ ಹತ್ತು ದಿನಗಳ ಹಿಂದೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಿಂದ ಮನನೊಂದ ಮೀನಾಕ್ಷಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Chamrajnagar

ಮೀನಾಕ್ಷಿ ಅವರ ಜಮೀನಿನ ಪಕ್ಕದಲ್ಲಿಯೇ ವೆಂಕಟಾಚಲಯ್ಯ ಅವರ ಜಮೀನು ಇದೆ. ಈತ ಪದೇ ಪದೇ ಮೀನಾಕ್ಷಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಹತ್ತು ದಿನಗಳ ಹಿಂದೆ ಹೊಲದಲ್ಲೇ ಮೀನಾಕ್ಷಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಯಿಂದ ಮನನೊಂದ ಮೀನಾಕ್ಷಿ ಅವರು ಮಂಗಳವಾರ ಮಧ್ಯಾಹ್ನ ವೆಂಕಟಾಚಲಯ್ಯ ಅವರ ತೋಟದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಂತರ ವೆಂಕಟಾಚಲಯ್ಯ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಹನೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+