CBSE 10 Results 2025: ಸಿಬಿಎಸ್‌ಇ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಟಾಪರ್ಸ್ ಪಟ್ಟಿ ಇಲ್ಲಿದೆ
CBSE 10th Results Updates: ಪ್ರಸ್ತಕ 2026ನೇ ಸಾಲಿನ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (CBSE) 10ನೇ ತರಗತಿ ಪರೀಕ್ಷೆಯ ಫಲಿತಾಂಶ ಇಂದು (ಏಪ್ರಿಲ್ 15) ಬಿಡುಗಡೆ ಆಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಮತ್ತು ಪೋಕಷರು ಸದರಿ ಫಲಿತಾಂಶವನ್ನು ಅಧಿಕೃತ www.cbse.gov.in ನಲ್ಲಿ ವೀಕ್ಷಿಸಬಹುದು. ಫಲಿತಾಂಶದೊಂದಿಗೆ ಅತ್ಯುತ್ತಮ ಸಾಧಕರ ಪಟ್ಟಿಯನ್ನು ಮಂಡಳಿಯು ಬಿಡುಗಡೆ ಮಾಡುತ್ತದೆ. ಅದರಲ್ಲಿ ಜಿಲ್ಲಾವಾರು ಮತ್ತು ಪ್ರದೇಶವಾರು ಟಾಪರ್ಸ್ ಪಟ್ಟಿ ಸಿಗಲಿದೆ.
ಸಿಬಿಎಸ್‌ಇ ವಿದ್ಯಾರ್ಥಿಗಳು ಅಗತ್ಯ ಮಾಹಿತಿ ಹಾಕಿ ಈ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು. ಬಳಿಕ ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶ 2026 ವಿಭಾಗಕ್ಕೆ ಭೇಟಿ ನೀಡಿ ನಿಮ್ಮ ಫಲಿತಾಂಶ ನೋಡಬಹುದು. ಸಿಬಿಎಸ್‌ಇಯು 10ನೇ ತರಗತಿಯ ಪರೀಕ್ಷೆಯನ್ನು ಕಳೆದ ಫೆಬ್ರವರಿ 17 ರಿಂದ ಮಾರ್ಚ್ 11 ರವರೆಗೆ ನಡೆಸಿತ್ತು. ಆ ಪರೀಕ್ಷೆಗಳ ಫಲಿತಾಂಶ ಬಿಡುಗಡೆಗೆ ಪೋಷಕರು, ಮಕ್ಕಳು ಕಾಯುತ್ತಿದ್ದಾರೆ.

2025ರಲ್ಲಿ ಸಿಬಿಎಸ್‌ಇ ಫಲಿತಾಂಶವು ಮೇ 13 ರಂದು ಬಿಡುಗಡೆ ಮಾಡಲಾಗಿತ್ತು. ಆಗ ಒಟ್ಟಾರೆ ಉತ್ತೀರ್ಣರಾದವರ ಪ್ರಮಾಣ ಶೇ.93.66 ರಷ್ಟಿತ್ತು. 2025ರ 10ನೇ ತರಗತಿಯ ಸಿಬಿಎಸ್‌ಇ ರಾಷ್ಟ್ರೀಯ ಟಾಪರ್‌ಗಳ ಪಟ್ಟಿ ಇಲ್ಲಿದೆ.
ಡಿಜಿಲಾಕರ್ & ಉಮಾಂಗ್‌ನಲ್ಲೂ ಫಲಿತಾಂಶ ಲಭ್ಯ
ಸಿಬಿಎಸ್ಇ10ನೇ ತರಗತಿಯ ಟಾಪರ್‌ಗಳ ಪಟ್ಟಿ ಬಿಡುಗಡೆ ಮಾಡುವುದಿಲ್ಲ. ಏಕೆಂದರೆ ಬಿಡುಗಡೆ ಮಾಡುವುದರಿಂದ ಅನಗತ್ಯ ಶೈಕ್ಷಣಿಕ ಒತ್ತಡ ಉಂಟಾಗುತ್ತದೆ. ವಿದ್ಯಾರ್ಥಿಗಳಲ್ಲಿ ಅನಾರೋಗ್ಯಕರ ಸ್ಪರ್ಧೆ ಏರ್ಪಡುತ್ತದೆ. ಅದನ್ನು ತಪ್ಪಿಸಲು ಪಟ್ಟಿ ಬಿಡದೇ ಮೆರಿಟ್ ಲಿಸ್ಟ್ ಅನ್ನು ಬಿಡುಗಡೆ ಮಾಡಲಾಗುತ್ತದೆ. ಅದರ ಆಧಾರದಲ್ಲಿ ಇವರು ಟಾಪರ್ ಎಂದು ನಿರ್ಧರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಸಿಬಿಎಸ್‌ಇ ಫಲಿತಾಂಶವನ್ನು cbse.gov.in ಮಾತ್ರವಲ್ಲದೇ DigiLocker ಮತ್ತು UMANG ಆಪ್‌ನಲ್ಲೂ ಸಹ ಪರಿಶೀಲಿಸಲು ಅವಕಾಶ ನೀಡಲಾಗಿದೆ.
CBSE ರಾಷ್ಟ್ರೀಯ ಟಾಪರ್‌ಗಳ ಪಟ್ಟಿ 2025
ಅಯಾನ್ ದತ್ತಾ: 100%
ಠಾಕೂರ್ ರುದ್ರ ಪ್ರತಾಪ್: 99.8%
ಶ್ರೀಯಾ ಸೇಥಿ ಮಜುಂದಾರ್: 99.8%
ಅನುರೀತ್ ಕೌರ್: 99.6%
ಸರ್ವೇಶ್ ಪ್ರಕಾಶ್: 99.6%
ಸಂರೀತ್ ವಶಿಷ್ಠ: 99.6%
ಶ್ರಿತಿ ಭಾವಸರ್: 99.6%
ತನ್ವಿ ಗಾರ್ಗ್: 99.4%
ವೈಷ್ಣವಿ ಪ್ರತಾಪ್: 99.4%
ಪ್ರಿನ್ಸ್ ಗುಪ್ತಾ: 99.2%
ಸಾನ್ವಿ ಯಾದವ್: 99.2%
ವೈಭವಿ ಟಂಡನ್: 99.2%
ದಿವ್ಯಾಂಶ್: 99.2%
ನಿಶಾಂತ್ ಬಡಗುಜಾರ್: 99.2%
ಆಂಚಲ್ ಅಗರ್ವಾಲ್: 99.2%
ಸ್ವಾಂತನ್ ಕಶ್ಯಪ್: 99.2%
ಪಿಯಾನ್ಶ್: 99.2%
ಅನ್ವೇಷ ಸತ್ತಾರ್ಥಿ: 99.2%
ಸಿಬಿಎಸ್‌ಇ ಪ್ರದೇಶವಾರು ಟಾಪರ್ಸ್ ವಿವರ -2025
ನಂದಿನಿ ಯಾದವ್ (ದೆಹಲಿ ಪಬ್ಲಿಕ್ ಸ್ಕೂಲ್, ಮಥುರಾ, ಉತ್ತರ ಪ್ರದೇಶ) ಶೇ.99 (495 ಅಂಕ) ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಯುವರಾಜ್ ಕುಮಾರ್ (ಬರ್ನ್‌ಪುರ್ ರಿವರ್‌ಸೈಡ್ ಸ್ಕೂಲ್, ಬರ್ನ್‌ಪುರ್, ಪಶ್ಚಿಮ ಬಂಗಾಳ) ಶೇ.98.6 (493 ಅಂಕ) ಪಡೆದಿದ್ದಾರೆ. ಶೌರ್ಯ ಶುಕ್ಲಾ (ಡಿಪಿಎಸ್ ರೂಬೀಪಾರ್ಕ್, ಕೋಲ್ಕತ್ತಾ, ಪಶ್ಚಿಮ ಬಂಗಾಳ), ರಿಯಾನ್ ಠಾಕೂರ್ (ಡಿಎವಿ ಪಬ್ಲಿಕ್ ಸ್ಕೂಲ್, ಚಂಬಾ, ಹಿಮಾಚಲ ಪ್ರದೇಶ), ಸಕ್ಷಮ್ ಗುಪ್ತಾ (ಕೆ ಆರ್ ಮಂಗಳಮ್ ವರ್ಲ್ಡ್ ಸ್ಕೂಲ್, ಗುರ್‌ಗಾಂವ್, ಹರಿಯಾಣ) ಇವರೆಲ್ಲರೂ ತಲಾ ಶೇ.98.4 (492 ಅಂಕಗಳು) ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಸಂತೋಷ್ ಸಕ್ಯಸಿಂಗ್ ಪ್ರಧಾನ್ (ಕೇಂದ್ರೀಯ ವಿದ್ಯಾಲಯ, ಪುರಿ, ಒಡಿಶಾ) ಶೇ.98 (490 ಅಂಕ), ಸಬಿತಾ ಮಂಡಲ್ (ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಬರ್ದಮಾನ್, ಪಶ್ಚಿಮ ಬಂಗಾಳ) ಶೇ. 97.6 (488 ಅಂಕ), ರಾಕೇಶ್ ಪಲ್ಲಗನಿ (ವಿಘ್ನಾನ್ಸ್ ವರ್ಲ್ಡ್ ಒನ್ ಸ್ಕೂಲ್, ಭೋಗಂಪುರಂ, ಆಂಧ್ರಪ್ರದೇಶ) ಶೇ.97.2 (486 ಅಂಕ), ಕೌಸ್ತುಭ್ ಕೇಸರವಾನಿ (ಸೆಮ್‌ಸ್ಟಾರ್ ಗ್ಲೋಬಲ್ ಸ್ಕೂಲ್, ಪ್ರಯಾಗ್‌ರಾಜ್, ಉತ್ತರ ಪ್ರದೇಶ) ಶೇ. 97.2 (486 ಅಂಕ), ಮೆಹ್ತಾಬ್ ಸಿಂಗ್ (ಶ್ರೀ ದಸ್‌ಮೇಶ್ ಅಕಾಡೆಮಿ, ಆನಂದಪುರ್ ಸಾಹಿಬ್, ಪಂಜಾಬ್) ಶೇ.96.2 (481 ಅಂಕ) ಪಡೆದಿದ್ದಾರೆ.
ಇನ್ನು ಆದಿತ್ಯ ಮಂತ್ರಿ (ನಳಂದ ವಿದ್ಯಾಲಯ, ಮೋರ್ಬಿ, ಗುಜರಾತ್) ಶೇ.95.8 (479 ಅಂಕ), ಕುಡ್ಸಿಯಾ ಖಾನ್ (ಪಯೋನಿಯರ್ ಪಬ್ಲಿಕ್ ಸ್ಕೂಲ್, ಬಲರಾಮಪುರ, ಉತ್ತರ ಪ್ರದೇಶ) ಶೇ. 95.6 (478 ಅಂಕ), ರಜತ್ ಸಿಂಗ್ (ಯೂರೋ ಇಂಟರ್‌ನ್ಯಾಷನಲ್ ಸ್ಕೂಲ್, ಸಿಕರ್, ರಾಜಸ್ಥಾನ) ಶೇ.95.2 (476 ಅಂಕ), ಯುವರಾಜ್ ಸೇನ್‌ಗುಪ್ತಾ (ವಿಬ್‌ಗ್ಯಾರ್, ಮುಂಬೈ, ಮಹಾರಾಷ್ಟ್ರ) ಶೇ. 95.2 (476 ಅಂಕ), ಪ್ರಣವ್ ಗಾರ್ಗ್ (ಡಿಪಿಎಸ್, ಸಹರಾನ್‌ಪುರ, ಉತ್ತರ ಪ್ರದೇಶ) ಶೇ. 94.8 (474 ಅಂಕ) ಗಳಿಸಿದ್ದಾರೆ.
ಶ್ಲೋಕ್ ಕೇಶರವಾನಿ (ಸೆಂಟ್ರಲ್ ಪಬ್. ಸೀ. ಸೆಕೆಂಡ್ ಚಕ್‌ಘಾಟ್, ರೇವಾ, ಮಧ್ಯಪ್ರದೇಶ) ಶೇ.94.2 (471 ಅಂಕ), ಶ್ರೇಯಾ ಸಿಂಗ್ (ಸ್ಟಾರ್ಲಿಂಗ್ ಇಂಟರ್‌ನ್ಯಾಷನಲ್ ಸ್ಕೂಲ್, ಕೋಲ್ಕತ್ತಾ, ಪಶ್ಚಿಮ ಬಂಗಾಳ) ಶೇ.93.8 (469 ಅಂಕ), ಆಯುಷ್ (ಎಸ್ ಎಲ್ ಸೂರಿ ಡಿಎವಿ ಪಬ್ಲಿಕ್ ಸ್ಕೂಲ್, ಜನಕ್‌ಪುರಿ, ದೆಹಲಿ) ಶೇ.87.6 (438 ಅಂಕ), ಮತ್ತು ದಿವ್ಯಾಂಶ್ ಯಾದವ್ (ಡಿ ಎನ್ ಮೆಮ್ ಸನ್‌ಶೈನ್ ಸ್ಕೂಲ್, ಆಜಮ್‌ಗಢ, ಉತ್ತರ ಪ್ರದೇಶ) ಶೇ.87 (435 ಅಂಕ) ಗಳಿಸಿ ಉತ್ತೀರ್ಣರಾಗಿದ್ದಾರೆ.
ಸಿಬಿಎಸ್‌ಇ 2025 ಜಿಲ್ಲಾವಾರು ತೇರ್ಗಡೆ ವಿವರ
* ದೆಹಲಿ ಪ್ರದೇಶ (ಒಟ್ಟಾರೆ) ಶೇ. 95.14ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇಲ್ಲಿ 3,28,701 ವಿದ್ಯಾರ್ಥಿಗಳು ನೋಂದಾಯಿಸಿ, 3,27,041 ಹಾಜರಾಗಿದ್ದು, ಒಟ್ಟು 3,11,138 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
* ದೆಹಲಿ-ಪಶ್ಚಿಮ ಶೇ. 95.24ರಷ್ಟು (1,28,572 ನೋಂದಣಿ) ಉತ್ತೀರ್ಣ
* ದೆಹಲಿ-ಪೂರ್ವ ಶೇ. 95.07ರಷ್ಟು (2,00,129 ನೋಂದಣಿ) ಉತ್ತೀರ್ಣ
* ವಿದೇಶಿ ಶಾಲೆಗಳ 29,847 ನೋಂದಣಿಗಳಲ್ಲಿ ಶೇ. 98.57 ರಷ್ಟು ಮಂದಿ ತೇರ್ಗಡೆ
ಸಿಬಿಎಸ್ಇ 2025: ಉತ್ತಮ ಪ್ರದರ್ಶನ ನೀಡಿದ ಜಿಲ್ಲಾವಾರು ಟಾಪರ್ಸ್ ಪಟ್ಟಿ
* ತಿರುವನಂತಪುರಂ: 99.79
* ವಿಜಯವಾಡ: 99.79
* ಬೆಂಗಳೂರು: 98.90
* ಚೆನ್ನೈ: 98.71
* ಪುಣೆ: 96.54
* ಅಜ್ಮೀರ್: 95.44
* ದೆಹಲಿ ಪಶ್ಚಿಮ: 95.24
* ದೆಹಲಿ ಪೂರ್ವ: 95.07
* ಚಂಡೀಗಢ:93.71
* ಪಂಚಕುಲ: 92.77
* ಭೋಪಾಲ್: 92.71
* ಭುವನೇಶ್ವರ : 92.64
* ಪಾಟ್ನಾ: 91.90
* ಡೆಹ್ರಾಡೂನ್: 91.60
* ಪ್ರಯಾಗ್‌ರಾಜ್ : 91.01
* ನೋಯ್ಡಾ: 89.41
* ಗುವಾಹಟಿ : 84.14












Click it and Unblock the Notifications