CBSE Results 2024: ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಡೌನ್‌ಲೋಡ್ ಮಾಡುವುದು ಹೇಗೆ? ಈ ವಿಧಾನ ತಿಳಿಯಿರಿ
ಬೆಂಗಳೂರು, ಮೇ 13: ಡಿಜಿಲಾಕರ್ ವೆಬ್‌ಸೈಟ್/ಮೊಬೈಲ್ ಆಪ್ಲಿಕೇಷನ್ ಅನ್ನು ಓರಿಜಿನಲ್ ದಾಖಲಾತಿಗಳ ಡೌನ್‌ಲೋಡ್‌ಗೆ ಬಳಸಲಾಗುತ್ತಿದೆ. ಇದರಲ್ಲಿನ ದಾಖಲೆಗಳು ಮೂಲ ಪ್ರತಿ (Original Document) ರೀತಿಯಲ್ಲಿ ಪರಿಗಣಿಸಲಾಗುತ್ತಿದೆ. ಈ ಕಾರಣಕ್ಕೆ ಸರ್ಕಾರ ಬೋರ್ಡ್ ಪರೀಕ್ಷಾ ಅಂಕಪಟ್ಟಿಯನ್ನು ಈ ಆಪ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.
ಡಿಜಿಲಾಕರ್ ಇದೊಂದು ಭಾರತ ಸರ್ಕಾರದ ಅಧಿಕೃತ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದೆ. ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಆಪ್ ಡೌನ್‌ಲೋಡ್ ಮಾಡಿಕೊಂಡು ನೀವು ಎಲ್ಲಿ ಬೇಕಾದರೂ ಬೋರ್ಡ್ ಪರೀಕ್ಷೆಯ ಮಾರ್ಕ್‌ಶೀಟ್ ಡೌನ್‌ಲೋಡ್ ಮಾಡುವ ಸೌಲಭ್ಯ ಇದು ಒದಗಿಸುತ್ತದೆ.

ಹಾಗಾದರೆ ಇನ್ನೇಕೆ ತಡ, ವಿವಿಧ ಮಾರ್ಕ್ಸ್‌ಶೀಟ್, ಆರ್‌ಟಿಒ ದಾಖಲೆ, ಆಧಾರ್ ನಂತರ ನೀವು CBSE ದಾಖಲಾತಿಗಳನ್ನು ಈ ಪ್ಲಾಟ್‌ಫಾರ್ಮ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಸದ್ಯ ನೀವು ನಿಮ್ಮ ಫಲಿತಾಂಶವನ್ನು cbseresults.nic.in, results.cbse.nic.in, cbse.gov.in, ಅಥವಾ results.gov.in ನಲ್ಲಿ ಅಧಿಕೃತ CBSE ವೆಬ್‌ಸೈಟ್‌ಗೆ ಭೇಟಿ ನೀಡಬೇಕಿದೆ.
CBSE ಬೋರ್ಡ್ 12 ನೇ ತರಗತಿ ಪರೀಕ್ಷೆಗಳು 2024 ಹಾಜರಾದ ವಿದ್ಯಾರ್ಥಿಗಳು ನೀವು CBSE ಅಧಿಕೃತ ವೆಬ್‌ಸೈಟ್/ಡಿಜಿಲಾಕರ್ ವೆಬ್‌ಸೈಟ್/ಡಿಜಿಲಾಕರ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳುವ ಹಂತ-ವಿಧಾನಗಳನ್ನು ಇಲ್ಲಿ ಪರಿಶೀಲಿಸಿ.
ಮೊದಲು CBSE ಪೋರ್ಟ್‌ಲ್‌ನಲ್ಲಿ ಅಂಕ ಪಡೆಯುವುದನ್ನು ತಿಳಿಯಿರಿ. CBSE ಪೋರ್ಟಲ್‌ನಲ್ಲಿ ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿತ ವಿದ್ಯಾರ್ಥಿಗಳು ಈ ಕೆಳಗಿನ ಹಂತ ಗಮನಿಸಿ.

* ಮೊದಲು ವಿದ್ಯಾರ್ಥಿಗಳು ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಗತ್ಯ ನಿಖರ ಮಾಹಿತಿಗಳ ಸಹಿತ ನೀವು ಲಾಗಿನ್ ಆಗಬೇಕು. ( ಸೈನ್ ಇನ್‌ಗೆ ಐಡಿ,ಪಾಸ್‌ವರ್ಡ್ ಇಲ್ಲವೇ ಆಧಾರ್ ಸಂಖ್ಯೆ ಕೇಳಬಹುದು)
* ಸೈನ್-ಇನ್ ಆದ ಕೂಡಲೇ ನೀವು ಮುಖಪುಟ ಪ್ರವೇಶಿಸುತ್ತಿರಿ. ಅಲ್ಲಿ ಡಿಜಿಟಲ್ ಲಾಕರ್ ಡ್ಯಾಶ್‌ಬೋರ್ಡ್ ಪರದೆಯು ಕಾಣುತ್ತದೆ. ಮುಖಪುಟದ ಬಲಭಾಗದಲ್ಲಿ ನಿಮಗೆ "ಇತ್ತೀಚಿನ ಅಧಿಸೂಚನೆ" ಕಾಣುತ್ತದೆ.
* ಅದರ ಅಡಿಯಲ್ಲಿ, ನಿಮ್ಮ CBSE ಡಿಜಿಟಲ್ ಮಾರ್ಕ್‌ಶೀಟ್ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು.
* ನಂತರ ನೀವು ಆಧಾರ್ ಕಾರ್ಡ್ ಸಂಖ್ಯೆಯನ್ನು ಡಿಜಿಲಾಕರ್‌ಗೆ ಸಿಂಕ್ ಮಾಡುವ ಮೂಲಕ ಡೌನ್‌ಲೋಡಿಂಗ್ ಪ್ರಕ್ರಿಯೆ ಮುಂದುವರಿಸಬಹುದು.
* ಬಳಿಕ ಅಂತಿಮ ಹಂತದಲ್ಲಿ ಬಳಕೆದಾರರು CBSE ಮಾರ್ಕ್‌ಶೀಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಒಬ್ಬರು ಹೆಚ್ಚುವರಿಯಾಗಿ ಅದೇ ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಪಡೆಯಲು ಅವಕಾಶ ಇದೆ.
DigiLocker ವೆಬ್‌ಸೈಟ್‌ನಿಂದ ಡೌನ್‌ಲೋಡ್ ವಿಧಾನಗಳು
* ವಿದ್ಯಾರ್ಥಿಗಳು ಮೊದಲು ಡಿಜಿಲಾಕರ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಇಲ್ಲಿ ಸಹ ಕೇಳುವ ನಿಮ್ಮ ಐಡಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅಥವಾ ಆಧಾರ್ ಸಂಖ್ಯೆಗಳನ್ನು ನಮೂದಿಸಿ ಸೈನ್ ಇನ್ ಆಗಬೇಕು.
* ನಂತರ ನೀವು ನಿಗದಿತ ಸ್ಥಳದಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಹಾಕಬೇಕು. ಕೂಡಲೇ ನೋಂದಾಯಿತ ನಿಮ್ಮ ಮೊಬೈಲ್ ಸಂಖ್ಯೆ OTP ಬರುತ್ತದೆ.
* ಒಟಿಪಿ ಸಂಖ್ಯೆಯನ್ನು ನಮೂದಿಸಿ ಮತ್ತು ಪ್ರೊಫೈಲ್ ಪುಟಕ್ಕೆ ಭೇಟಿ ನೀಡಬೇಕು. ಇದೇ ವೇಳೆ ನಿಮ್ಮ ಆಧಾರ್ ಸಂಖ್ಯೆಯನ್ನು ಡಿಜಿಲಾಕರ್ ಜತೆ ಸಿಂಕ್ ಮಾಡಲು ಕೇಳುತ್ತದೆ. ಅದಕ್ಕೆ ಸಮ್ಮತಿಸಬೇಕು. ನಂತರವೇ ನಿಮ್ಮ ಆಧಾರ್ ಪ್ರೊಫೈಲ್ ಡಿಜಿಲಾಕರ್‌ನಲ್ಲಿ ಕಾಣಿಸುತ್ತದೆ.
* ನಂತರ ಪರದ ಮೇಲೆ ಕಾಣುವ ಪಾಲುದಾರ (ಸರ್ಕಾರ/ಸಿಬಿಎಸ್‌ಇ/ಆರ್‌ಟಿಓ ಇತ್ಯಾದಿ) ದಾಖಲೆಗಳ ಆಯ್ಕೆಯನ್ನು ಪ್ರದರ್ಶಿಸುತ್ತದೆ. ಆಗ ನೀವು ಡ್ರಾಪ್-ಡೌನ್‌ನಿಂದ CBSE ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
* ಯಾವ ಪ್ರಕಾರದ ದಾಖಲೆಗಳು ಎಂದು ಕೇಳುತ್ತದೆ. ಆಗ SSC ಪ್ರಮಾಣಪತ್ರ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
* ನಂತರ ಈ ಎಲ್ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮ್ಮ ವರ್ಷ ಮತ್ತು ರೋಲ್ ಸಂಖ್ಯೆ ನಮೂದಿಸಿ. ನಂತರ ಗೆಟ್ ಡಾಕ್ಯುಮೆಂಟ್ ಅನ್ನು ಆಯ್ಕೆ ಮಾಡಿಕೊಳ್ಳಿ.
* ಬಳಿಕ ಪಾಪ್-ಅಪ್ ಬಾಕ್ಸ್‌ನಲ್ಲಿ ಮೂಲ ದತ್ತಾಂಶ ಎಂಬ ಸಂದೇಶ ಕಾಣುತ್ತದೆ. ಇದು ನೇರ CBSE ಸರ್ವರ್‌ಗಳಿಂದ ಡೇಟಾವನ್ನು ಇಲ್ಲಿಗೆ ಪಡೆದು ನಿಮಗೆ ಕಾಣವುಂತೆ ಪ್ರದರ್ಶಿಸುತ್ತದೆ.
* ನಂತರ ಅದೇ ಪುಟದಲ್ಲಿ ಲಭ್ಯವಿರುವ 'ಡಿಜಿಲಾಕರ್ ಸೇವ್' ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
* ಕೊನೆಗೆ ನಿಮಗೆ ಕಾಣುವ ದಾಖಲಾತಿಗಳನ್ನು ಪರದೇ ಮೇಲೆಯೇ ವಿಕ್ಷಿಸಬಹುದು. ಇದು ಹೌದು ಎಂದು ಖಚಿತವಾಗುತ್ತಿದ್ದಂತೆ ಡೌನ್‌ಲೋಡ್ ಆಯ್ಕೆ ಮಾಡಿಕೊಂಡರೆ ನಿಮ್ಮ ಸಿಬಿಎಸ್‌ಇ ಅಂಕಪಟ್ಟಿ ಡೌನ್‌ಲೋಡ್ ಆಗುತ್ತದೆ.
DigiLocker ಅಪ್ಲಿಕೇಶನ್‌ನಿಂದ ಅಂಕಪಟ್ಟಿ ಡೌನ್‌ಲೋಡ್ ಹೇಗೆ?
* ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಪ್ಲೇಸ್ಟೋರ್‌ನಿಂದ, ಆಪಲ್ ಬಳಕೆದಾರರು ಆಪಲ್ ಸ್ಟೋರ್‌ನಿಂದ DigiLocker ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ
* ಡಿಜಿಲಾಕರ್ ಆಪ್ ಡೌನ್‌ಲೋಡ್ ಆದ ನಂತರ ಒಳಪ್ರವೇಶಿಸುವ ಲಿಂಕ್ ಕ್ಲಿಕ್ ಮಾಡಿ.
* CBSE ಬೋರ್ಡ್‌ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆ ಹಾಕಿ, ತಕ್ಷಣವೇ ಬರುವ OTP ಅಲ್ಲಿ ನಮೂದಿಸಿ ಓಕೆ ಕೊಡಿ.
* ನಂತರ ಈ ಅಪ್ಲಿಕೇಶನ್‌ನ ಪರದೇಯಲ್ಲಿ ಕಾಣುವ "ಶಿಕ್ಷಣ" ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ ಕೇಳುವ ನಿಮ್ಮ ಹೆಸರು, ಸಿಬಿಎಸ್‌ಇ ರೋಲ್ ಸಂಖ್ಯೆ ಹಾಗೂ ಇನ್ನಿತರ ಅಗತ್ಯ ಮಾಹಿತಿ ನಮೂದಿಸಿ.
* ಅಂತಿಮವಾಗಿ ಅಲ್ಲಿ ಕಾಣುವ ಮಾರ್ಕ್‌ಶೀಟ್ ಅನ್ನು ಅನ್ನು PDF ನಲ್ಲಿ ಡೌನ್‌ಲೋಡ್ ಮಾಡಿಕೊಂಡರೆ ಅದು ಸದಾ ಡಿಜಿಲಾಕರ್ ಆಪ್ ನಲ್ಲಿ ಲಭ್ಯವಿರುತ್ತದೆ. ಮುಖ್ಯವಾಗಿ ಇಲ್ಲಿ ಲಭ್ಯವಿರುವ ಎಲ್ಲ ಸರ್ಕಾರಿ ದಾಖಲಾತಿಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಇವುಗಳನ್ನು ಓರಿಜಿನಲ್ ಪ್ರತಿಗಳೆಂದು ಪರಿಗಣಿಸಲಾಗುತ್ತದೆ.












Click it and Unblock the Notifications