ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂನಲ್ಲಿ ಸಲ್ಲಿಕೆಯಾಗದ ಮೇಲ್ಮನವಿ, ಕಾವೇರಿ ವಿವಾದ ಅಂತ್ಯ?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮಾರ್ಚ್ 21: ಫೆಬ್ರವರಿ 16ರಂದು ಸುಪ್ರೀಂ ಕೋರ್ಟ್ ಕಾವೇರಿ ಪ್ರಕರಣದಲ್ಲಿ ಅಂತಿಮ ತೀರ್ಪು ನೀಡಿತ್ತು. ಇದೀಗ ತೀರ್ಪು ನೀಡಿ ತಿಂಗಳಾಗುತ್ತಾ ಬಂದರೂ ಕರ್ನಾಟಕವಾಗಲಿ, ತಮಿಳುನಾಡಾಗಲಿ ಮೇಲ್ಮನವಿ ಸಲ್ಲಿಸಿಲ್ಲ.

ಈ ಮೂಲಕ 200 ವರ್ಷಗಳ ಹಿಂದಿನ ಕಾವೇರಿ ಜಲ ವಿವಾದ ಅಂತ್ಯವಾಗಿದೆ ಎಂದು ಕಾನೂನು ತಜ್ಞರು ವಿಶ್ಲೇಷಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ, ಕರ್ನಾಟಕ ಪರ ಹಿರಿಯ ವಕೀಲ ಮೋಹನ್ ಕಾತರಕಿ, ಕೊನೆಗೂ ಪ್ರಕರಣದಲ್ಲಿ ಶಾಂತಿ ನೆಲೆಸಿದೆ ಎಂದಿದ್ದಾರೆ.

ಕಾವೇರಿ ಅಂತಿಮ ತೀರ್ಪು : ತಮಿಳುನಾಡಿಗೆ ಕಹಿ, ಕರ್ನಾಟಕಕ್ಕೆ ಸಿಹಿಕಾವೇರಿ ಅಂತಿಮ ತೀರ್ಪು : ತಮಿಳುನಾಡಿಗೆ ಕಹಿ, ಕರ್ನಾಟಕಕ್ಕೆ ಸಿಹಿ

"ಎರಡೂ ರಾಜ್ಯಗಳು ಈ ವಿಚಾರದಲ್ಲಿ ಶಾಂತಿ ಕಾಪಾಡಲು ನಿರ್ಧರಿಸಿದ್ದು ಇದೊಂದು ಐತಿಹಾಸಿಕ ತೀರ್ಮಾನ," ಎಂದವರು ಹೇಳಿದ್ದಾರೆ. ಈ ತೀರ್ಪಿಗೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಸಮಯಾವಕಾಶವಿದ್ದು ತಮಿಳುನಾಡು ಮತ್ತು ಕರ್ನಾಟಕ ಎರಡೂ ಮೇಲ್ಮನವಿ ಸಲ್ಲಿಸಿಲ್ಲ.

Cauvery: With no review filed in SC have TN, Karnataka decided to peace it out

ಮೇಲ್ಮನವಿ ಸಲ್ಲಿಸಲು ವಿಳಂಬವಾಗಿದ್ದಕ್ಕೆ ಕಾರಣ ನೀಡಿ ಈಗಲೂ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಆದರೆ ಈ ಸಾಧ್ಯತೆಗಳು ತೀರಾ ಕಡಿಮೆ ಎನ್ನುತ್ತಾರೆ ಮೋಹನ್ ಕಾತರಕಿ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಸದ್ಯಕ್ಕೆ ತೀರ್ಪಿನ ಬಗ್ಗೆ ಕೇರಳ ಮಾತ್ರ ಮೇಲ್ಮನವಿ ಸಲ್ಲಿಸಿದೆ. ಜತೆಗೆ ಇದರಲ್ಲಿ ಸೀಮಿತ ಅಂಶಗಳು ಮಾತ್ರ ಇದೆ. ಜತೆಗೆ ಪ್ರಕರಣದಲ್ಲಿ ಕೇರಳ ಮುಖ್ಯ ಕಕ್ಷಿದಾರ ರಾಜ್ಯವೂ ಅಲ್ಲ. ಒಂದೊಮ್ಮೆ ಮೇಲ್ಮನವಿಯನ್ನು ಪುರಸ್ಕರಿಸಿದರೂ ಮೂಲ ಆದೇಶಕ್ಕೆ ಯಾವುದೇ ಬದಲಾವಣೆಯಾಗುವುದಿಲ್ಲ.

ರಾಜ್ಯದ ಒಳಗೆ ತನ್ನ ಪಾಲಿನ 30 ಟಿಎಂಸಿ ನೀರನ್ನು ತಿರುಗಿಸಲು ಅನುಮತಿ ಕೋರಿ ಕೇರಳ ಸರ್ಕಾರ ಅರ್ಜಿ ಸಲ್ಲಿಸಿದೆ.

English summary
On February 16, the Supreme Court delivered its final verdict on the Cauvery issue. It has been over a month and neither Tamil Nadu or Karnataka have filed a review petition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X