ಫೋಟೋ ಪ್ರಕರಣ : ರವೀಂದ್ರನಾಥ್‌ ಮೇಲಿನ ಆರೋಪ ರದ್ದು

Posted By:
Subscribe to Oneindia Kannada

ಬೆಂಗಳೂರು, ಜನವರಿ 23 : ಕಾಫಿಶಾಪ್‌ನಲ್ಲಿ ಯುವತಿಯ ಫೋಟೋ ತೆಗೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಪಿ.ರವೀಂದ್ರನಾಥ್ ಮೇಲಿನ ಆರೋಪಗಳನ್ನು ಸಿಎಟಿ ರದ್ದುಗೊಳಿಸಿದೆ. ಪ್ರಕರಣದ ವಿಚಾರಣೆಗೆ ನ್ಯಾ.ಕೇಶವನಾರಾಯಣ ನೇತೃತ್ವದ ಸಮಿತಿಯನ್ನು ರಚನೆ ಮಾಡಲಾಗಿತ್ತು.

ನ್ಯಾ.ಕೇಶವನಾರಾಯಣ ನೇತೃತ್ವದ ಸಮಿತಿ ವಿಚಾರಣೆಗೆ ಹಾಜರಾಗುವಂತೆ ರವೀಂದ್ರನಾಥ್ ಅವರಿಗೆ ನೋಟಿಸ್ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಮೆಟ್ಟಿಲೇರಿದ್ದರು. [ರವೀಂದ್ರನಾಥ್ ಪರ ನಿಂತ ಮೀಸಲು ಪೊಲೀಸ್ ಪಡೆ]

ravindranath

ಅರ್ಜಿಯ ವಿಚಾರಣೆ ನಡೆಸಿದ ಡಾ.ಕೆ.ಬಿ.ಸುರೇಶ್‌ ಹಾಗೂ ಕೆ.ಪ್ರಧಾನ್‌ ಅವರ ದ್ವಿಸದಸ್ಯ ಪೀಠ, ನೋಟಿಸ್ ಮತ್ತು ರವೀಂದ್ರನಾಥ್ ಅವರ ಮೇಲಿರುವ ಆರೋಪಗಳನ್ನು ರದ್ದುಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದೆ. ರವೀಂದ್ರನಾಥ್ ಅವರ ವಿರುದ್ಧದ ಆರೋಪಗಳಿಗೆ ಪೂರಕವಾದ ಸಾಕ್ಷಿಗಳಿಲ್ಲ ಎಂದು ನ್ಯಾಯಮಂಡಳಿ ಹೇಳಿದೆ. [ಫೋಟೋ ಕ್ಲಿಕ್ಕಿಸಿದ ಎಡಿಜಿಪಿ]

ಮೊಬೈಲ್ ಪೊಲೀಸರ ವಶದಲ್ಲಿತ್ತು : ರವೀಂದ್ರನಾಥ್ ಅವರ ಮೊಬೈಲ್‌ಅನ್ನು ಪೊಲೀಸರು 2014ರ ಮೇ 26ರಂದು 10.15ಕ್ಕೆ ವಶಕ್ಕೆ ಪಡೆದಿದ್ದಾರೆ. ಯುವತಿಯ ಫೋಟೋವನ್ನು 10.45 ಹಾಗೂ 10.46ಕ್ಕೆ ಕ್ಲಿಕ್ಕಿಸಲಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲದ ವರದಿ ಹೇಳುತ್ತಿದೆ. [ಪೊಲೀಸರ ಗಲಾಟೆ : ಸರ್ಕಾರದ ಕಿವಿ ಹಿಂಡಿದ ರಾಜ್ಯಪಾಲರು]

ಆದ್ದರಿಂದ, ರವೀಂದ್ರನಾಥ್‌ ಅವರೇ ಯುವತಿಯ ಫೋಟೋ ತೆಗೆದಿದ್ದಾರೆ ಎನ್ನುವುದಕ್ಕೆ ಯಾವುದೇ ಸ್ಪಷ್ಟವಾದ ಸಾಕ್ಷಿಗಳು ಲಭ್ಯವಾಗಿಲ್ಲ ಎಂದು ಹೇಳಿರುವ ನ್ಯಾಯಮಂಡಳಿ, ರವೀಂದ್ರನಾಥ್ ಅವರಿಗೆ ನೀಡಲಾದ ನೋಟಿಸ್ ಮತ್ತು ಅವರ ವಿರುದ್ಧದ ಆರೋಪಗಳನ್ನು ರದ್ದುಗೊಳಿಸಿದ ಆದೇಶ ಹೊರಡಿಸಿದೆ.

ಈ ಫೋಟೋ ಪ್ರಕರಣ ನಡೆಯುವಾಗ ರವೀಂದ್ರನಾಥ್ ಅವರು ಬೆಂಗಳೂರಿನಲ್ಲಿ ಕೆಎಸ್ಆರ್‌ಪಿ ಎಡಿಜಿಪಿಯಾಗಿದ್ದರು. ನಂತರ ಅವರನ್ನು ಧಾರವಾಡದ ಪೊಲೀಸ್‌ ಸಂಶೋಧನಾ ಮತ್ತು ಪುನಾರಚನೆ ಸಂಸ್ಥೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Central Administrative Tribunal (CAT) quashed the charge-sheet against IPS officer Dr.P.Ravindranath in connection with clicking a photograph of a woman at a coffee shop.
Please Wait while comments are loading...