India Today-Axis My India Exit Poll: ಯಾವ ಜಾತಿಯ ಮತ ಯಾವ ಪಕ್ಷಕ್ಕೆ ಹೆಚ್ಚು: ಅಂಕಿ ಅಂಶಗಳು ಹೇಳೋದೇನು?

ಭಾರತದಲ್ಲಿ ನಡೆಯುವ ಚುನಾವಣೆಯಲ್ಲಿ ಜಾತಿ ಯಾವಾಗಲೂ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲಾ ಪಕ್ಷಗಳು ಕೂಡ ಜಾತಿ ಲೆಕ್ಕಾಚಾರದಲ್ಲಿಯೇ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದು. ರಾಜ್ಯದ ಮೂರು ಪ್ರಮುಖ ಪಕ್ಷಗಳು ಕೂಡ ಒಂದು ಪ್ರಬಲ ಸಮುದಾಯದ ಬೆಂಬಲವನ್ನು ಪಡೆದುಕೊಂಡಿವೆ. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೂಡ ಜಾತಿ ಪ್ರಮುಖ ಪಾತ್ರ ವಹಿಸಿದೆ.

ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ಗೆಲುವು ಪಡೆಯುತ್ತದೆ ಎಂದು ಹೇಳಿದೆ. ಕಾಂಗ್ರೆಸ್ ಶೇಕಡಾ 43 ರಷ್ಟು ಮತಗಳನ್ನು ಗೆಲ್ಲುತ್ತದೆ ಮತ್ತು 122 ರಿಂದ 140 ವಿಧಾನಸಭಾ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ. ಅಧಿಕಾರದಲ್ಲಿರುವ ಬಿಜೆಪಿಯು ಹೀನಾಯವಾಗಿ ಸೋಲುವ ನಿರೀಕ್ಷೆಯಿದೆ ಮತ್ತು 62 ರಿಂದ 80 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಎಕ್ಸಿಟ್ ಪೋಲ್ ಡೇಟಾವನ್ನು ಬಳಸಿಕೊಂಡು ಯಾವ ಜಾತಿ ಯಾಯ ಪಕ್ಷಕ್ಕೆ ಹೆಚ್ಚಿನ ಮತ ಹಾಕಿದೆ ಎನ್ನುವ ವಿವರ ನೀಡಲಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜನತಾ ದಳ (ಜಾತ್ಯತೀತ) ಪಕ್ಷಗಳಲ್ಲಿ ಹಲವು ಸಮುದಾಯಗಳಿಂದ ಬೆಂಬಲ ಪಡೆದಿವೆ.

Caste In Politics: Caste Wise Voting Share In Karnataka Assembly Elections 2023

ಕರಾವಳಿ ಕರ್ನಾಟಕ ಮತ್ತು ಹಳೆಯ ಮೈಸೂರು ಪ್ರದೇಶವನ್ನು ಹೊರತುಪಡಿಸಿ, ಲಿಂಗಾಯತರು ರಾಜ್ಯದಾದ್ಯಂತ ಹರಡಿದ್ದಾರೆ ಮತ್ತು ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಕಿತ್ತೂರು ಕರ್ನಾಟಕದಲ್ಲಿ ಕೇಂದ್ರೀಕೃತರಾಗಿದ್ದಾರೆ. ಎಕ್ಸಿಟ್ ಪೋಲ್ ಡೇಟಾ ಪ್ರಕಾರ 2018 ರಲ್ಲಿ, ಸುಮಾರು ಮೂರನೇ ಎರಡರಷ್ಟು ಅಥವಾ 64 ಪ್ರತಿಶತ ಲಿಂಗಾಯತರು ಬಿಜೆಪಿಗೆ ಮತ ಹಾಕಿದ್ದಾರೆ. ಅದೇ ಪ್ರಮಾಣ ಈ ಬಾರಿ ಕೂಡ ಇರಲಿದೆ ಎಂದು ಹೇಳಲಾಗಿದೆ.

ಎಲ್ಲಾ ಸಮುದಾಯದ ಬೆಂಬಲ ಹೆಚ್ಚಿಸಿಕೊಂಡ ಕಾಂಗ್ರೆಸ್

ಸಮೀಕ್ಷೆಯ ಪ್ರಕಾರ ಈ ಬಾರಿ ಕಾಂಗ್ರೆಸ್ ಎಲ್ಲಾ ಸಮುದಾಯಗಳ ಬೆಂಬಲವನ್ನು ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್‌ಗೆ ಈ ಬಾರಿ ಎಸ್‌ಟಿ ಸಮುದಾಯದ ಶೇಕಡಾ 44 ರಷ್ಟು ಮಂದಿ ಮತಹಾಕಿದ್ದು, ಶೇಕಡಾ 60 ರಷ್ಟು ಮಂದಿ ಎಸ್‌ಸಿ ಸಮುದಾಯದವರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಶೇ. 63 ರಷ್ಟು ಕುರುಬ ಸಮುದಾಯದ ಮತಗಳು ಕಾಂಗ್ರೆಸ್‌ ಪಾಲಾಗಿವೆ, ಶೇ. 88ರಷ್ಟು ಮುಸ್ಲಿಂ ಮತಗಳು ಕಾಂಗ್ರೆಸ್‌ಗೆ ಬಿದ್ದಿವೆ, ಒಬಿಸಿ ಶೇ.31, ಲಿಂಗಾಯತ ಶೇ. 20 ರಷ್ಟು ಮಂದಿ ಮತ ಹಾಕಿದ್ದಾರೆ.

ಬಿಜೆಪಿ ಲಿಂಗಾಯತ ಮತಗಳೇ ದೊಡ್ಡ ಶಕ್ತಿಯಾಗಿದೆ, ಲಿಂಗಾಯತ ಸಮುದಾಯದ ಶೇ. 64 ರಷ್ಟು ಮತಗಳು ಬಿಜೆಪಿ ಪಾಲಾಗಿವೆ ಎಂದು ಸಮೀಕ್ಷೆ ಹೇಳಿದೆ. ಒಬಿಸಿಯ ಶೇ. 45 ರಷ್ಟು ಮತದಾರರು ಬಿಜೆಪಿ ಪರವಾಗಿದ್ದಾರೆ, ಉಳಿದಂತೆ ವಕ್ಕಲಿಗ ಶೇ.25, ಮುಸ್ಲಿಂ ಸಮುದಾಯ ಶೇ .2, ಕುರುಬ ಶೇ.22, ಎಸ್‌ಸಿ ಶೇ.22, ಎಸ್‌ಟಿ ಸಮುದಾಯದ ಶೇ. 33ರಷ್ಟು ಮತದಾರರು ಬಿಜೆಪಿಗೆ ಮತ ಹಾಕಿದ್ದಾರೆ.

ಜೆಡಿಎಸ್‌ ವಿಚಾರದಲ್ಲಿ ಒಕ್ಕಲಿಗರೇ ಪ್ರಬಲ ಶಕ್ತಿಯಾಗಿದ್ದಾರೆ, ಒಕ್ಕಲಿಗರಲ್ಲಿ ಶೇ. 46ರಷ್ಟು ಮತದಾರರು ಜೆಡಿಎಸ್‌ಗೆ ಮತ ಹಾಕಿದ್ದಾರೆ. ಒಬಿಸಿ ಶೇ. 15, ಲಿಂಗಾಯತ ಶೇ. 10, ಮುಸ್ಲಿಂ ಶೇ. 8, ಕುರುಬ ಶೇ. 10, ಎಸ್‌ಸಿ ಶೇ. 14 ಮತ್ತು ಎಸ್‌ಟಿ ಸಮುದಾಯದ ಶೇಕಡ 14 ರಷ್ಟು ಮತದಾರರು ಜೆಡಿಸ್‌ಗೆ ಮತ ಹಾಕಿದ್ದಾರೆ. ರಾಜ್ಯದ ವಿಭಾಗವಾರು ಮತ ಹಂಚಿಕೆ ವಿವರ ಇಲ್ಲಿದೆ.

ಮಧ್ಯ ಕರ್ನಾಟಕದಲ್ಲಿ ಜಾತಿವಾರು ಮತ ಹಂಚಿಕೆ

ಎಸ್‌ಸಿ - ಕಾಂಗ್ರೆಸ್ ಶೇ. 53, ಬಿಜೆಪಿ ಶೇ. 22, ಜೆಡಿಎಸ್ ಶೇ. 18
ಕುರುಬ- ಕಾಂಗ್ರೆಸ್ ಶೇ.71, ಬಿಜೆಪಿ ಶೇ. 14, ಜೆಡಿಎಸ್ ಶೇ. 11
ಒಕ್ಕಲಿಗ- ಕಾಂಗ್ರೆಸ್ ಶೇ.19, ಬಿಜೆಪಿ ಶೇ. 36, ಜೆಡಿಎಸ್ ಶೇ. 40
ಒಬಿಸಿ- ಕಾಂಗ್ರೆಸ್ ಶೇ.34, ಬಿಜೆಪಿ ಶೇ. 45, ಜೆಡಿಎಸ್ ಶೇ. 13
ಲಿಂಗಾಯತ- ಕಾಂಗ್ರೆಸ್ ಶೇ.15, ಬಿಜೆಪಿ ಶೇ. 63, ಜೆಡಿಎಸ್ ಶೇ. 15

ಬೆಂಗಳೂರಿನಲ್ಲಿ ಜಾತಿವಾರು ಮತ ಹಂಚಿಕೆ

ಎಸ್‌ಸಿ - ಕಾಂಗ್ರೆಸ್ ಶೇ. 54, ಬಿಜೆಪಿ ಶೇ. 14, ಜೆಡಿಎಸ್ ಶೇ. 24
ಕುರುಬ- ಕಾಂಗ್ರೆಸ್ ಶೇ.59, ಬಿಜೆಪಿ ಶೇ. 18, ಜೆಡಿಎಸ್ ಶೇ. 16
ಒಕ್ಕಲಿಗ- ಕಾಂಗ್ರೆಸ್ ಶೇ.23, ಬಿಜೆಪಿ ಶೇ. 21, ಜೆಡಿಎಸ್ ಶೇ. 52
ಒಬಿಸಿ- ಕಾಂಗ್ರೆಸ್ ಶೇ.33, ಬಿಜೆಪಿ ಶೇ. 35, ಜೆಡಿಎಸ್ ಶೇ. 24
ಲಿಂಗಾಯತ- ಕಾಂಗ್ರೆಸ್ ಶೇ.21, ಬಿಜೆಪಿ ಶೇ. 59, ಜೆಡಿಎಸ್ ಶೇ. 13

ಕರಾವಳಿ ಕರ್ನಾಟಕ

ಎಸ್‌ಸಿ - ಕಾಂಗ್ರೆಸ್ ಶೇ. 44, ಬಿಜೆಪಿ ಶೇ. 54, ಜೆಡಿಎಸ್ ಶೇ. 2
ಕುರುಬ- ಕಾಂಗ್ರೆಸ್ ಶೇ.50, ಬಿಜೆಪಿ ಶೇ. 21, ಜೆಡಿಎಸ್ ಶೇ. 19
ಒಕ್ಕಲಿಗ- ಕಾಂಗ್ರೆಸ್ ಶೇ.26, ಬಿಜೆಪಿ ಶೇ. 65, ಜೆಡಿಎಸ್ ಶೇ. 2
ಒಬಿಸಿ- ಕಾಂಗ್ರೆಸ್ ಶೇ.28, ಬಿಜೆಪಿ ಶೇ. 62, ಜೆಡಿಎಸ್ ಶೇ. 7

ಕಲ್ಯಾಣ ಕರ್ನಾಟಕ

ಎಸ್‌ಸಿ - ಕಾಂಗ್ರೆಸ್ ಶೇ. 56, ಬಿಜೆಪಿ ಶೇ. 28, ಜೆಡಿಎಸ್ ಶೇ. 14
ಕುರುಬ- ಕಾಂಗ್ರೆಸ್ ಶೇ.63, ಬಿಜೆಪಿ ಶೇ. 25, ಜೆಡಿಎಸ್ ಶೇ. 8
ಲಿಂಗಾಯತ- ಕಾಂಗ್ರೆಸ್ ಶೇ.19, ಬಿಜೆಪಿ ಶೇ. 68, ಜೆಡಿಎಸ್ ಶೇ. 9
ಒಬಿಸಿ- ಕಾಂಗ್ರೆಸ್ ಶೇ.35, ಬಿಜೆಪಿ ಶೇ. 44, ಜೆಡಿಎಸ್ ಶೇ. 17

ಕಿತ್ತೂರು ಕರ್ನಾಟಕ

ಎಸ್‌ಸಿ - ಕಾಂಗ್ರೆಸ್ ಶೇ. 60, ಬಿಜೆಪಿ ಶೇ. 27, ಜೆಡಿಎಸ್ ಶೇ. 9
ಕುರುಬ- ಕಾಂಗ್ರೆಸ್ ಶೇ.62, ಬಿಜೆಪಿ ಶೇ. 27, ಜೆಡಿಎಸ್ ಶೇ. 8
ಲಿಂಗಾಯತ- ಕಾಂಗ್ರೆಸ್ ಶೇ.21, ಬಿಜೆಪಿ ಶೇ. 69, ಜೆಡಿಎಸ್ ಶೇ. 6
ಒಬಿಸಿ- ಕಾಂಗ್ರೆಸ್ ಶೇ. 29, ಬಿಜೆಪಿ ಶೇ. 51, ಜೆಡಿಎಸ್ ಶೇ. 11

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+