ಇನ್ನು ವಿಜಯಾಪುರವಲ್ಲ, ವಿಜಯಪುರ ಎಂದು ಹೇಳಿರಿ

ಬೆಂಗಳೂರು, ಡಿ.5 : ವಿಜಯಪುರವೋ ಅಥವ ವಿಜಯಾಪುರವೋ ಎಂಬ ಹೆಸರಿನ ಗೊಂದಲ ಬಗೆಹರಿದಿದ್ದು, 'ವಿಜಯಪುರ' ಎಂದು ತಿದ್ದುಪಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಕರ್ನಾಟಕ ಸರ್ಕಾರ ನ.1ರಿಂದ ಜಾರಿಗೆ ಬರುವಂತೆ ರಾಜ್ಯದ 12 ನಗರಗಳ ಹೆಸರುಗಳನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿತ್ತು. ಆದರೆ, ಗುಲ್ಬರ್ಗ ಮತ್ತು ಬಿಜಾಪುರದ ಹೆಸರು ಬದಲಾವಣೆ ಮಾಡಿರುವುದು ಹಲವು ಗೊಂದಲಗಳಿಗೆ ಕಾರಣವಾಗಿತ್ತು.

ಮರುನಾಮಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ 'ವಿಜಯಪುರ' ಎಂದು ಮುದ್ರಿತವಾಗಿತ್ತು. ಆದರೆ, ಕರ್ನಾಟಕ ಸರ್ಕಾರ ನ.1ರಂದು ಹೊರಡಿಸಿರುವ ಆದೇಶದಲ್ಲಿ 'ವಿಜಯಪುರ'ದ ಬದಲು 'ವಿಜಯಾಪುರ' ಎಂದಾಗಿದ್ದು, ಗೊಂದಲ ಹುಟ್ಟುಹಾಕಿತ್ತು. [ಕಲಬುರಗಿ, ವಿಜಯಾಪುರ ಹೆಸರಿನಲ್ಲಿ ಹಲವು ಗೊಂದಲ]

ಸದ್ಯ ಸರ್ಕಾರ 'ವಿಜಯಪುರ' ಎಂದು ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ ಎಂದು ಜಿಲ್ಲಾ ಉಸ್ತು­ವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ. ಹೆಸರಿನಲ್ಲಿ ಕಾಗುಣಿತ ದೋಷವಿದ್ದುದನ್ನು ಗಮನಿಸಿದ ಸರ್ಕಾರ ತಿದ್ದುಪಡಿ ಮಾಡಿದೆ ಎಂದು ಸಚಿವರು ಹೇಳಿದ್ದಾರೆ.

ಗುಲ್ಬರ್ಗ, ಕಲಬುರಗಿ : ಗುಲ್ಬರ್ಗದ ಹೆಸರನ್ನು ಕಲಬುರಗಿ ಎಂದು ಬದಲಾವಣೆ ಮಾಡಿದ್ದನ್ನು ಕನ್ನಡಪರ ಸಂಘಟನೆಗಳು ಸ್ವಾಗತಿಸಿದ್ದವು. ಆದರೆ, ಈ ನಿರ್ಧಾರ ಮುಸ್ಲಿಂ ವಿರೋಧಿ ಎಂದು ಆರೋಪಿಸಿದ್ದ ವಿವಿಧ ಮುಸ್ಲಿಂ ಸಂಘಟನೆಗಳು ಈ ಕುರಿತು ಪ್ರತಿಭಟನೆ ನಡೆಸಿದ್ದವು. ಆದರೆ, ಇಲ್ಲಿನ ಹೆಸರು ಬದಲಾವಣೆ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಯಾವ ನಗರಗಳ ಹೆಸರು ಬದಲಾವಣೆಯಾಗಿದೆ ಇಲ್ಲಿದೆ ಪಟ್ಟಿ

Vijayapura

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+