ಗದಗ-ಕೂಡಗಿ-ಹುಟಗಿ ಜೋಡಿ ರೈಲು ಮಾರ್ಗಕ್ಕೆ ಕೇಂದ್ರದ ಒಪ್ಪಿಗೆ
ಗದಗ, ಸೆ. 18 : ಗದಗ-ಕೂಡಗಿ-ಹುಟಗಿ ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಜೋಡಿ ಮಾರ್ಗ ನಿರ್ಮಾಣದಿಂದ ಕೈಗಾರಿಕೆ ಮತ್ತು ಜನರ ಸಂಚಾರಕ್ಕೆ ಅನುಕೂಲವಾಗಲಿದೆ. ಸುಮಾರು 2,058 ಕೋಟಿ ರೂ.ಗಳ ಯೋಜನೆ ಇದಾಗಿದೆ.
284 ಕಿ.ಮೀ. ಉದ್ದದ ಗದಗ-ಕೂಡಗಿ-ಹುಡಗಿ ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ರೈಲು ಮಾರ್ಗ ಬೆಂಗಳೂರು-ಮುಂಬೈ ನಡುವೆ ಸಂಪರ್ಕ ಕಲ್ಪಿಸುತ್ತದೆ. [2 ಜೋಡಿ ಮಾರ್ಗ ಯೋಜನೆಗೆ ಟೆಂಡರ್ ಕರೆದ ರೈಲ್ವೆ]

ಈ ಮಾರ್ಗ ಸದ್ಯ ಏಕಪಥವಾಗಿದ್ದು, ಗುಂತಕಲ್ಲು-ಪುಣೆ-ಮುಂಬೈ ಮತ್ತು ಹೊಸಪೇಟೆ-ಹುಬ್ಬಳ್ಳಿ-ಗೋವಾ ಮಾರ್ಗದ ಮಧ್ಯದಲ್ಲಿದೆ. ಗದಗ ಮತ್ತು ಕೂಡಗಿ ಕರ್ನಾಟಕದಲ್ಲಿದ್ದರೆ, ಹುಡಗಿ ಮಹಾರಾಷ್ಟ್ರ ರಾಜ್ಯದಲ್ಲಿದೆ. [ಮಂಗಳೂರು : ರೈಲು ಅಪಘಾತ ತಪ್ಪಿಸಿದ ರೈತ]
ಹುಡಗಿ-ಕೂಡಗಿ ನಡುವಿನ ಸುಮಾರು 134 ಕಿ.ಮೀ. ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ಈಗಾಗಲೇ 946 ಕೋಟಿ ರೂ.ಗಳು ಬಿಡುಗಡೆಯಾಗಿದೆ. ಯೋಜನೆ ಪೂರ್ಣಗೊಳ್ಳಲು ಅಗತ್ಯವಿರುವ ಹಣ ಬಜೆಟ್ ಅನುದಾನದ ಮೂಲಕ ಬಿಡುಗಡೆಯಾಗಲಿದೆ. [ಈ 'ವಿಶೇಷ ಅತಿಥಿ'ಗಳ ಮೇಲೆ ಕಣ್ಣು ಇಡುವವರು ಯಾರು?]
ವಾಣಿಜ್ಯ ಸಂಚಾರಕ್ಕೆ ಅನುಕೂಲ : ಗದಗ-ಕೂಡಗಿ-ಹುಟಗಿ ನಡುವೆ ಜೋಡಿ ರೈಲು ಮಾರ್ಗ ಸಿದ್ಧವಾದರೆ ವಾಣಿಜ್ಯ ಸಂಚಾರಕ್ಕೆ ಹೆಚ್ಚು ಅನುಕೂಲವಾಗಲಿದೆ. ಈ ಮಾರ್ಗದಲ್ಲಿ ಹಲವಾರು ಉಕ್ಕು ಮತ್ತು ಸಿಮೆಂಟ್ ಕಾರ್ಖನೆಗಳು ನಿರ್ಮಾಣಗೊಳ್ಳುತ್ತಿವೆ.
ಜೋಡಿ ಮಾರ್ಗ ನಿರ್ಮಾಣವಾದರೆ ಹೆಚ್ಚು ರೈಲುಗಳು ಸಂಚಾರ ನಡೆಸಲಿದ್ದು, ಇದರಿಂದ ಸಾರ್ವಜನಿಕ ಮತ್ತು ವಾಣಿಜ್ಯ ಸಂಚಾರಕ್ಕೆ ಅನುಕೂಲವಾಗಲಿದೆ. ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಈ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.












Click it and Unblock the Notifications