Byadgi Red Chilli: ಬ್ಯಾಡಗಿ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿಯದ್ದೆ ಘಮ!
ಬೆಂಗಳೂರು, ಫೆಬ್ರವರಿ.26: ರಾಜ್ಯದಲ್ಲಿ ಹವಾಮಾನ ವೈಪರೀತ್ಯದ ಹೊರತಾಗಿಯೂ, ಅಂತಾರಾಷ್ಟ್ರೀಯ ಮಾರುಕಟ್ಟೆಯ ಖ್ಯಾತಿಯ ಬ್ಯಾಡಗಿ ಮೆಣಸಿನಕಾಯಿ ದಾಖಲೆ ಬರೆದಿದೆ. ಉತ್ತರ ಕರ್ನಾಟಕ ಸೇರಿದಂತೆ ಅಂತರಾಷ್ಟ್ರೀಯವಾಗಿಯೂ ಬಳಸಲ್ಪಡುವ ಈ ಒಣ ಮೆಣಸಿನಕಾಯಿ ತನ್ನ ಬಣ್ಣ, ವಿಶಿಷ್ಟವಾದ ರುಚಿ, ಪರಿಮಳದೊಂದಿಗೆ ತನ್ನ ಸ್ಥಾನ ಭದ್ರ ಮಾಡಿಕೊಂಡಿದೆ.
ಇನ್ನು, ಫೆಬ್ರವರಿ 15 ರಂದು ಹಾವೇರಿ ಜಿಲ್ಲೆಯ ಪ್ರಸಿದ್ಧ ಬ್ಯಾಡಗಿ ಕೆಂಪು ಮೆಣಸಿನಕಾಯಿ ಮಾರುಕಟ್ಟೆಗೆ ದಾಖಲೆಯ 83,568 ಕ್ವಿಂಟಲ್ ಮೆಣಸಿನಕಾಯಿ ಬಂದಿದೆ. 1948 ರಲ್ಲಿ ಈ ಮಾರುಕಟ್ಟೆ ಪ್ರಾರಂಭವಾದಾಗಿನಿಂದ ಈ ಬಾರಿಯೇ ಇಷ್ಟು ಮಟ್ಟದ ಮೆಣಸಿನಕಾಯಿ ಮಾರುಕಟ್ಟೆಗೆ ಬಂದಿರುವುದು ವಿಶೇಷ.

ಬ್ಯಾಡಗಿ ಮೆಣಸಿನಕಾಯಿಗೆ ಇರುವ ಸ್ಥಿರವಾದ ಬೇಡಿಕೆ ಮತ್ತು ಲಾಭದಾಯಕ ಬೆಲೆಗಳು ಈ ಒಣ ಮೆಣಸಿನಾಯಿಬೆಳೆಯ ಜನಪ್ರಿಯತೆಗೆ ಪ್ರಮುಖ ಕಾರಣಗಳಾಗಿವೆ. ಅಂಕಿಅಂಶಗಳ ಪ್ರಕಾರ, ಬ್ಯಾಡಗಿ ಮಾರುಕಟ್ಟೆಯು ಕಳೆದ ಐದು ವರ್ಷಗಳಲ್ಲಿ ವಹಿವಾಟಿನಲ್ಲಿ ಸ್ಥಿರವಾದ ಏರಿಕೆಯನ್ನು ದಾಖಲಿಸುತ್ತಿದೆ.
ಐದು ವರ್ಷಗಳಿಂದ ಸ್ಥಿರವಾದ ಏರಿಕೆ
ಬ್ಯಾಡಗಿ ಮಾರುಕಟ್ಟೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಮೆಣಸಿನಕಾಯಿ ವಹಿವಾಟಿನಲ್ಲಿ ಸ್ಥಿರವಾದ ಏರಿಕೆಯನ್ನು ದಾಖಲಿಸುತ್ತಿದೆ. 2023-24ರಲ್ಲಿ (ಫೆಬ್ರವರಿ 22ರವರೆಗೆ) ಬ್ಯಾಡಗಿ ಎಪಿಎಂಸಿಗೆ 10,13,479 ಕ್ವಿಂಟಲ್ ಒಣ ಮೆಣಸಿನಕಾಯಿ ಬಂದಿದೆ. ಮುಂದಿನ ಒಂದೂವರೆ ತಿಂಗಳಲ್ಲಿ ಇನ್ನೂ ನಾಲ್ಕು ಲಕ್ಷ ಕ್ವಿಂಟಾಲ್ ಬರುವ ನಿರೀಕ್ಷೆ ಇದೆ. ಕಳೆದ ವರ್ಷ ಒಟ್ಟು 9.9 ಲಕ್ಷ ಕ್ವಿಂಟಲ್ ಮೆಣಸಿನ ಕಾಯಿ ಮಾರುಕಟ್ಟೆಗೆ ಬಂದಿತ್ತು.

ರಾಜ್ಯದಲ್ಲಿ ಕೆಂಪು ಮೆಣಸಿನಕಾಯಿ ಬೆಳೆಯುವ ಪ್ರದೇಶದಲ್ಲಿ ಸ್ವಲ್ಪ ಹೆಚ್ಚಳವಾಗಿದೆ. 2022-23 ರಲ್ಲಿ 1.27 ಲಕ್ಷ ಹೆಕ್ಟೇರ್‌ನಿಂದ 2023-24 ರಲ್ಲಿ 1.30 ಲಕ್ಷ ಹೆಕ್ಟೇರ್‌ಗೆ ವಿಸ್ತರಿಸಿದೆ. ಕೆಂಪು ಮೆಣಸಿನಕಾಯಿ ಸಾಮಾನ್ಯವಾಗಿ ನೀರಾವರಿ ಬೆಳೆಯಾಗಿದ್ದರೂ, ಮಳೆ ಕೊರತೆಯಿಂದಾಗಿ 20-30% ಕಡಿಮೆ ಇಳುವರಿ ಬಂದಿದೆ ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.
ಬ್ಯಾಡಗಿ ಮೆಣಸಿನಕಾಯಿ ವರ್ತಕರ ಸಂಘದ ಕಾರ್ಯದರ್ಶಿ ರಾಜು ಮೋರಿಗೇರಿ ಅವರನ್ನು ಉಲ್ಲೇಖಿಸಿರುವ ಡೆಕ್ಕನ್ ಹೆರಾಲ್ಡ್, "ಕಳೆದ ಎರಡು ತಿಂಗಳಿಂದ ಮಾರುಕಟ್ಟೆಗೆ ಅತಿ ಹೆಚ್ಚು ಒಣ ಮೆಣಸಿನಕಾಯಿ ಬಂದಿದೆ. ಬ್ಯಾಡಗಿ ಮಾರುಕಟ್ಟೆಯಲ್ಲಿ ಬ್ಯಾಡಗಿ ಡಬ್ಬಿ, ಬ್ಯಾಡಗಿ ಕಡ್ಡಿ ಮತ್ತು ಗುಂಟೂರು ಮೆಣಸಿನಕಾಯಿ ಎಂಬ ಮೂರು ವಿಧದ ಮೆಣಸಿನಕಾಯಿಗಳನ್ನು ಮಾರಾಟ ಮಾಡಲಾಗುತ್ತದೆ. ಗುಣಮಟ್ಟದ ಡಬ್ಬಿ ಮೆಣಸಿನಕಾಯಿ ಕ್ವಿಂಟಾಲ್‌ಗೆ 45,000 ರಿಂದ 57,000 ರೂ., ಕಡ್ಡಿ ಕ್ವಿಂಟಲ್‌ಗೆ 40,000 ರಿಂದ 45,000 ರೂ., ಗುಂಟೂರು 13,000 ರಿಂದ 18,000 ರೂಪಾಯಿಯಿದ್ದು, ಬೆಲೆಗಳು ನಿರಂತರವಾಗಿ ಉತ್ತಮವಾಗಿವೆ" ಎಂದಿದ್ದಾರೆ.
"ಇತರೆ ವಾಣಿಜ್ಯ ಬೆಳೆಗಳಿಗೆ ಹೋಲಿಸಿದರೆ ಮೆಣಸಿನಕಾಯಿಗೆ ಯಾವಾಗಲೂ ಉತ್ತಮ ಬೇಡಿಕೆ ಇರುತ್ತದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಗುಣಮಟ್ಟದ ಬ್ಯಾಡಗಿ ಮೆಣಸಿನಕಾಯಿ ಸಿಗುತ್ತಿದೆ. ನಿರಂತರ ಮಳೆ ಇಲ್ಲದಿರುವುದು ಇದಕ್ಕೆ ಸಹಕಾರಿಯಾಗಿರಬಹುದು. ಹಿಂದಿನ ವರ್ಷಗಳಲ್ಲಿ ನಾವು 200-230 ಬಣ್ಣದ ಮೌಲ್ಯಗಳನ್ನು ಪಡೆಯುತ್ತಿದ್ದೆವು, ಆದರೆ ಈ ವರ್ಷ ಬಣ್ಣದ ಮೌಲ್ಯವು 240-260 ರ ನಡುವೆ ಇದೆ, ಇದು ಹಿಂದಿನ ವರ್ಷಗಳಿಗಿಂತ ಹೆಚ್ಚಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ಹೆಚ್ಚಾದ ಬ್ಯಾಡಿಗಿ ಮೆಣಸಿನಕಾಯಿ ಖರೀದಿ
ಸಾಮಾನ್ಯವಾಗಿ ಎಂಡಿಎಚ್, ಎಂಟಿಆರ್ ಸೇರಿದಂತೆ ದೊಡ್ಡ ಖರೀದಿದಾರರು ಮಾರ್ಚ್ ಮತ್ತು ಏಪ್ರಿಲ್ ನಡುವೆ ಮೆಣಸಿನಕಾಯಿಯನ್ನು ಸಂಗ್ರಹಿಸುತ್ತಿದ್ದರು. ರಾಜ್ಯದಲ್ಲಿ ಈ ವರ್ಷ ಬರಗಾಲ ಆವರಿಸಿದ್ದರಿಂದ ಗುಣಮಟ್ಟ ಕಡಿಮೆ ಆಗಬಹುದೆಂಬ ಆತಂಕದಿಂದ ಫೆಬ್ರವರಿ ಮೊದಲ ವಾರದಲ್ಲಿ ಮೆಣಸಿನಕಾಯಿ ಖರೀದಿ ಆರಂಭಿಸಿದರು.
ಮೆಣಸಿನಕಾಯಿ ವ್ಯಾಪಾರಿಗಳ ಪ್ರಕಾರ, ಮಾರುಕಟ್ಟೆಗೆ ಬಂದ ಮೆಣಸಿನಕಾಯಿ ಖರೀದಿದಾರರಿಗೆ ಮಾರಾಟವಾಗಿದೆ ಮತ್ತು ಯಾವುದೇ ದಾಸ್ತಾನು ಕೋಲ್ಡ್ ಸ್ಟೋರೇಜ್‌ಗಳಿಗೆ ಹೋಗಲಿಲ್ಲ. ಬ್ಯಾಡಗಿಯಲ್ಲಿ 25 ಹಾಗೂ ಬಳ್ಳಾರಿಯಲ್ಲಿ ಸುಮಾರು 30 ಶೈತ್ಯಾಗಾರಗಳಿವೆ. ಮೆಣಸಿನಕಾಯಿ ಬೆಲೆ ಕುಸಿತವಾದಾಗಲೆಲ್ಲಾ ರೈತರು ಕೋಲ್ಡ್ ಸ್ಟೋರೇಜ್ ಸೌಲಭ್ಯವನ್ನು ಬಳಸಿಕೊಳ್ಳುತ್ತಾರೆ.
-
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್












Click it and Unblock the Notifications