ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸೇರಿ 11 ರಾಜ್ಯಗಳಲ್ಲಿ ಶನಿವಾರ ಉಪ ಚುನಾವಣೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 29; ಕರ್ನಾಟಕದ ಹಾನಗಲ್ ಮತ್ತು ಸಿಂಧಗಿ ಸೇರಿದಂತೆ ದೇಶದ 11 ರಾಜ್ಯಗಳಲ್ಲಿ ಶನಿವಾರ ಉಪ ಚುನಾವಣೆ ನಡೆಯಲಿದೆ. 3 ಲೋಕಸಭಾ ಕ್ಷೇತ್ರಗಳು, 29 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮತದಾನ ನಡೆಯಲಿದೆ.

ಹರ್ಯಾಣ, ಬಿಹಾರ, ಮಹಾರಾಷ್ಟ್ರ, ತೆಲಂಗಾಣ, ಅಸ್ಸಾಂ, ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಶನಿವಾರ ಉಪ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ಮತದಾನಕ್ಕೆ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಿಕೊಂಡು ಮತದಾನ ನಡೆಸಲಾಗುತ್ತದೆ.

 ಗೋವಾ ಚುನಾವಣೆ: ಟೆನ್ನಿಸ್‌ ತಾರೆ ಲಿಯಾಂಡರ್‌ ಪೇಸ್‌ ಟಿಎಂಸಿ ಸೇರ್ಪಡೆ ಗೋವಾ ಚುನಾವಣೆ: ಟೆನ್ನಿಸ್‌ ತಾರೆ ಲಿಯಾಂಡರ್‌ ಪೇಸ್‌ ಟಿಎಂಸಿ ಸೇರ್ಪಡೆ

By Poll On October 30th For 29 Assembly Seat

ಸಿ. ಎಂ. ಉದಾಸಿ ನಿಧನದಿಂದ ತೆರವಾದ ಹಾನಗಲ್ ಮತ್ತು ಎಂ. ಸಿ. ಮನಗೂಳಿ ನಿಧನದಿಂದ ತೆರವಾದ ಸಿಂಧಗಿ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ನವೆಂಬರ್ 2ರಂದು ಮತ ಎಣಿಕೆ ನಡೆಯಲಿದೆ.

 ಉತ್ತರ ಪ್ರದೇಶ ಚುನಾವಣೆ: ಬಿಜೆಪಿಗೆ ಬೆಂಬಲ ಘೋಷಿಸಿದ 7 ಪಕ್ಷಗಳು ಉತ್ತರ ಪ್ರದೇಶ ಚುನಾವಣೆ: ಬಿಜೆಪಿಗೆ ಬೆಂಬಲ ಘೋಷಿಸಿದ 7 ಪಕ್ಷಗಳು

ಮುಖ್ಯಮಂತ್ರಿಗಳಿಗೆ ಪ್ರತಿಷ್ಠೆ; ಸಿಂಧಗಿ ಮತ್ತು ಹಾನಗಲ್ ಕ್ಷೇತ್ರದ ಉಪ ಚುನಾವಣೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಜುಲೈ 26ರಂದು ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು.

ಹಾನಗಲ್ ಉಪ ಚುನಾವಣೆ; ಶಿವರಾಮ್ ಹೆಬ್ಬಾರ್ ಗೆ ಪ್ರತಿಷ್ಠೆ ಹಾನಗಲ್ ಉಪ ಚುನಾವಣೆ; ಶಿವರಾಮ್ ಹೆಬ್ಬಾರ್ ಗೆ ಪ್ರತಿಷ್ಠೆ

ಹಾನಗಲ್ ಕ್ಷೇತ್ರ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರದ ಪಕ್ಕದ ಕ್ಷೇತ್ರವಾಗಿದ್ದು, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಮುಖ್ಯಮಂತ್ರಿಗಳ ಮುಂದಿದೆ.

ಬಿಹಾರ; ಬಿಹಾರದಲ್ಲಿ 2 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಇಬ್ಬರು ಜೆಡಿಯು ಶಾಸಕರ ನಿಧನದಿಂದಾಗಿ ಉಪ ಚುನಾವಣೆ ಎದುರಾಗಿದೆ. ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಎನ್‌ಡಿಎ ಮೈತ್ರಿಕೂಟದ ಸರ್ಕಾರಕ್ಕೆ ಅತ್ಯಗತ್ಯವಾಗಿದೆ.

ಇನ್ನು ಮಹಾರಾಷ್ಟ್ರದಲ್ಲಿ ನಾಂದೇಡ್ ಜಿಲ್ಲೆಯ ದೇಗ್ಲೂರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾವ್ ಸಾಹೇಬ್ ಅಂತಪುರ್ಕರ್ ನಿಧನದಿಂದಾಗಿ ತೆರವಾಗಿರು ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಕೋವಿಡ್‌ ಸೋಂಕಿಗೆ ತುತ್ತಾಗಿದ್ದ ರಾವ್ ಸಾಹೇಬ್ ಅಂತಪುರ್ಕರ್ ಏಪ್ರಿಲ್‌ನಲ್ಲಿ ಮೃತಪಟ್ಟಿದ್ದರು.

ಕಾಂಗ್ರೆಸ್ ಪಕ್ಷ ರಾವ್ ಸಾಹೇಬ್ ಅಂತಪುರ್ಕರ್ ಪುತ್ರ ಜಿತೇಶ್ ಅಂತಪುರ್ಕರ್‌ ಕಣಕ್ಕಿಳಿಸಿದೆ. 2014ರಲ್ಲಿ ಈ ಕ್ಷೇತ್ರದಲ್ಲಿ ಶಿವಸೇನೆ ಗೆಲುವು ಸಾಧಿಸಿತ್ತು. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು.

ಅಸ್ಸಾಂನಲ್ಲಿಯೂ ಹೊಸದಾಗಿ ಆಯ್ಕೆಯಾದ ಮುಖ್ಯಮಂತ್ರಿಗೆ ಪ್ರತಿಷ್ಠೆಯಾಗಿದೆ ಉಪ ಚುನಾವಣೆ. ಹಿಮಂತ್ ಬಿಸ್ವಾಸ್ ಶರ್ಮಾ ಮುಖ್ಯಮಂತ್ರಿಯಾದ ಮೇಲೆ ಮೊದಲ ಬಾರಿಗೆ ಉಪ ಚುನಾವಣೆ ನಡೆಯುತ್ತಿದೆ. ರಾಜ್ಯದ 5 ಕ್ಷೇತ್ರಗಳಲ್ಲಿ ಶನಿವಾರ ಮತದಾನ ನಡೆಯುತ್ತಿದೆ.

ಹರ್ಯಾಣದಲ್ಲಿ ನಡೆಯುತ್ತಿರುವ ಎರಡು ಕ್ಷೇತ್ರದ ಉಪ ಚುನಾವಣೆ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ನೇತೃತ್ವದ ಐಎನ್‌ಎಲ್‌ಡಿ ಪಕ್ಷಕ್ಕೆ ಪ್ರತಿಷ್ಠೆಯಾಗಿದೆ. ಓಂ ಪ್ರಕಾಶ್ ಚೌಟಾಲಾ ಜೈಲಿನಿಂದ ಬಿಡುಗಡೆಯಾದ ಬಳಿಕ ನಡೆಯುತ್ತಿರುವ ಚುನಾವಣೆ ಇದಾಗಿದೆ.

ಕೃಷಿ ಕಾಯ್ದೆ ವಿರೋಧಿಸಿ ಅಭಯ್ ಚೌಟಾಲಾ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಚುನಾವಣೆಯಲ್ಲಿ ಗೆಲ್ಲುವುದು ಎಲ್ಲಾ ಪಕ್ಷಗಳಿಗೆ ಸವಾಲು ಆಗಿದೆ.

ಎಲ್ಲೆಲ್ಲಿ ಚುನಾವಣೆ?; ಕರ್ನಾಟಕದ 2, ಆಂಧ್ರ ಪ್ರದೇಶ 1, ಅಸ್ಸಾಂ 5, ಬಿಹಾರ 2, ಹರ್ಯಾಣ 2, ಹಿಮಾಚಲ ಪ್ರದೇಶ 3, ಮಧ್ಯ ಪ್ರದೇಶ 3, ಮಹಾರಾಷ್ಟ್ರ 1, ಮೇಘಾಲಯ 3, ನಾಗಾಲ್ಯಾಂಡ್ 1, ರಾಜಸ್ಥಾನ 2, ತೆಲಂಗಾಣ 1, ಪಶ್ಚಿಮ ಬಂಗಾಳ 4 ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿದೆ.

ಕೋವಿಡ್ ಪರಿಸ್ಥಿತಿ ಅವಲೋಕಿಸಿ, ಹಬ್ಬಗಳು, ಪ್ರವಾಹ, ಚುನಾವಣೆ ನಡೆಯುವ ಪ್ರದೇಶದ ಶೀತ ಪರಿಸ್ಥಿತಿಗಳನ್ನು ಪರಿಗಣಿಸಿ ಚುನಾವಣೆ ನಡೆಸಲು ಆಯೋಗ ಒಪ್ಪಿಗೆ ನೀಡಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ಮತದಾನ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ.

ದಾದ್ರಾ-ನಗರ್ ಹವೇಲಿ ಹಾಗೂ ಡಮನ್ ಮತ್ತು ಡಿಯು, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳನ್ನು ಭರ್ತಿ ಮಾಡಲು ಉಪ ಚುನಾವಣೆ ನಡೆಯುತ್ತಿದೆ.

English summary
On October 30, 2021 by polls will be held on 11 states for three Lok Sabha and 29 assembly seats. Including Hanagal and Sindagi of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X