ಉಪ ಚುನಾವಣೆ; ಮತಗಟ್ಟೆ ಬಳಿಯೇ ಬಳಸಿದ ಗ್ಲೌಸ್ ಎಸೆದ ಜನರು

ಬೆಂಗಳೂರು, ನವೆಂಬರ್ 03 : ಕೋವಿಡ್ ಸಂದರ್ಭದಲ್ಲಿಯೇ ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದೆ. ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶ ನೀಡಲಾಗಿದೆ.

ಆರ್. ಆರ್. ನಗರ ಮತ್ತು ಶಿರಾ ಉಪ ಚುನಾವಣೆ ವೇಳೆ ಮತದಾರರಿಗೆ ಗ್ಲೌಸ್ ನೀಡಲಾಗುತ್ತಿದೆ. ಕೋವಿಡ್ ಸಂದರ್ಭವಾಗಿರುವುದರಿಂದ ಜನರು ಬಲಗೈಗೆ ಗ್ಲೌಸ್ ಧರಿಸಿ ಮತದಾನ ಮಾಡಬೇಕು. ಆಯೋಗವೇ ಬಳಸಿ ಬಿಸಾಡಬಹುದಾದದ ಗ್ಲೌಸ್‌ ನೀಡುತ್ತಿದೆ.

By Elections Voters Using Gloves Due To COVID 19

ಶಿರಾ ಮತ್ತು ಆರ್. ಆರ್. ನಗರದ ವಿವಿಧ ಮತಗಟ್ಟೆಗಳ ಬಳಿ ಜನರು ಬಳಕೆ ಮಾಡಿದ ಗ್ಲೌಸ್ ಪತ್ತೆಯಾಗಿದೆ. ಜನರು ಮತದಾನ ಮಾಡಿದ ಬಳಿಕ ಗ್ಲೌಸ್‌ ಅನ್ನು ಎಸೆದು ಹೋಗುತ್ತಿದ್ದಾರೆ. ಮತಗಟ್ಟೆ ಬಳಿಕ ಗ್ಲೌಸ್‌ ಹಾಕಲು ಕಸದ ಪೆಟ್ಟಿಗೆ ವ್ಯವಸ್ಥೆಯನ್ನು ಮಾಡಿಲ್ಲ.

ಕೋವಿಡ್ ಸಂದರ್ಭ ಆಗಿರುವುದರಿಂದ ಮತದಾನ ಮಾಡಲು ಬರುವ ಜನರ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಬಳಿಕ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಬಳಿಕ ಬಲಗೈಗೆ ಗ್ಲೌಸ್ ನೀಡಲಾಗುತ್ತದೆ.

ಹೀಗೆ ನೀಡಿದ ಗ್ಲೌಸ್‌ಗಳನ್ನು ಜನರು ಮತಗಟ್ಟೆ ಬಳಿ, ರಸ್ತೆಯ ಮೇಲೆ ಎಸೆದು ಹೋಗುತ್ತಿದ್ದಾರೆ. ಈ ಗ್ಲೌಸ್‌ಗಳನ್ನು ಸಂಗ್ರಹ ಮಾಡಿ ವಿಲೇವಾರಿ ಮಾಡುವುದು ಸ್ವಚ್ಛತಾ ಸಿಬ್ಬಂದಿಗೂ ಸಹ ಸವಾಲಾಗಿದೆ. ಗ್ಲೌಸ್ ವಿಲೇವಾರಿ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕಿದೆ.

ಕೋವಿಡ್ ಸೋಂಕಿತರು ಸಹ ಉಪ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಸಂಜೆ 5 ರಿಂದ 6 ಗಂಟೆಯ ತನ ಕೋವಿಡ್ ಸೋಂಕಿತರು ಪಿಪಿಇ ಕಿಟ್ ಧರಿಸಿ ಮತದಾನ ಮಾಡಬೇಕು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತ್ತು ಹೋಂ ಐಸೋಲೇಷನ್‌ನಲ್ಲಿರುವ ಕೋವಿಡ್ ಸೋಂಕಿತರು ಮತಗಟ್ಟೆಗೆ ಬಂದು ಹೋಗಲು ಬಿಬಿಎಂಪಿ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿದೆ. ಪಿಪಿಇ ಕಿಟ್‌ಗಳನ್ನು ಸಹ ನೀಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+