BPL Card: ರಾಜ್ಯದಲ್ಲಿ ಬಿಪಿಎಲ್‌ ಪಡಿತರ ಚೀಟಿಗಳ ರದ್ದು: ನಿಮ್ಮ ರೇಷನ್‌ ಕಾರ್ಡ್‌ ಸ್ಥಿತಿ ತಿಳಿಯುವುದೇಗೆ?

BPL Card Cancelation: ರಾಜ್ಯದಲ್ಲಿ ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಇವುಗಳಲ್ಲಿ ಹಲವು ವಿಧಗಳಿದ್ದು, ಈ ಪೈಕಿ ಬಿಪಿಎಲ್‌ ಕಾರ್ಡ್‌ಗೆ ಅತೀ ಹೆಚ್ಚು ಸರ್ಕಾರಿ ಸೌಲಭ್ಯಗಳು ದೊರೆಯಲಿವೆ. ಆದ್ದರಿಂದ ಇದನ್ನು ಫಲಾನುಭವಿಗಳಲ್ಲದವರು ಕೂಡ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಇಂತಹ ಕಾರ್ಡ್‌ಗಳನ್ನು ರದ್ದುಪಡಿಸುವ ಕಾರ್ಯ ಮುಂದುವರೆದಿದೆ. ಹಾಗಾದ್ರೆ, ನಿಮ್ಮ ಕಾರ್ಡ್ ಸ್ಥಿತಿಯನ್ನು ತಿಳಿಯುವುದೇಗೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಸಾಮಾನ್ಯವಾಗಿ ಬಿಪಿಎಲ್‌ ಪಡಿತರ ಚೀಟಿಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುತ್ತದೆ. ಆದರೆ, ಇದನ್ನು ಅನರ್ಹರು ಕೂಡ ಪಡೆದುಕೊಂಡಿದ್ದು, ಇವುಗಳನ್ನು ರದ್ದುಗೊಳಿ ಬಳಿಕ ಅರ್ಹರಿದ್ದರೆ ಮಾತ್ರ ಎಪಿಎಲ್‌ಗೆ ವಾರ್ಗವಾಣೆ ಮಾಡುತ್ತಿದೆ. ಒಂದು ವೇಳೆ ಇದಕ್ಕೂ ಅರ್ಹರಲ್ಲದವರ ಬಳಿಯ ಕಾರ್ಡ್‌ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುತ್ತಿದೆ. ಹಾಗಾದ್ರೆ ನಿಮ್ಮ ಕಾರ್ಡ್‌ ಸ್ಥತಿ ಹೇಗಿದೆ ಎಂದು ತಿಳಿದುಕೊಳ್ಳಲು ಇಲ್ಲಿವೆ ಸರಳ ಮಾರ್ಗಗಳು.

BPL Ration Card Cancellation in Karnataka Check Status on Online

ಹೌದು.. ರಾಜ್ಯದಲ್ಲಿ ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಇದೇ ಸೆಪ್ಟೆಂಬರ್ ಅಂತ್ಯಗೊಳಗೆ ರದ್ದೂಗೊಳಿಸುವಂತೆ ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯಾಜ್ಯಗಳ ಇಲಾಖೆ ನಿರ್ಧರಿಸಿದೆ. ಹಲವು ಮಾನದಂಡಗಳ ಆಧಾರದ ಮೇಲೆ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರಕಾರ ಸಂಖ್ಯೆ ನಿಗದಿಪಡಿಸಲಾಗಿದೆ.

ಎರಡೆರು ರಾಜ್ಯಗಳಲ್ಲಿ ಕಾರ್ಡ್‌ ಹೊಂದಿದ್ದು, ಸೌಲಭ್ಯ ಪಡೆಯುತ್ತಿರುವವರು ಲಕ್ಷಾಂತರ ಮಂದಿ ಇದ್ದಾರೆ ಎನ್ನುವ ಅಚ್ಚರಿ ಸಂಗತಿ ಹೊರಬಿದ್ದಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರ ರದ್ದುಗೊಳಿಸುವ ಖಡಕ್‌ ನಿರ್ಧಾರ ತೆಗೆದುಕೊಂಡಿದೆ. ಹಾಗಾದ್ರೆ ನಿಮ್ಮ ಕಾರ್ಡ್‌ ಯಾವ ಸ್ಥಿತಿಯಲ್ಲಿದೆ ಎಂದು ತಿಳಿದುಕೊಳ್ಳಬೇಕೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ರಾಜ್ಯ ಆಹಾರ ಇಲಾಖೆಯು ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದುಗೊಳಿಸಿ ಎಪಿಎಲ್‌ಗೆ ವರ್ಗಾಹಿಸುವ ಕೆಲಸ ನಡೆಯುತ್ತಿದೆ. ಹಾಗಾದ್ರೆ, ಗೊಂದಲ ಇರುವವರು https://ahara.kar.nic.in/Home/EServices ಲಿಂಕ್‌ ಮೇಲೆ ಕ್ಲಿಕ್ ಮಾಡಿ ಪರಿಶೀಲನೆ ಮಾಡಿ ನಿಮ್ಮ ಕಾರ್ಡ್‌ನ ಸ್ಥಿತಿಯನ್ನು ತಿಳಿದುಕೊಳ್ಳಬಹುದು.

ಈ ಲಿಂಕ್ ಕ್ಲಿಕ್ ಮಾಡಿದ ಬಳಿಕ ಇದು ಅಧಿಕೃತ ವೆಬ್‌ಸೈಟ್ ಆಗಿರಲಿದೆ. ನಂತರ ಈ ಪಡಿತರ ಚೀಟಿ ಎಂಬ ಆಯ್ಕೆಯನ್ನು ಪ್ರೆಸ್ ಮಾಡಿ. ಅನಂತರ ರದ್ದು ಮಾಡಲಾದ ಅಥವಾ ತಡೆ ಹಿಡಿಯಲಾದ ಪಡಿತರ ಚೀಟಿಯ ಪಟ್ಟಿ ಎಂಬ ಆಯ್ಕೆಯನ್ನ ಮಾಡಿಕೊಳ್ಳಿ. ಅದರಲ್ಲಿ ಹಲವು ಆಯ್ಕೆಗಳು ಇರಲಿವೆ.

ಬಳಿಕ ಪ್ರಮುಖವಾಗಿ ನಿಮ್ಮ ಜಿಲ್ಲೆ, ತಾಲೂಕನ್ನು ಆಯ್ಕೆ ಮಾಡಿ. ಅಲ್ಲದೆ, ಯಾವ ತಿಂಗಳಿನಲ್ಲಿ ರದ್ದು ಮಾಡಲಾಗಿದೆ ಎಂದು ಮಾಹಿತಿ ಬೇಕು ಎಂಬುದನ್ನು ಆಯ್ಕೆ ಮಾಡಿ. ನಂತರ ಕೆಳಗೆ ನೀಡಿರುವ ಕ್ಯಾಪ್ಚಾ ತುಂಬಿಕೊಂಡು Go ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಗ ರೇಷನ್ ಕಾರ್ಡ್ ಯಾವ ಸ್ಥಿತಿಯಲ್ಲಿದೆ ಎನ್ನುವ ಮಾಹಿತಿ ಸಿಗಲಿದೆ. ಅದರಲ್ಲಿ ರೇಷನ್ ಕಾರ್ಡ್ ಮಾಡಲಾಗಿದೆ ಎಂದು ತಿಳಿಸಲಾಗಿರುತ್ತದೆ.

ಇನ್ನು ರಾಜ್ಯದಲ್ಲಿ ನಕಲಿ ದಾಖಲಿ ಸೃಷ್ಟಿಸಿ ಬಿಪಿಎಲ್‌ ಕಾರ್ಡ್ ಪಡೆದಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದ್ದಂತೆ, ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆಗೆ ಮುಂದಾಗಿದೆ. 1.20 ಲಕ್ಷ ರೂಪಾಯಿ ಆದಾಯ ಮೀರಿದವರ ಬಿಪಿಎಲ್ ಕಾರ್ಡ್ನ ರದ್ದು ಮಾಡಲಾಗಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ನೋಟಿಸ್ ಜಾರಿ ಮಾಡಿ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲಾಗಿದ ಎಂದು ತಿಳಿದುಬಂದಿದೆ.

ಅನರ್ಹರ ಬಳಿಯ ಬಿಪಿಎಲ್‌ ಕಾರ್ಡ್‌ ರದ್ದು ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದು, ಅರ್ಹತೆ ಇರುವವರಿಗೆ ಮಾತ್ರ ಬಿಪಿಎಲ್ ಕಾರ್ಡ್ ಅನ್ವಯ ಆಗುತ್ತದೆ. ಈ ನಿಯಮಗಳನ್ನು ಮಾಡಿರುವುದು ಕೇಂದ್ರ ಸರ್ಕಾರ. ಆ ಮಾರ್ಗಸೂಚಿ ಪ್ರಕಾರವೇ ನಾವು ಪರಿಶೀಲನೆ ಕಾರ್ಯ ಮುಂದುವರೆಸಿದ್ದೇವೆ. 1,20,000 ಆದಾಯ ಮಿತಿ ಇದ್ದರೆ, ಬಿಪಿಎಲ್ ಕಾರ್ಡ್ ರದ್ದು ಎನ್ನುವುದು ಕೇವಲ ಒಂದು ಮಾನದಂಡ ಆಗಿರುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಹರಿಗೆ ಯಾವುದೇ ಕಾರಣಕ್ಕೂ ಬಿಪಿಎಲ್‌ ಕಾರ್ಡ್‌ ಕೈತಪ್ಪಬಾರದಯ. ಅನರ್ಹರ ಬಳಿಯಿರುವ ಕಾರ್ಡ್‌ಗಳನ್ನು ಮಾತ್ರ ರದ್ದುಪಡಿಸಲಾಗುತ್ತಿದೆ. ಕೇಂದ್ರ ಸರ್ಕಾರ ಮಾರ್ಗಸೂಚಿ ಮಾಡಿದ್ದು, ಅದಂತೆಯೇ ಕ್ರಮ ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಅರ್ಹರಿದ್ದರೆ, ಅವರು ಹೊಸ ಕಾರ್ಡ್‌ಗೆ ಅರ್ಜಿ ಹಾಕಿದರೆ, ಅವರಿಗೆ ಕಾರ್ಡ್ ಕೊಡಲಾಗುತ್ತದೆ ಅಂತಲೂ ಹೇಳಿದರು.

ಈಗಾಗಲೇ ಸರ್ಕಾರ ಸುಮಾರು 3,65,614 ಅನರ್ಹ ಬಳಿಯ ಪಡಿತರ ಚೀಟಿಗಳನ್ನಯ ರದ್ದುಪಡಿಸಲಾಗಿದೆ. ಅಲ್ಲದೇ, ಅನ್ನಭಾಗ್ಯ ಯೋಜನೆಯ ಆಹಾಯ ಧಾನ್ಯಗಳನ್ನು ಸಾಗಿಸುವ ವಾಹನಗಳಿಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಕೆ ಮಾಡಲು ಹಾಗೂ ಗೋದಾಮುಗಳಲ್ಲಿ ಸಿಸಿಟಿವಿ ಅಳವಡಿಸಲು ಸೂಚನೆ ನೀಡಿದ್ದಾರೆ.

ಇನ್ನು ಆಹಾರ ಸಚಿವ ಕೆಎಚ್ ಮುನಿಯಪ್ಪ ಅವರು ಮಾತನಾಡಿ, ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ, ಈ ಪ್ರಕ್ರಿಯೆಯಲ್ಲಿ ಅರ್ಹರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಇನ್ನು ಯಾವ ಫಲಾನುಭವಿಗಳಿಗೆ ಇನ್ನೂ ಕಾರ್ಡ್ ಸಿಕ್ಕಿಲ್ಲವೋ ಅಂತಹವರಿಗೆ ಕಾರ್ಡ್ ಒದಗಿಸುವ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದರು. ಇನ್ನು ರಾಜ್ಯದಲ್ಲಿ 13,87,651 ಅನರ್ಹ ಬಿಪಿಎಲ್‌ ಕಾರ್ಡುದಾರರು ಕಂಡುವಂದಿದ್ದು, ಈ ಪೈಕಿ 3,65,614 ರದ್ದಿಪಡಿಸಲಾಗಿದ್ದು, ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+