BMTC Bus: ಬೆಂಗಳೂರು ಸ್ಥಳಿಯ ಸಾರಿಗೆಗೆ ಬಜೆಟ್‌ನಲ್ಲಿ ಮಹತ್ವದ ಘೋಷಣೆ: ಹೊಸ ಬಸ್ ಸೇರ್ಪಡೆ ಮಾಹಿತಿ
ಬೆಂಗಳೂರು, ಫೆಬ್ರವರಿ 16: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಾರಿಗೆ ಇಲಾಖೆ ಫುಲ್ ಆಕ್ಟಿವ್ ಆಗಿದೆ ಎನ್ನಬಹುದು. ಶಕ್ತಿ ಯೋಜನೆ ಜಾರಿ ಬಳಿಕವು ಹೊಸ ಹೊಸ ಬಸ್‌ಗಳನ್ನು ಪರಿಚಯಿಸಿರುವ ಸರ್ಕಾರ ಇದೀಗ ತನ್ನ ಬಜೆಟ್‌ನಲ್ಲಿ 1000ಕ್ಕೂ ಹೆಚ್ಚು ಹೊಸ ಬಸ್‌ಗಳನ್ನು ಈ ಎರಡು ನಿಗಮಗಳಿಗೆ ಸೇರ್ಪಡೆ ಮಾಡುವ ಬಗ್ಗೆ ಘೋಷಣೆ ಮಾಡಿದೆ.
ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಒಟ್ಟು 1,334 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಗೆ ಸೇರ್ಪಡೆ ಮಾಡಲು, ಖರೀದಿಸುವುದಾಗಿ ತಿಳಿಸಿದೆ. ಈ ಮೂಲಕ ಬೆಂಗಳೂರು ಪ್ರಯಾಣಿಕರಿಗೆ ಬಜೆಟ್ ನಲ್ಲಿ ಸಿಎಂ ಸಿಹಿ ಸುದ್ದಿ ನೀಡಿದ್ದಾರೆ.

ಇಡೀ ಬಜೆಟ್‌ನಲ್ಲಿ ಬಿಎಂಟಿಸಿಗೆ ಅದ್ಯತೆ ನೀಡಿರುವ ಸರ್ಕಾರ 1,334 ಹೊಸ ಎಲೆಕ್ಟ್ರಕಿಕ್ ಬಸ್‌ಗಳನ್ನು ಬಿಎಂಟಿಸಿಗೆ ಸೇರಿಸಲು ನಿರ್ಧರಿಸಿದೆ. ಅದಕ್ಕಾಗಿ ಹೊಸ ಬಸ್ ಖರೀದಿಗೆ ಅನುದಾನ ಹಂಚಿಕೆ ಮಾಡಲಿದೆ. ಜೊತೆಗೆ ಬಿಎಂಟಿಸಿಗೆ 820 ಬಿಎಸ್ 6 ಡೀಸೆಲ್ ಚಾಲಿತ ಬಸ್‌ಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಶಕ್ತಿ ಯೋಜನೆ ಜಾರಿ ಬಳಿಕ ಸರ್ಕಾರವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 100 ಅಶ್ವಮೇಧ ಬಸ್, ಪಲ್ಲಕ್ಕಿ, ಉತ್ಸವ ಬಸ್‌ನಂತಹ ಹೊಸ ಹೊಸ ಬಸ್‌ಗಳನ್ನು ರಸ್ತೆಗೆ ಇಳಿಸಿದೆ. ಹೀಗಾಗಿ ಈ ಭಾರಿ ಬಿಎಂಟಿಸಿಗೆ ಅಂದೆ ಬೆಂಗಳೂರು ಸ್ಥಳೀಯ ಸಾರಿಗೆ ಆದ್ಯತೆ ನೀಡಿದೆ.












Click it and Unblock the Notifications