ಬಿಜೆಪಿಗೆ ಸರಳ ಬಹುಮತ, ಮತ್ತೆ ಅಧಿಕಾರ : ಕಾಪ್ಸ್ ಸಮೀಕ್ಷೆ

Posted By:
Subscribe to Oneindia Kannada
   ಕರ್ನಾಟಕ ವಿಧಾನಸಭಾ ಚುನಾವಣೆ 2018 : ಕ್ಯಾಪ್ಸ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 113 ಸೀಟುಗಳ ಗೆಲುವು |Oneindia Kannada

   ಬೆಂಗಳೂರು, ನವೆಂಬರ್ 06: ಕರ್ನಾಟಕದಲ್ಲಿ ಈ ಸಂದರ್ಭದಲ್ಲಿ ವಿಧಾನಸಭೆ ಚುನಾವಣೆ ನಡೆದರೆ ಬಿಜೆಪಿಗೆ ಭರ್ಜರಿ ಜಯ ಲಭಿಸಲಿದೆ ಎಂದು ಸಮೀಕ್ಷೆಯೊಂದು ವರದಿ ನೀಡಿದೆ.

   ಸಿ ಫೋರ್ ಸಮೀಕ್ಷೆ : ಸಿದ್ದರಾಮಯ್ಯ -ಕಾಂಗ್ರೆಸ್ ಸರ್ಕಾರಕ್ಕೆ ಮತ್ತೆ ಬಹುಮತ

   ಸಿ ಫೋರ್ ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಂತೆ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಪ್ಸ್ ಸಂಸ್ಥೆ ಈ ಹಿಂದೆ ಪ್ರಕಟಿಸಿದ ವರದಿಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವರದಿ ಬಂದಿತ್ತು. ಒಂದು ವೇಳೆ ಈಗ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಬಹುಮತ ಸಿಗಲಿದೆ? ಎಂಬ ಪ್ರಶ್ನೆ ಹೊತ್ತು ಕಾಪ್ಸ್ ಸಂಸ್ಥೆ ಸಮೀಕ್ಷೆ ನಡೆಸಿತ್ತು.

   ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ

   113 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿರುವ ಕಮಲ ಪಕ್ಷ ಮತ್ತೊಮ್ಮೆ ಅಧಿಕಾರ ಪೀಠಕ್ಕೇರುವ ಕನಸು ಕಾಣಬಹುದು ಎಂದು ಸಮೀಕ್ಷೆ ಹೇಳಿದೆ. ಕ್ರಿಯೇಟೀವ್ ಸೆಂಟರ್ ಫಾರ್ ಪೊಲಿಟಿಕಲ್ ಆ್ಯಂಡ್ ಸೋಷಿಯಲ್ ಸ್ಟಡೀಸ್ (COPS) ಸಂಸ್ಥೆ ನಡೆಸಿದ ಸಮೀಕ್ಷೆಯ ವರದಿ ಇದಾಗಿದೆ.

   2008ರಲ್ಲಿ ಬಿಜೆಪಿಗೆ ಸಿಕ್ಕ ಫಲಿತಾಂಶ

   2008ರಲ್ಲಿ ಬಿಜೆಪಿಗೆ ಸಿಕ್ಕ ಫಲಿತಾಂಶ

   ಕಾಪ್ಸ್ 2017 ಸಮೀಕ್ಷೆ : ಬಿಜೆಪಿ 113, ಕಾಂಗ್ರೆಸ್ಸಿಗೆ 85 ಕ್ಷೇತ್ರಗಳು ಮತ್ತು 25 ಕ್ಷೇತ್ರಗಳು ಜೆಡಿಎಸ್ ಪಾಲಾಗಲಿವೆ.

   2008ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸಿಕ್ಕ ಫಲಿತಾಂಶವೇ ಮರುಕಳಿಸಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

   2008ರಲ್ಲಿ ಬಿಜೆಪಿ ಶೇ 33ರಷ್ಟು ಮತ ಗಳಿಕೆ ಮೂಲಕ 110, ಶೇ 35.1ರಷ್ಟು ಮತ ಗಳಿಕೆ ಮೂಲಕ ಕಾಂಗ್ರೆಸ್ 80, ಶೇ 19.44ರಷ್ಟು ಮತಗಳೊಂದಿಗೆ ಜೆಡಿಎಸ್ 28 ಸ್ಥಾನ ಗಳಿಸಿತ್ತು. ಇತರೆ 6 ಸ್ಥಾನಗಳು ಲಭಿಸಿತ್ತು.

   ಯಾವ ಪ್ರದೇಶ ಯಾರ ಪಾಲು?

   ಯಾವ ಪ್ರದೇಶ ಯಾರ ಪಾಲು?

   ಹಳೆ ಮೈಸೂರು ಭಾಗದ 37 ಕ್ಷೇತ್ರಗಳ ಪೈಕಿ ಸಿಎಂ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಪಾಲಿಗೆ 21 ಕ್ಷೇತ್ರಗಳು ಹಾಗೂ ಬೆಂಗಳೂರಿನ 32 ಕ್ಷೇತ್ರಗಳ ಪೈಕಿ 16 ಒಲಿಯಲಿದೆ. ಬಿಜೆಪಿಗೆ 14, ಜೆಡಿಎಸ್ 2.

   ಕರಾವಳಿ , ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಸಮೀಕ್ಷೆ ಹೇಳಿದೆ.ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ ಸಾಧಿಸಲಿದೆ.

   ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿಯು 25 ಸ್ಥಾನಗಳನ್ನು ಗೆಲ್ಲಲಿದೆ. ಮುಂಬೈ ಕರ್ನಾಟಕದಲ್ಲಿ 56 ಸ್ಥಾನಗಳ ಪೈಕಿ 36 ಗೆಲ್ಲಲಿದೆ. ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ ಸಾಧಿಸಲಿವೆ ಎಂದು ಸಮೀಕ್ಷೆ ಹೇಳಿದೆ.

   ಯಾವ ಅವಧಿಯಲ್ಲಿ ನಡೆದ ಸಮೀಕ್ಷೆ

   ಯಾವ ಅವಧಿಯಲ್ಲಿ ನಡೆದ ಸಮೀಕ್ಷೆ

   ಜುಲೈ ತಿಂಗಳ ತನಕದ ಅಭಿಪ್ರಾಯ ಸಂಗ್ರಹಿಸಿ ಕಾಪ್ಸ್ ಸೆಪ್ಟೆಂಬರ್ ತಿಂಗಳಿನಲ್ಲಿ ವರದಿಯನ್ನು ನೀಡಿತ್ತು. ಈಗ ಅಕ್ಟೋಬರ್ ತನಕದ ಸಮೀಕ್ಷೆಯ ಫಲಿತಾಂಶವನ್ನು ನವೆಂಬರ್ 06ರಂದು ನೀಡಿದೆ. ಆಗಸ್ಟ್ ತಿಂಗಳ ರಾಜಕೀಯ ಬೆಳವಣಿಗೆ, ರಾಜಕೀಯ ನಾಯಕರ ಮೇಲಿನ ಕೇಸುಗಳು, ಚುನಾವಣೆ ತಯಾರಿ, ನಾಗರೀಕ ಸಮಸ್ಯೆಗಳ ಬಗ್ಗೆ ಜನಾಭಿಪ್ರಯ ಎಲ್ಲವೂ ಸಮೀಕ್ಷೆಯಲ್ಲಿ ಸೇರಿವೆ.

   ಸಿ ಫೋರ್ ಸಮೀಕ್ಷೆ

   ಸಿ ಫೋರ್ ಸಮೀಕ್ಷೆ

   ಸಿ ಫೋರ್ ಸಮೀಕ್ಷೆಯಂತೆ ಅತಿ ಹೆಚ್ಚು ಶೇಕಡಾವಾರು ಮತಗಳನ್ನು ಪಡೆಯುವ ನಿರೀಕ್ಷೆ ಹೊಂದಿರುವ ಕಾಂಗ್ರೆಸ್ ಪಕ್ಷವು 114ರ ಮ್ಯಾಜಿಕ್ ನಂಬರ್ ದಾಟುವ ನಿರೀಕ್ಷೆಯಿದೆ.
   * ಕಾಂಗ್ರೆಸ್ 120 ರಿಂದ 132ರವರೆಗೆ ಸ್ಥಾನ
   * ಬಿಜೆಪಿಗೆ 60 ರಿಂದ 72 ಸ್ಥಾನಗಳು ಸಿಗಲಿವೆ.
   * ಜೆಡಿಎಸ್ 24ರಿಂದ 30 ಸ್ಥಾನಗಳನ್ನು ಪಡೆಯಲಿದೆ.
   * ಇತರೆ ಪಕ್ಷಗಳಿಗೆ 1ರಿಂದ 6 ಸ್ಥಾನಗಳು ಬರಲಿವೆ

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   A new survey in Karnataka gives the BJP 113 seats in the forthcoming assembly elections. The poll survey agency Creative Center for Political and Social Studies (COPS) gives the ruling Congress 85 and the JD(S) 25.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ