ಕುಮಾರಸ್ವಾಮಿಗೆ ಬಿಜೆಪಿ ಸ್ವಾಗತ, ತಿರುಗೇಟು ಕೊಟ್ಟ ಜೆಡಿಎಸ್

ಬೆಂಗಳೂರು, ಮೇ 12 : 'ಕುಮಾರಸ್ವಾಮಿ ಅವರಿಗೆ ಬೆಂಗಳೂರಿಗೆ ಸ್ವಾಗತ' ಎಂದು ಕರ್ನಾಟಕ ಬಿಜೆಪಿ ಮಾಡಿದ್ದ ಟ್ವೀಟ್‌ಗೆ ಜೆಡಿಎಸ್‌ ತಿರುಗೇಟು ನೀಡಿದೆ. 'ಬೇರೆಯವರ ಕಡೆ ಬೆರಳು ತೋರಿಸುವುದು ಬಿಡಿ' ಎಂದು ಪಕ್ಷ ಸಲಹೆ ನೀಡಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ರೆಸಾರ್ಟ್ ವಾಸ್ತವ್ಯ ಭಾನುವಾರ ಅಂತ್ಯಗೊಂಡಿದೆ. ಇದನ್ನು ಲೇವಡಿ ಮಾಡಿದ್ದ ಕರ್ನಾಟಕ ಬಿಜೆಪಿ ಟ್ವೀಟ್‌ ಮಾಡಿ ಮುಖ್ಯಮಂತ್ರಿಗಳಿಗೆ ಬೆಂಗಳೂರಿಗೆ ಸ್ವಾಗತ ಎಂದು ಹೇಳಿತ್ತು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಡಿಕೇರಿಯ ಇಬ್ಬನಿ ರೆಸಾರ್ಟ್‌ನಲ್ಲಿ ಶುಕ್ರವಾರ ರಾತ್ರಿಯಿಂದ ವಾಸ್ತವ್ಯ ಹೂಡಿದ್ದರು. ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಸಚಿವ ಸಾ.ರಾ.ಮಹೇಶ್ ಅವರು ಸಹ ಜೊತೆಗಿದ್ದರು. ಇಂದು ಸಂಜೆ ಅವರು ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ.

ಎಚ್.ಡಿ.ಕುಮಾರಸ್ವಾಮಿ ಅವರ ರೆಸಾರ್ಟ್ ವಾಸ್ತವ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಪ್ರತಿಪಕ್ಷ ಬಿಜೆಪಿ, ಬೆಂಗಳೂರಿಗೆ ಬಂದ ಬಳಿಕ ನಿಮ್ಮ ಮುಂದಿನ ಕಾರ್ಯಕ್ರಮಗಳೇನು? ಎಂದು ಪ್ರಶ್ನೆ ಮಾಡಿತ್ತು. ಇದಕ್ಕೆ ಜೆಡಿಎಸ್ ತಿರುಗೇಟು ನೀಡಿದೆ.....

ಬೆಂಗಳೂರಿಗೆ ಸ್ವಾಗತ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ರೆಸಾರ್ಟ್ ವಾಸ್ತವ್ಯ ಭಾನುವಾರ ಅಂತ್ಯಗೊಂಡಿದೆ. ಇದನ್ನು ಲೇವಡಿ ಮಾಡಲು ಟ್ವೀಟ್ ಮಾಡಿದ್ದ ಕರ್ನಾಟಕ ಬಿಜೆಪಿ ಬೆಂಗಳೂರಿಗೆ ಸ್ವಾಗತ ಎಂದು ಹೇಳಿತ್ತು.

ಮುಂದಿನ ಕಾರ್ಯಕ್ರಮವೇನು?

ಮುಂದಿನ ಕಾರ್ಯಕ್ರಮವೇನು?

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೆಂಗಳೂರಿಗೆ ಸ್ವಾಗತ. ಬೆಂಗಳೂರಿಗೆ ಬಂದ ಮೇಲೆ ಮುಂದಿನ ಕಾರ್ಯಕ್ರಮವೇನು? ಬೇರೆ ರೆಸಾರ್ಟ್‌ಗೆ ಭೇಟಿ ನೀಡುವುದು, ವಿದೇಶ ಪ್ರವಾಸ ಮಾಡುವುದು, ಅಳುವುದೇ? ಅಥವ ಬಿಜೆಪಿಗೆ ಬೈಯುವುದೇ? ಎಂದು ಬಿಜೆಪಿ ಪ್ರಶ್ನೆ ಮಾಡಿತ್ತು.

ಜೆಡಿಎಸ್ ತಿರುಗೇಟು

ಬಿಜೆಪಿ ಟ್ವೀಟ್‌ಗೆ ಜೆಡಿಎಸ್ ತಿರುಗೇಟು ಕೊಟ್ಟಿದೆ. ಬಿಜೆಪಿ ಬೇರೆಯವರತ್ತ ಬೆರಳು ತೋರಿಸುವುದನ್ನು ಮೊದಲು ನಿಲ್ಲಿಸಲಿ ಎಂದು ಹೇಳಿದೆ.

5 ವರ್ಷಕ್ಕೆ 3 ಸಿಎಂಗಳು

5 ವರ್ಷಕ್ಕೆ 3 ಸಿಎಂಗಳು

ಬಿಜೆಪಿ ಆಡಳಿತದಲ್ಲಿ 5 ವರ್ಷಗಳಲ್ಲಿ ಮೂರು ಸಿಎಂಗಳು ಬದಲಾದರು. ಮುಖ್ಯಮಂತ್ರಿಗಳು ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋದರು. ಈಗ ಕುದುರೆ ವ್ಯಾಪಾರದ ಮೂಲಕ ಸರ್ಕಾರ ಬೀಳಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ಟ್ವೀಟ್‌ನಲ್ಲಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+