ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಡಿಸೆಂಬರ್‌ನಲ್ಲಿ ಚುನಾವಣೆ
ಬೆಂಗಳೂರು, ಅಕ್ಟೋಬರ್ 08 : ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರ ಅಧಿಕಾರಾವಧಿ ಪೂರ್ಣಗೊಳ್ಳುತ್ತಾ ಬಂದಿದ್ದು, ನೂತನ ಸಾರಥಿ ಆಯ್ಕೆ ಮಾಡಲು ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ರಾಜ್ಯ ಬಿಜೆಪಿ ಆಂತರಿಕ ಚುನಾವಣಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಚುನಾವಣಾಧಿಕಾರಿ ಭಾನುಪ್ರಕಾಶ್ ಅವರು, ಪಕ್ಷದ ಆಂತರಿಕ ಚುನಾವಣಾ ವೇಳಾಪಟ್ಟಿ ಬಿಡುಗಡೆ ಮಾಡಿದರು. ನೂತನ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆಗೆ ಒಟ್ಟು 310 ಮಂದಿ ಮತದಾರರಿದ್ದಾರೆ ಎಂದು ಹೇಳಿದರು. [ಯಡಿಯೂರಪ್ಪಗೆ ಸರಿಸಾಟಿ ಯಾರಾದ್ರೂ ಇದ್ದಾರಾ?]

'ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಡಿಸೆಂಬರ್‌ವೊಳಗೆ ಚುನಾವಣೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ. ಈಗಾಗಲೇ ಎಲ್ಲಾ ಸಮಿತಿ ಚುನಾವಣೆಗಳಿಗೆ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿದ್ದೇವೆ' ಎಂದು ವಿವರಣೆ ನೀಡಿದರು. [ಯಡಿಯೂರಪ್ಪ ಸಂದರ್ಶನ ಓದಿ]
ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆಯಲ್ಲಿ 310 ಜನರು ಮತದಾನ ಮಾಡಲಿದ್ದಾರೆ. ಇವರಲ್ಲಿ 36 ಜಿಲ್ಲಾ ಸಮಿತಿ ಅಧ್ಯಕ್ಷರು, 274 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಕೌನ್ಸಿಲ್ ಸದಸ್ಯರು ಸೇರಿದ್ದಾರೆ. 2013ರ ಮಾರ್ಚ್‌ನಲ್ಲಿ ಪ್ರಹ್ಲಾದ್ ಜೋಶಿ ಅವರನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು.
ಚುನಾವಣಾ ವೇಳಾಪಟ್ಟಿ
* ಅಕ್ಟೋಬರ್ 1 ರಿಂದ 30 ಸ್ಥಾನೀಯ ಸಮಿತಿ ಚುನಾವಣೆ
* ನವೆಂಬರ್ 1 ರಿಂದ 10 ಗ್ರಾಮ ಪಂಚಾಯತ್ ವಾರ್ಡ್ ಸಮಿತಿ ಚುನಾವಣೆ
* ನವೆಂಬರ್ 11 ರಿಂದ 20 ಮಂಡಲ ಅಧ್ಯಕ್ಷ ಚುನಾವಣೆ
* ನವೆಂಬರ್ 21 ರಿಂದ 30 ಜಿಲ್ಲಾಧ್ಯಕ್ಷರ ಚುನಾವಣೆ












Click it and Unblock the Notifications