Lok Sabha election: 1998ರಿಂದ ಕಾಂಗ್ರೆಸ್‌ ಸಾಧನೆ ಹೇಗಿದೆ? ಬಿಜೆಪಿಯ ಕಥೆ ಏನು?

ಚುನಾವಣೆಗಳ ಬಿಸಿ ದಿನೇ ದಿನೇ ಏರುತ್ತಿದೆ. ಈಗೆನಿದ್ದರು ಲೆಕ್ಕಾಚಾರ ಆರಂಭವಾಗಿವೆ. ಕರ್ನಾಟಕದಲ್ಲಿ ಚುನಾವಣಾ ಫಲಿತಾಂಶದ ಮೇಲೆ ಒಮ್ಮೆ ಕಣ್ಣು ಹಾಯಿಸಿದರೆ, ರಾಷ್ಟ್ರೀಯ ಪಕ್ಷಗಳ ಸಾಧನೆ ಹಾಗೂ ಸ್ಥಳೀಯ ಪಕ್ಷಗಳ ಸಾಧನೆ ಹೇಗಿದೆ ಎಂಬ ಎದ್ದು ಕಾಣುತ್ತದೆ.

ಕಳೆದ ಚುನಾವಣೆಯನ್ನು ಗಮನಿಸಿದರೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕದ ಮತದಾರ ಬಹುಪರಾಕ್‌ ಎಂದಿದ್ದಾರೆ. 2019ರ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಎಂಬ ಹಣೆ ಪಟ್ಟಿ ಹೊಂದಿದೆ. ಬಿಜೆಪಿ 25 ಕ್ಷೇತ್ರಗಳನ್ನು ಗೆದ್ದು ಕರ್ನಾಟಕದಲ್ಲಿ ಅಬ್ಬರಿಸಿತ್ತು. ಕಾಂಗ್ರೆಸ್, ಜೆಡಿಎಸ್‌ ಹಾಗೂ ಪಕ್ಷೇತರ ತಲಾ ಒಂದು ಸ್ಥಾನವನ್ನು ಗೆದ್ದುಕೊಂಡಿದ್ದವು.

BJP Soars in Karnataka Lok Sabha Elections Congress Stuck Below Double Digits Since 1998

ಕಾಂಗ್ರೆಸ್‌ ಗರಿಷ್ಠ ಸ್ಥಾನ ಗೆದ್ದಿದ್ದು ಯಾವಾಗ?

1971ರಲ್ಲಿ ಕಾಂಗ್ರೆಸ್‌ ಕರ್ನಾಟಕದಲ್ಲಿ ಕ್ಲೀನ್‌ ಸ್ವೀಪ್ ಸಾಧನೆ ಮಾಡಿತ್ತು. ಈ ಸಾಧನೆಯನ್ನು ಬಿಟ್ಟರೆ, 1989ರಲ್ಲಿ ಕೈ ಪಡೆ 27 ಸ್ಥಾನಗಳಲ್ಲಿ ಗೆದ್ದು ಬೀಗಿತ್ತು. ಇಲ್ಲಿಂದ ಕಾಂಗ್ರೆಸ್ ಪಕ್ಷ ಮತ್ತೆ ಎಂದೂ ಇಂತಹ ಸಾಧನೆ ಮಾಡಿಲ್ಲ. ಕಳೆದ ಬಾರಿ ಕಾಂಗ್ರೆಸ್‌ 1998ರಲ್ಲಿ ಡಬಲ್‌ ಡಿಜಿಟ್‌ ಸಾಧನೆಯ ಹೊಸ್ತಿಲಲ್ಲಿ ನಿಂತಿತ್ತು.

2019ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ಕಣ ಪ್ರವೇಶಿಸಿತ್ತು. ಈ ಎರಡೂ ಪಕ್ಷಗಳಿಗೆ ಕೇವಲ ತಲಾ ಒಂದು ಒಂದು ಕ್ಷೇತ್ರದಲ್ಲಿ ಗೆಲುವು ದಕ್ಕಿತ್ತು. ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮೋದಿ ವೇವ್‌ ಭರ್ಜರಿಯಾಗಿ ಕೆಲಸ ಮಾಡಿತ್ತು. ಅದರ ಪರಿಣಾಮವೇ 28 ಸ್ಥಾನಗಳಲ್ಲಿ 25ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಇದು ದಕ್ಷಿಣ ಭಾರತದಲ್ಲಿ ಬಿಜೆಪಿ ಸಾಧಿಸಿದ ದೊಡ್ಡ ಗೆಲುವುವಾಗಿದೆ.

ಬಿಜೆಪಿ ಸಾಧನೆ ಹೇಗಿದೆ?

1991ರಲ್ಲಿ ಬಿಜೆಪಿ ಮೊದಲ ಬಾರಿಗೆ ಮೂರು ಕ್ಷೇತ್ರಗಳಲ್ಲಿ ನಗೆ ಬೀರಿತ್ತು. ಮಂಗಳೂರು ಕ್ಷೇತ್ರದಿಂದ ವಿ.ಧನಂಜಯ್‌ ಕುಮಾರ್‌, ಬೆಂಗಳೂರು ದಕ್ಷಿಣದಿಂದ ವಿ.ವೆಂಕಟಗಿರಿ ಗೌಡ ಹಾಗೂ ತುಮಕೂರಿನಿಂದ ಎಸ್‌ ಮಲ್ಲಿಕಾರ್ಜುನಯ್ಯ ಜಯ ಸಾಧಿಸಿದ್ದರು. 1995ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆದ್ದಿತು. 90 ರ ದಶಕದ ಉತ್ತರಾರ್ಧದಲ್ಲಿ ಜನತಾ ದಳದ ವಿಭಜನೆಯು ಬಿಜೆಪಿ ಬಲವರ್ಧನೆಗೆ ಸಹಾಯವಾಯಿತು.

BJP Soars in Karnataka Lok Sabha Elections Congress Stuck Below Double Digits Since 1998

ಲೋಕಸಭಾ ಚುನಾವಣೆಯಲ್ಲಿ ಬಿಜಿಪಿ 1998ರಲ್ಲಿ ಮೊದಲ ಬಾರಿಗೆ ಎರಡಂಕಿ ಮುಟ್ಟಿ ಸಂಭ್ರಮಿಸಿತ್ತು. ಈ ಚುನಾವಣೆಯಲ್ಲಿ ಬಿಜೆಪಿ 13 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಈ ಸಂಖ್ಯೆ 2004ರಲ್ಲಿ 18ಕ್ಕೆ ಏರಿಕೆ ಆಯಿತು. ಉತ್ತರ ಕರ್ನಾಟಕದ ಲಿಂಗಾಯತ ಮತದಾರರು ಬಿಜೆಪಿ ಕೈ ಹಿಡಿದಿರು. ಇಲ್ಲಿಂದ ಬಿಜೆಪಿ 2009ರಲ್ಲಿ 19 ಹಾಗೂ 2014ರಲ್ಲಿ 17 ಸ್ಥಾನವನ್ನು ಗೆದ್ದು ಬೀಗಿತ್ತು.

ಕಾಂಗ್ರೆಸ್‌ ಪಕ್ಷ ಕಾರ್ನಾಟಕದಲ್ಲಿ 1998ರಿಂದ ಇಲ್ಲಿಯವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಡಬಲ್‌ ಡಿಜಿಟ್‌ ಮುಟ್ಟಲು ಸಾಧ್ಯವಾಗಿಲ್ಲ. 1998ರಲ್ಲಿ ಕಾಂಗ್ರೆಸ್ 9 ಸ್ಥಾನ ಗೆದ್ದಿತ್ತು. 2014 ಚುನಾವಣೆಯಲ್ಲೂ ಕಾಂಗ್ರೆಸ್ ಎರಡಂಕಿಯ ಸಮೀಪಕ್ಕೆ ಬಂದಿದ್ದೇ ದೊಡ್ಡ ಸಾಧನೆಯಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಒಂದೇ ಸ್ಥಾನ ಗೆದ್ದಿರುವುದು ಕನಿಷ್ಠ ಸಾಧನೆ ಆಗಿದೆ.

ಈ ಬಾರಿ ಕಾಂಗ್ರೆಸ್‌ ನವ ಉತ್ಸಾಹದಲ್ಲಿ ರಣ ಕಣಕ್ಕೆ ಇಳಿದಿದ್ದು, ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಪಕ್ಷಗಳನ್ನು ಎದುರಿಸಲಿದೆ. ಈ ಬಾರಿಯಾದರೂ ಕಾಂಗ್ರೆಸ್‌ ಎರಡಂಕಿ ಮುಟ್ಟುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+