• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಕೋಟಿ ಹಗರಣಕ್ಕೆ ಆಶ್ರಯದಾತೆ ಸೋನಿಯಾ ಗಾಂಧಿ-ಬಿಜೆಪಿ ಟೀಕೆ

|
Google Oneindia Kannada News

ಬೆಂಗಳೂರು, ಡಿಸೆಂಬರ್‌2: 2023ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ಜಟಾಪಟಿ ಜೋರಾಗಿದೆ. ಎರಡೂ ಪಕ್ಷಗಳು ಭ್ರಷ್ಟಾಚಾರ ವಿಚಾರದಲ್ಲಿ ಒಂದನ್ನೊಂದು ದೂಷಿಸುತ್ತಿದ್ದು, ಭ್ರಷ್ಟ ಕಾಂಗ್ರೆಸ್‌ ಎಂದು ಬಿಜೆಪಿ ಟ್ವೀಟ್‌ ಮೂಲಕ ವ್ಯಂಗ್ಯವಾಡಿದೆ.

ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಇ.ಡಿ ಅಧಿಕಾರಿಗಳು ಇನ್ಮುಂದೆ ಹಣಬಾಕರನ್ನು ವಾರಂಟ್‌ ಇಲ್ಲದೆ ಬಂಧಿಸಬಹುದಾಗಿದ್ದು, ಕಾಂಗ್ರೆಸ್‌ನಂತಹ ಭ್ರಷ್ಟಾಚಾರಿಗಳ ಎದೆ ನಡುಗಲಾರಂಭಿಸಿದೆ. ಇದರಿಂದ 'ನ ಖಾವೂಂಗಾ, ನ ಖಾನೇ ದೂಂಗಾ' ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಇನ್ನಷ್ಟು ಬಲ ಬಂದಂತಾಗಿದೆ ಎಂದು ಬಿಜೆಪಿ ಸಂತಸ ಹಂಚಿಕೊಂಡಿದೆ.

Breaking; ವಿವಿಧ ಇಲಾಖೆಗಳ ವರ್ಗಾವಣೆಗೆ ತಡೆ ಕೊಟ್ಟ ಸಿಎಂBreaking; ವಿವಿಧ ಇಲಾಖೆಗಳ ವರ್ಗಾವಣೆಗೆ ತಡೆ ಕೊಟ್ಟ ಸಿಎಂ

ಈ ಮೂಲಕ ಕಾಂಗ್ರೆಸ್‌ಗೆ ತಿರುಗೇಟು ನೀಡಿರುವ ಬಿಜೆಪಿ, ಇಂದಿರಾ ಗಾಂಧಿ ಚುನಾವಣೆ ಗೆದಿದ್ದು ಭ್ರಷ್ಟಾಚಾರದಿಂದಲ್ಲದೇ, ಗಾಂಧಿವಾದದಿಂದಲ್ಲ. ಯಂಗ್ ಇಂಡಿಯಾ ಮೂಲಕ ನ್ಯಾಷನಲ್ ಹೆರಾಲ್ಡ್ ಎಂಬ ಬಹುಕೋಟಿ ಹಗರಣಕ್ಕೆ ಆಶ್ರಯದಾತೆ ಸೋನಿಯಾ. ಇಂತಹ ಭ್ರಷ್ಟಾಚಾರಿಗಳ ಬಾಯಲ್ಲೂ ಭ್ರಷ್ಟಾಚಾರ ವಿರೋಧ ಬರುವಂತಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿ ಡಿ.ಕೆ ಶಿವಕುಮಾರ್‌ ಎಂದು ವ್ಯಂಗ್ಯ ಮಾಡಿದೆ.

ಟ್ವೀಟ್‌ ಮೂಲಕ ಕಾಂಗ್ರೆಸ್‌ ಭ್ರಷ್ಟಾಚಾರದ ಬಗ್ಗೆ ಟೀಕೆ ಮಾಡಿರುವ ಬಿಜೆಪಿ, ನಿಮ್ಮದೇ ಪಕ್ಷದ ಇನ್ನೊಬ್ಬ ಮಹಾಪುರುಷ ಎಂ.ಬಿ ಪಾಟೀಲ್‌, ನೀರಾವರಿ ಸಚಿವರಾಗಿದ್ದಾಗ ಧಾರವಾಡದ ಜನರ ನೀರ ದಾಹದಲ್ಲೂ ದುಡ್ಡು ಹೊಡೆದರು. ಮಲಪ್ರಭಾ ಕಾಲುವೆ ಆಧುನೀಕರಣ ಕಾಮಗಾರಿಯಲ್ಲಿ 400 ಕೋಟಿ ರೂಪಾಯಿ ಲಪಟಾಯಿಸಿದ್ದು ಭ್ರಷ್ಚಾಚಾರ. 159 ಕೋಟಿ ರೂಪಾಯಿ ನೀರಾವರಿ ಯೋಜನೆಗಳಿಗೆ 25 ಕೋಟಿ ರೂಪಾಯಿ ಕಿಕ್ ಬ್ಯಾಕ್ ತಗೆದುಕೊಂಡಿದ್ದರಲ್ಲ ಅದೇನು ಎಂದು ಬಿಜೆಪಿ ಪ್ರಶ್ನಿಸಿದೆ.

ಭ್ರಷ್ಟರ ರಾಜ ಕೆ.ಜೆ ಜಾರ್ಜ್ ತಮ್ಮ ಐಟಿ ಪಾರ್ಕ್‌ಗೆ ರಕ್ಷಣಾ ಇಲಾಖೆಯ ಭೂಮಿಯನ್ನೇ ನುಂಗಿದ್ದು ಭ್ರಷ್ಟಚಾರ. ವೈಲ್ಡ್ ಫ್ಲವರ್ ಎಸ್ಟೇಟ್ ಎನ್ನುವ ಸಂಸ್ಥೆ ಕಟ್ಟಿಕೊಂಡು 140 ಕೋಟಿ ರೂಪಾಯಿ ಮೊತ್ತದ ಭೂಮಿ ಲಪಟಾಯಿಸಿ, ರಾಜ್ಯದ ಜನರ ಕಿವಿ ಮೇಲೆ ಹೂವು ಇಟ್ಟ ಜಾರ್ಜ್‌ರನ್ನು ಯಾಕೆ ಮರೆತಿರಿ ಡಿ.ಕೆ ಶಿವಕುಮಾರ್‌, ನಿಮಗೆಷ್ಟು ಪರ್ಸೆಂಟ್‌ ಬಂದಿದೆ..? ನಿಮ್ಮ ವಿರೋಧಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬೆಂಗಳೂರಿಗರ ಸೂರಿನ ಕನಸಿಗೆ ಕನ್ನ ಕೊರೆದು, 943 ಎಕರೆಯ ಅರ್ಕಾವತಿ ಡಿ-ನೋಟಿಫಿಕೇಷನ್ ಮಾಡಿ, ಪ್ರಕರಣ ತಮ್ಮ ಕಡೆ ತಿರುಗಿದಾಗ ಕಡತಗಳನ್ನೇ ಎಗರಿಸಿದ್ದು ಇದೇ ಸಿದ್ದರಾಮಯ್ಯನವರ ಭ್ರಷ್ಟ 'ಕೈ'ಗಳೇ. ಬಾಕಿಯವರದ್ದು ಭ್ರಷ್ಟಾಚಾರ ತಮ್ಮದು ಬೊಂಬೆ ಮಿಠಾಯಿಯೇ..? ಎಂದು ಬಿಜೆಪಿ, ಕಾಂಗ್ರೆಸ್‌ ವಿರುದ್ಧ ಲೇವಡಿ ಮಾಡಿದೆ.

BJP Sarcasm Tweet Against Congress Leaders Corruption

ತಾನೇ ಚಾಣಕ್ಯ ಎಂಬ ಭ್ರಮೆಯಲ್ಲಿದ್ದ ಡಿ.ಕೆ ಶಿವಕುಮಾರ್‌, ಜೈಲಿಗೆ ಹೋಗಿದ್ದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಯಲ್ಲ. ಇದೇ ಭ್ರಷ್ಟಾಚಾರದಿಂದ. 20 ಬ್ಯಾಂಕ್‌ನಲ್ಲಿ ₹200 ಕೋಟಿ ಹೂತಿಟಿದ್ದು, ನಿಮ್ಮ ಆದಾಯ 800 ಪಟ್ಟು ಹೆಚ್ಚಾಗಿರುವುದು ಭ್ರಷ್ಟಾಚಾರದಿಂದ. ಭ್ರಷ್ಟಾಚಾರದ ಬಗ್ಗೆ ಖುದ್ದು ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚಂದ ಎಂದು ಬಿಜೆಪಿ ವ್ಯಂಗ್ಯ ಮಾಡಿದೆ.

ಉನ್ನತ ಶಿಕ್ಷಣ ಪರಿಷತ್ತಿಗೆ 10 ಮಂದಿ ನಾಮನಿರ್ದೇಶನ: ಅಶ್ವತ್ಥನಾರಾಯಣಉನ್ನತ ಶಿಕ್ಷಣ ಪರಿಷತ್ತಿಗೆ 10 ಮಂದಿ ನಾಮನಿರ್ದೇಶನ: ಅಶ್ವತ್ಥನಾರಾಯಣ

ಸಿದ್ದರಾಮಯ್ಯ
Know all about
ಸಿದ್ದರಾಮಯ್ಯ

English summary
BJP tweet against Congress, and BJP sarcasm about Congress leaders corruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X