ಪ್ರಚಾರಕ್ಕೆ ಬಿಜೆಪಿಯಿಂದ 'ವಾಟ್ಸಾಪ್ ತಂತ್ರ', 5000 ಗ್ರೂಪ್ ರಚನೆ
ಬೆಂಗಳೂರು, ಜೂನ್ 28: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಚುನಾವಣೆಗೆ ಸಜ್ಜಾಗುತ್ತಿವೆ. ಸಾಮಾಜಿಕ ಜಾಲತಾಣಗಳನ್ನು ಭರ್ಜರಿಯಾಗಿ ನೆಚ್ಚಿಕೊಂಡಿರುವ ಬಿಜೆಪಿ ಪ್ರಚಾರಕ್ಕಾಗಿ 5,000 ವಾಟ್ಸಾಪ್ ಗುಂಪುಗಳನ್ನು ತಯಾರಿಸಲು ಮುಂದಾಗಿದೆ. ಈ ಗುಂಪುಗಳ ಮೂಲಕ ಜನರನ್ನು ತಲುಪುವ ಯೋಜನೆ ಹಾಕಿಕೊಂಡಿದೆ.
ಇದಕ್ಕಾಗಿ 25,000 ಕಾರ್ಯಕರ್ತರಿಗೆ ತರಬೇತಿ ನೀಡುವ ಗುರಿಯನ್ನೂ ಬಿಜೆಪಿ ಹಾಕಿಕೊಂಡಿದೆ. ಕಳೆದ ಆರು ತಿಂಗಳಿನಿಂದ ಇದಕ್ಕಾಗಿ ತರಬೇತಿಗಳೂ ನಡೆಯುತ್ತಿವೆ. "ಬಿಜೆಪಿಯ ಐಟಿ ಸೆಲ್ 2007ರಿಂದ ಅಸ್ತಿತ್ವದಲ್ಲಿದೆ. ವಾಟ್ಸಾಪ್ ಜನಪ್ರಿಯತೆ ಹೆಚ್ಚುತ್ತಿರುವುದರಿಂದ ವಾಟ್ಸಾಪ್ ಮೂಲಕ ಸಂಪರ್ಕ ಸಾಧಿಸಲು ಯೋಚಿಸಲಾಗಿದೆ. ರಾಜ್ಯ, ಜಿಲ್ಲಾ, ಕ್ಷೇತ್ರ ಮಟ್ಟದಲ್ಲಿ ಬೇರೆ ಬೇರೆ ರೀತಿಯ ಗುಂಪುಗಳನ್ನು ರಚಿಸಲಾಗಿದೆ. ನಮ್ಮ ಗುರಿ 5,000 ಸದ್ಯ 2,000 ಗುಂಪುಗಳನ್ನು ಆರಂಭಿಸಲಾಗಿದೆ," ಎಂದು ಬಿಜೆಪಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥ ಬಾಲಾಜಿ ಬಸವರಾಜ್ ಎನ್ಡಿಟಿವಿಗೆ ತಿಳಿಸಿದ್ದಾರೆ.

ಬಿಜೆಪಿಯ ಸಾಮಾಜಿಕ ಜಾಲತಾಣಗಳ ಕಾರ್ಯಕರ್ತರು ಮೊಬೈಲ್ ನಂಬರ್ ಗಳನ್ನು ಹೊಂದಿಸುವ ಕೆಲಸದಲ್ಲಿ ನಿರತವಾಗಿದ್ದು, ಇವರಿಗೆಲ್ಲಾ ಆಕರ್ಷಕ ಅನಿಮೇಷನ್, ಜಿಫ್ ಚಿತ್ರಗಳನ್ನು ಬಿಜೆಪಿ ಕಡೆಯಿಂದ ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತದೆ.
ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ 100 ಜನ ವಾಟ್ಸಾಪ್ ಅಡ್ಮಿನ್ ಗಳನ್ನು ನಿಯುಕ್ತಿ ಮಾಡಿಕೊಳ್ಳುವ ಗುರಿ ಬಿಜೆಪಿ ಮುಂದಿದೆ. ಇವರ ಮೂಲಕ ತಮಗೆ ಬೇಕಾದ ಸರಕುಗಳನ್ನು ಜನರಿಗೆ ತಲುಪಿಸುವುದು ಬಿಜೆಪಿ ಉದ್ದೇಶವಾಗಿದೆ.
ಉತ್ತರ ಪ್ರದೇಶದಲ್ಲೂ ಬಿಜೆಪಿ ಪ್ರಚಾರಕ್ಕೆ ಮೊಬೈಲ್ ಹಾಗೂ ವಾಟ್ಸಾಪ್ ಗಳನ್ನು ದೊಡ್ಡಮಟ್ಟಕ್ಕೆ ಬಳಸಿಕೊಂಡಿತ್ತು; ಮತ್ತು ದೊಡ್ಡ ಮಟ್ಟಕ್ಕೆ ಗೆಲುವನ್ನೂ ಸಾಧಿಸಿತ್ತು.
-
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು












Click it and Unblock the Notifications