ಮೊಯ್ಲಿ ಟ್ವೀಟ್ ಗೆ ಯಡಿಯೂರಪ್ಪ ಟ್ವೀಟ್ ಟಾಂಗ್!

ಬೆಂಗಳೂರು, ಮಾರ್ಚ್ 16 : ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ಸಿಗ ವೀರಪ್ಪ ಮೊಯ್ಲಿ ಅವರು ಕಾಂಗ್ರೆಸ್ಸಿನಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಹಣಬಲ ಬಳಸಲಾಗುತ್ತಿದೆ ಎಂದು ಮಾಡಿರುವ ಟ್ವೀಟ್ ಗೆ ಭಾರತೀಯ ಜನತಾ ಪಕ್ಷದ ಕರ್ನಾಟಕ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಮೋಯ್ಲಿ, 'ನನಗೂ ಆ ಟ್ವೀಟ್ ಗೂ ಯಾವುದೇ ಸಂಬಂಧವಿಲ್ಲ. ನನ್ನ ಮಗನೂ ಆ ರೀತಿ ಟ್ವೀಟ್ ಮಾಡಿಲ್ಲ. ಆ ಟ್ವೀಟ್ ಅನ್ನು ತಕ್ಷಣವೇ ತೆಗೆದುಹಾಕಲಾಗುವುದು' ಎಂದಿದ್ದರು. ಸದ್ಯ ಟ್ವೀಟ್ ಡಿಲೀಟ್ ಆಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

BJP president BS Yeddyurappa reaction to Veerappa Moily tweet

"ರಾಜಕೀಯದಲ್ಲಿ ಹಣಬಲ ಬಳಕೆಯಾಗುತ್ತಿರುವುದನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಬೇಕಿದೆ" ಎಂದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಮೊಯ್ಲಿ, ತಮ್ಮ ಟ್ವೀಟ್ ಅನ್ನು ರಾಹುಲ್ ಗಾಂಧಿ, ಐಎನ್ ಸಿ ಇಂಡಿಯಾ, ಐಎನ್ ಸಿ ಕರ್ನಾಟಕ ಟ್ವಿಟ್ಟರ್ ಖಾತೆಗಳಿಗೂ ಟ್ಯಾಗ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ಕೊನೆಗೂ ಒಬ್ಬರು ಕರ್ನಾಟಕ ಕಾಂಗ್ರೆಸ್ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರ 10 ಪರ್ಸೆಂಟ್ ಸಿಎಂ ಎಂದು ನಾವು ಹೇಳುತ್ತಾ ಬಂದಿದ್ದೇವೆ.

ಪಿಡಬ್ಲ್ಯೂಡಿ ಸಚಿವರ ಜೇಬಿಗೆ ಗುತ್ತಿಗೆದಾರರು ಹಣ ಹಾಕುವುದರ ಬಗ್ಗೆ ನಾವು ಮೊದಲೇ ಹೇಳಿದ್ದೆವು. ಹಿರಿಯ ಕಾಂಗ್ರೆಸ್ಸಿನ ಟ್ವೀಟ್ ನಮ್ಮ ಅಭಿಯಾನಕ್ಕೆ ಪೂರಕವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+