ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸುದ್ದಿ ವಾಹಿನಿಗಳಲ್ಲಿ ಅಮಿತ್ ಶಾ: ತಂತ್ರಗಾರಿಕೆಯ ಪರಮಾವಧಿ!

|
Google Oneindia Kannada News

Recommended Video

ಕನ್ನಡ ಚಾನೆಲ್ ನಲ್ಲಿ ಅಮಿತ್ ಶಾ ಕೊಟ್ಟ ಇಂಟರ್ವ್ಯೂ ಮತದಾರರನ್ನ ಸೆಳೆಯುವ ಹುನ್ನಾರವೇ? | Oneindia Kannada

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೆಚ್ಚಾಗಿ ರಾಷ್ಟ್ರೀಯ ಖಾಸಗಿ ಸುದ್ದಿ ವಾಹಿನಿಗಳಿಗೇ ಸಂದರ್ಶನ ನೀಡುವುದು ಕಮ್ಮಿ. ಅಂತದರಲ್ಲಿ ಎರಡೆರಡು ಕನ್ನಡ ಖಾಸಗಿ ಸುದ್ದಿವಾಹಿನಿಗಳಿಗೆ ಸಂದರ್ಶನ ನೀಡಿ ಹೋಗಿದ್ದಾರೆ. ಇದಕ್ಕೆ ಕಾರಣ ಸ್ಪಷ್ಟ.. ಕರ್ನಾಟಕ ವಿಧಾನಸಭಾ ಚುನಾವಣೆ.

ಎರಡೂ ಸುದ್ದಿವಾಹಿನಿಗಳ ಸಂದರ್ಶನದ ವೇಳೆ ಅಮಿತ್ ಶಾ ಅತ್ಯಂತ ಭರವಸೆಯಿಂದ ಹೇಳಿದ್ದು, ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು. ಇದೆಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ಸುದ್ದಿವಾಹಿನಿಗಳ ಸಂದರ್ಶನದಲ್ಲಿ ಭಾಗವಹಿಸಿ, ಇಲ್ಲಿನ ಮತದಾರರನ್ನು ತಲುಪುವ 'ತಂತ್ರಗಾರಿಕೆ'ಯ ಕೆಲಸವನ್ನು ಶಾ ಮಾಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಅಮಿತ್ ಶಾ ಮಾಡಿಹೋಗಿದ್ದನ್ನು ಎಐಸಿಸಿ ಅಧ್ಯಕ್ಷರೂ ಮಾಡಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ ನಮ್ಮ ಸುದ್ದಿವಾಹಿನಿಗಳ ನಿರೂಪಕರಿಗೆ ರಾಹುಲ್ ಗಾಂಧಿಯವರ ಸಂದರ್ಶನ ಮಾಡುವುದು ಕಷ್ಟವಾಗಲಾರದು, ಯಾಕೆಂದರೆ ರಾಹುಲ್ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಬಲ್ಲರು, ಆದರೆ ಅಮಿತ್ ಶಾ ಅವರಿಗೆ ಆಂಗ್ಲ ಭಾಷೆಯ ಮೇಲೆ ಹಿಡಿತ ಕಮ್ಮಿ.

ಚನ್ನಪಟ್ಟಣದ ಬೊಂಬೆ ಕಾರ್ಮಿಕರ ಜತೆ ಸೆಲ್ಫಿ ಕ್ಲಿಕ್ಕಿಸಿದ ಅಮಿತ್ ಶಾಚನ್ನಪಟ್ಟಣದ ಬೊಂಬೆ ಕಾರ್ಮಿಕರ ಜತೆ ಸೆಲ್ಫಿ ಕ್ಲಿಕ್ಕಿಸಿದ ಅಮಿತ್ ಶಾ

ಸ್ಥಳೀಯ ವಾಹಿನಿಗಳಲ್ಲಿ ಭಾಗವಹಿಸಿ ಅಲ್ಲಿನ ಸಮಸ್ಯೆಗಳ ಜೊತೆ ಪಕ್ಷದ ಸಂದೇಶವನ್ನು ಮತದಾರರಿಗೆ ತಲುಪಿಸುವುದು ಅಮಿತ್ ಶಾ ಅವರ ತಂತ್ರಗಾರಿಕೆಯಲ್ಲೊಂದು. ಆ ಮೂಲಕ, ಕಾಂಗ್ರೆಸ್ಸಿಗಿಂತ ಮುನ್ನವೇ ಬಿಜೆಪಿ ಈ ಹೆಜ್ಜೆಯಿಟ್ಟಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷದ ನಾಯಕರು ಚುನಾವಣೆ ಮುಗಿಯುವವರೆಗೆ ಕನ್ನಡ ಮಾಧ್ಯಮಗಳಲ್ಲಿ ಹೆಚ್ಚುಹೆಚ್ಚು ಬರಬಹುದು.

ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಹಿಂದಿಯಲ್ಲಿ ಉತ್ತರಿಸಿದ ಅಮಿತ್ ಶಾ, ಕೇಳಲಾದ ಎಲ್ಲಾ ಕರ್ನಾಟಕ ಸಂಬಂಧ ಪ್ರಶ್ನೆಗಳಿಗೆ ತಮ್ಮದೇ ರೀತಿಯಲ್ಲಿ ಉತ್ತರಿಸಿದರು. ಅದರಲ್ಲಿ ಲಿಂಗಾಯತ, ಮಹಾದಾಯಿ, ಮಠಗಳ ಭೇಟಿ ಎಲ್ಲವೂ ಇತ್ತು. ಪ್ರಶ್ನೆಗಳಿಗೆ ಶಾ ಖಡಕ್ ಉತ್ತರ, ಮುಂದೆ ಓದಿ..

ಅತಿಹೆಚ್ಚು ಟಿಆರ್ಪಿಗಳಿಸುವಲ್ಲಿ ಯಶಸ್ವಿಯಾದ ಶಾ ಇಂಟರ್ವ್ಯೂ

ಅತಿಹೆಚ್ಚು ಟಿಆರ್ಪಿಗಳಿಸುವಲ್ಲಿ ಯಶಸ್ವಿಯಾದ ಶಾ ಇಂಟರ್ವ್ಯೂ

ಎರಡೂ ಸುದ್ದಿವಾಹಿನಿಗಳಲ್ಲಿ ಪ್ರಸಾರವಾದ ಸಂದರ್ಶನ ಅತಿಹೆಚ್ಚು ಟಿಆರ್ಪಿಗಳಿಸುವಲ್ಲಿ ಯಶಸ್ವಿಯಾಗುವ ಮೂಲಕ, ಅಮಿತ್ ಶಾ ಏನು ಬಯಸಿದ್ದರೋ ಅದು ಆದಂತಾಗಿದೆ. ಕರ್ನಾಟಕದ ಮತದಾರರನ್ನು ಇನ್ನಷ್ಟು ಸೆಳೆಯಲು ಚುನಾವಣೆಗೆ ಮುನ್ನ ಪ್ರಧಾನಿ ಮೋದಿ, ಕನ್ನಡ ಮಾಧ್ಯಮಗಳಿಗೆ ಸಂದರ್ಶನ ನೀಡಿದರೂ ಆಶ್ಚರ್ಯವಿಲ್ಲ.

ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಬಿಜೆಪಿ ಚಾಣಕ್ಯ ಅಮಿತ್ ಶಾಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಬಿಜೆಪಿ ಚಾಣಕ್ಯ ಅಮಿತ್ ಶಾ

ಮಹಾದಾಯಿ ವಿಚಾರದಲ್ಲಿ ಕೇಳಲಾದ ಪ್ರಶ್ನೆಗೆ ಶಾ ಉತ್ತರ

ಮಹಾದಾಯಿ ವಿಚಾರದಲ್ಲಿ ಕೇಳಲಾದ ಪ್ರಶ್ನೆಗೆ ಶಾ ಉತ್ತರ

ಮಹಾದಾಯಿ ವಿಚಾರದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಅಮಿತ್ ಶಾ, ನಮ್ಮ ಸರಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು. ಇದು ಎರಡು ರಾಜ್ಯಗಳ ನಡುವಿನ ಸಮಸ್ಯೆ ಎಂದು ಹೇಳುತ್ತಾ, ಈ ಹಿಂದೆ ಎಐಸಿಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಗೋವಾ ಅಸೆಂಬ್ಲಿ ಚುನಾವಣೆಯ ವೇಳೆ ನೀಡಿದ ಹೇಳಿಕೆಯನ್ನು ಶಾ ಉಲ್ಲೇಖಿಸಿ, ಪ್ರಶ್ನೆಯನ್ನು ಸಾಗಹಾಕಿದ್ದಾರೆ.

ಯಡಿಯೂರಪ್ಪಜೀ ಮುಖ್ಯಮಂತ್ರಿಯಾಗಬಾರದು ಎನ್ನುವ ಒಂದೇ ಉದ್ದೇಶ

ಯಡಿಯೂರಪ್ಪಜೀ ಮುಖ್ಯಮಂತ್ರಿಯಾಗಬಾರದು ಎನ್ನುವ ಒಂದೇ ಉದ್ದೇಶ

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ಚುನಾವಣೆ ಮುಗಿದ ನಂತರ ಈ ಬಗ್ಗೆ ಮಾತನಾಡುತ್ತೇನೆ. ಒಂದಂತೂ ಸತ್ಯ, ಯಡಿಯೂರಪ್ಪಜೀ ಮುಖ್ಯಮಂತ್ರಿಯಾಗಬಾರದು ಎನ್ನುವ ಒಂದೇ ಉದ್ದೇಶ ಇದರ ಹಿಂದೆಯಿದೆ, ಇಲ್ಲದಿದ್ದರೆ ಚುನಾವಣೆಗೆ ಕೆಲವೇ ತಿಂಗಳು ಇರಬೇಕಾದರೆ, ಪ್ರತ್ಯೇಕ ಧರ್ಮದ ನೆನಪು ಕಾಂಗ್ರೆಸ್ಸಿಗೆ ಬಂತಾ ಎಂದು ಮರು ಪ್ರಶ್ನಿಸಿದ್ದಾರೆ.

ಬಿಜೆಪಿಗೆ ಕರ್ನಾಟಕ ಅಸೆಂಬ್ಲಿ ಚುನಾವಣೆ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆಯೇ?

ಬಿಜೆಪಿಗೆ ಕರ್ನಾಟಕ ಅಸೆಂಬ್ಲಿ ಚುನಾವಣೆ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆಯೇ?

ಬಿಜೆಪಿಗೆ ಕರ್ನಾಟಕ ಅಸೆಂಬ್ಲಿ ಚುನಾವಣೆ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ನಮ್ಮ ಗೆಲುವು ಖಂಡಿತ. ಇದು ನನ್ನ ಹಾರಿಕೆಯ ಉತ್ತರವಲ್ಲ, ಗ್ರೌಂಡ್ ರಿಯಾಲಿಟಿ ಅರಿತೇ ಮಾತನಾಡುತ್ತಿದ್ದೇನೆ. ಬಿಜೆಪಿ ಗೆಲ್ಲುತ್ತಾ ಎನ್ನುವ ಡೌಟ್ ಮಾಧ್ಯಮದವರಿಗೆ ಇದೆಯೇ ಹೊರತು ಮತದಾರರಿಗಿಲ್ಲ. ಮಾಧ್ಯಮದವರು ನಮ್ಮನ್ನು ತುಳಿಯುವ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. ಒಂದು ತಿಳಿದುಕೊಳ್ಳಿ, ನಮ್ಮನ್ನು ಗೆಲ್ಲಿಸುತ್ತಿರುವವರು ಈ ದೇಶದ ಮತದಾರ ಎಂದು ಶಾ ಮಾಧ್ಯಮದವರಿಗೇ ತಿರುಗೇಟು ನೀಡಿದ್ದಾರೆ.

ಮಠಕ್ಕೆ ಭೇಟಿ ನೀಡುತ್ತಿರುವುದು ಮತಬೇಟೆಗಾಗಿ ಅಲ್ಲ, ಸ್ವಾಮೀಜಿಗಳ ಆಶೀರ್ವಾದಕ್ಕಾಗಿ

ಮಠಕ್ಕೆ ಭೇಟಿ ನೀಡುತ್ತಿರುವುದು ಮತಬೇಟೆಗಾಗಿ ಅಲ್ಲ, ಸ್ವಾಮೀಜಿಗಳ ಆಶೀರ್ವಾದಕ್ಕಾಗಿ

ಮಠಮಂದಿರಗಳಿಗೆ ಭೇಟಿ ನೀಡುತ್ತಿರುವ ವಿಚಾರದ ಬಗ್ಗೆ ಬಂದ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ನಮ್ಮದು ಚುನಾವಣೆಯ ವೇಳೆಯಲ್ಲಿನ ಟೆಂಪಲ್ ರನ್ ರಾಜಕೀಯವಲ್ಲ. ನಾವು ಹಿಂದೆಯೂ ಹೋಗುತ್ತಿದ್ದೆವು, ಈಗಲೂ ಹೋಗುತ್ತಿದ್ದೇವೆ. ಇದರಲ್ಲಿ ಹೊಸದು ಮಾಧ್ಯಮದವರಿಗೆ ಕಾಣಿಸುತ್ತಿದೆಯೇ ಹೊರತು ಜನರಿಗಲ್ಲ. ನಾವು ಮಠಕ್ಕೆ ಭೇಟಿ ನೀಡುತ್ತಿರುವುದು ಮತಬೇಟೆಗಾಗಿ ಅಲ್ಲ, ಸ್ವಾಮೀಜಿಗಳ ಆಶೀರ್ವಾದಕ್ಕಾಗಿ ಎಂದು ಶಾ ಖಡಕ್ ಉತ್ತರ ನೀಡಿದ್ದಾರೆ.

English summary
BJP National President Amit Shah interview to Kannada news channel, is it a new tactics of BJP to reach people? Amit Shah addressed all the questions raised by two Kannada news channels during the interview, and he said, BJP will come back to the power in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X