ವಿಧಾನಸಭೆಗೆ ಮುತ್ತಿಗೆ ಹಾಕಲು ಬಿಜೆಪಿ ಸಜ್ಜಾಗಿದೆ: ಈಶ್ವರಪ್ಪ

ಶಿವಮೊಗ್ಗ, ನ.15: ಕರ್ನಾಟಕದಲ್ಲಿ ಜಾತಿ ಜಾತಿಗಳ ನಡುವೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿರುವ ಮೊದಲನೇ ಸರ್ಕಾರವೆಂದರೆ ಅದು ಕಾಂಗ್ರೆಸ್ ಸರ್ಕಾರ. ನ.17ರಂದು ವಿಧಾನಸಭೆಗೆ ಮುತ್ತಿಗೆ ಹಾಕಲು ಬಿಜೆಪಿ ಸಜ್ಜಾಗಿದೆ ಎಂದು ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಡಿಕೇರಿ ಗಲಭೆ ಬಗ್ಗೆ ಅಧಿವೇಶನದಲ್ಲಿ ವಿಸ್ತೃತ ಚರ್ಚೆ ನಡೆಸುತ್ತೇವೆ. ರಾಜ್ಯದಲ್ಲಿ ಜನರನ್ನು ಜಾತಿ ಆಧಾರದ ಮೇಲೆ ಎತ್ತಿ ಕಟ್ಟುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ.

ಹಿಂದೂಗಳನ್ನು, ಮುಸಲ್ಮಾನರನ್ನು ಒಕ್ಕಲೆಬ್ಬಿಸಿ ಒಡೆದು ಛಿದ್ರ ಮಾಡುವುದೇ ಕಾಂಗ್ರೆಸ್‌ನ ಕಾಯಕವಾಗಿದೆ. ಈಗ ಹಿಂದುಳಿದವರು, ದಲಿತರು ಇವರ ಪರವಾಗಿ ನಾವಿದ್ದೇವೆ ಎಂದು ಹೇಳಿ ಎಲ್ಲ ವರ್ಗದವರಿಗೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.[ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷ ಸಜ್ಜು]

Karnataka BJP picketing Vidhana Soudha on November 17

ರಾಜ್ಯದಲ್ಲಿ ದರೋಡೆ, ಸುಲಿಗೆ, ಅತ್ಯಾಚಾರ, ಕೊಲೆ ನಡೆಯುತ್ತಿರುವ ಸಂದರ್ಭದಲ್ಲಿ ವಿಪಕ್ಷದವರಾದ ನಾವು ಕೈ ಕಟ್ಟಿ ಕೂರಲು ಸಾಧ್ಯವಿಲ್ಲ. ನಾಳೆ(ನವೆಂಬರ್ 16) ಯಿಂದ ಪ್ರಾರಂಭವಾಗಲಿರುವ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇವೆ ಹಾಗೂ ನ. 17ರಂದು ವಿಧಾನಸಭೆಗೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು.

ನವೆಂಬರ್ 16ರಿಂದ ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ. ವಿಧಾನ ಪರಿಷತ್ ಅಧಿವೇಶನವೂ ನವೆಂಬರ್ 16 ರಿಂದ ನವೆಂಬರ್ 27 ರವರೆಗೆ ನಡೆಯಲಿದೆ.ನವೆಂಬರ್ 16 ರಿಂದ ನಡೆಯುವ 10 ದಿನಗಳನ್ನು ಸೇರಿಸಿದಲ್ಲಿ ಈ ವರ್ಷ ಒಟ್ಟು 60 ದಿನ ಅಧಿವೇಶನ ನಡೆದಂತಾಗುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದ್ದಾರೆ.

ಟಿಪ್ಪು ಜಯಂತಿ, ಪ್ರಶಸ್ತಿ ವಾಪಸ್, ಮಡಿಕೇರಿ ಗಲಭೆ, ಸಚಿವ ಆಂಜನೇಯ ಅವರ ಕುಟುಂಬದ ಮೇಲಿನ ಆರೋಪ, ಮುಂದುವರೆದಿರುವ ಅತ್ಯಾಚಾರ ಪ್ರಕರಣಗಳು ಇವೇ ಈ ಬಾರಿಯ ಚರ್ಚೆಯ ವಿಷಯವಾಗಲಿದೆ. ಮೂರು ವಿಧೇಯಕಗಳಿಗೆ ಅಧಿವೇಶನದಲ್ಲಿ ಅಂಗೀಕಾರ ದೊರೆಯುವ ಸಾಧ್ಯತೆಯಿದೆ. (ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+