"ಗಾಂಧೀಜಿ ಹತ್ಯೆಗೆ ಜವಾಹರಲಾಲ್ ನೆಹರು ಕಾರಣ"!
ಸದಾ ಒಂದಿಲ್ಲೊಂದು ಹೇಳಿಕೆಗಳ ಮೂಲಕ ವಿವಾದವನ್ನೇ ಸೃಷ್ಟಿಮಾಡುವ ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ್ ಅವರು ಇದೀಗ ಇನ್ನೊಂದು ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟಿದ್ದಾರೆ. ಮಹಾತ್ಮ ಗಾಂಧಿ ಅವರ ಹತ್ಯೆಗೆ ಸಂಬಂಧಿಸಿದಂತೆ ಅವರು ಕೊಟ್ಟಿರುವ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಮಹಾತ್ಮ ಗಾಂಧಿ ಅವರ ಹತ್ಯೆಯಲ್ಲಿ ಜವಾಹರಲಾಲ್ ಅವರ ಪಾತ್ರವಿದೆ ಎನ್ನುವ ಗಂಭೀರ ಸ್ವರೂಪದ ವಿವಾದಾತ್ಮಕ ಹೇಳಿಕೆಯನ್ನು ಬಸನಗೌಡ ಪಾಟೀಲ ಯತ್ನಾಳ್ ಅವರು ಕೊಟ್ಟಿದ್ದಾರೆ. ಅಷ್ಟಕ್ಕೂ ಬಸನಗೌಡ ಪಾಟೀಲ ಯತ್ನಾಳ್ ಅವರು ಗಾಂಧೀಜಿ ಅವರ ಹತ್ಯೆಗೆ ಸಂಬಂಧಿಸಿದಂತೆ ಏನು ಮಾತನಾಡಿದ್ದಾರೆ. ಏನಿದು ಹೊಸ ವಿವಾದ ಎನ್ನುವ ವಿವರ ಇಲ್ಲಿದೆ.
ಬಸನಗೌಡ ಯತ್ನಾಳ್ ಅವರು ಇದೀಗ ಮತ್ತೊಂದು ಹೇಳಿಕೆ ಕೊಟ್ಟಿದ್ದು. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರು ಅವರೂ ಮಹಾತ್ಮ ಗಾಂಧಿ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ. ಈ ಕೊಲೆಗೆ ಅವರೇ ಕಾರಣ ಅಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ.

ಬೆಳಗಾವಿಯಲ್ಲಿ ಬೃಹತ್ ಅಧಿವೇಶನ ನಡೆಯುವಾಗಲೇ ಈ ರೀತಿ ವಿವಾದಾತ್ಮಕ ಹೇಳಿಕೆ ಕೊಟ್ಟಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಹುಬ್ಬಳ್ಳಿಯಲ್ಲಿ ಸೋಮವಾರ ಮಾತನಾಡಿದ ಅವರು, ಮಹಾತ್ಮ ಗಾಂಧಿಜೀ ಅವರಿಗೆ ಗೋಡ್ಸೆ ಒಂದು ಗುಂಡು ಹಾರಿಸಿದ್ದ. ಆದರೆ ಇನ್ನುಳಿದ ಎರಡು ಗುಂಡುಗಳನ್ನು ಹಾರಿಸಿದ್ದು ಯಾರು ಅಂತ ಅವರು ಪ್ರಶ್ನೆ ಮಾಡಿದ್ದಾರೆ. ಮುಂದುವರಿದು ಜವಾಹರಲಾಲ್ ನೆಹರು ಅವರೇ ಮಹಾತ್ಮ ಗಾಂಧಿ ಅವರನ್ನ ಕೊಲೆ ಮಾಡಿಸಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ. ಚರ್ಚೆಗೆ ಗ್ರಾಸರಾಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಇನ್ನು ಇದೇ ಸಂದರ್ಭದಲ್ಲಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯ ಬಗ್ಗೆಯೂ ಮಾತನಾಡಿದ್ದಾರೆ. ರಾಜ್ಯದಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ ನಮ್ಮ ತಂಡದ ಸದಸ್ಯರು ಸಹ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳುವ ಮೂಲಕ ಸ್ಪರ್ಧೆಯ ಸುಳಿವು ಕೊಟ್ಟಿದ್ದಾರೆ. ಇನ್ನು ನಮ್ಮ ವಿರುದ್ಧ ಪಕ್ಷದ ವರಿಷ್ಠರಿಗೆ ಯಾರು ಏನು ಬೇಕಾದರೂ ದೂರುಗಳನ್ನು ಕೊಟ್ಟುಕೊಳ್ಳಲಿ. ನಾವೆಲ್ಲ ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಅಂತ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ರಾಜ್ಯದಲ್ಲಿ ಹಿಂದೂಗಳನ್ನು ರಕ್ಷಣೆ ಮಾಡದೆ ಇರುವುದಕ್ಕೇ ಬಿಜೆಪಿಯ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಬಿಜೆಪಿ ಅವರು ಹಿಂದೂ ಕಾರ್ಯಕರ್ತರ ರಕ್ಷಿಸಲಿಲ್ಲ. ಹೀಗಾಗಿ, ಹಿಂದೂಗಳು ವಿಧಾನಸಭಾ ಚುನಾವಣೆ ಸಮಯದಲ್ಲಿ ಸರಿಯಾದ ಕೆಲಸವನ್ನು ಮಾಡಲಿಲ್ಲ. ಒಂದೊಮ್ಮೆ ಹಿಂದೂಗಳ ರಕ್ಷಣೆ ಮಾಡಿ. ಕಾನೂನು ಸುವ್ಯವಸ್ಥೆ ಕಾಪಾಡಿದ್ದರೆ ಉತ್ತರ ಪ್ರದೇಶದಂತಹ ವಾತಾವರಣ ನಮ್ಮ ಕರ್ನಾಟಕದಲ್ಲೂ ಇರುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ನಾನೇ ನಂಬರ್ ಒನ್ ಲೀಡರ್. ಹಣ ತೆಗೆದುಕೊಂಡು ಮಾಡುವ ಸರ್ವೇಗಳನ್ನು ಬಿಡಬೇಕು. ಈಗ ಮಾಡುತ್ತಿರುವ ಬೋಗಸ್ ಸರ್ವೇ ಬಿಡಬೇಕು. ಸರಿಯಾದ ಸರ್ವೇ ನಡೆಯಲಿ. ಇನ್ನು ನಮ್ಮ ಸರ್ವೇಯ ಪ್ರಕಾರ ನಾನೇ ನಂಬರ್ ಒನ್ ಲೀಡರ್ ಅಂತ ಅವರು ಹೇಳಿದ್ದಾರೆ.












Click it and Unblock the Notifications