ನಮ್ಮ ಆಡಳಿತ ಎಷ್ಟು ಚೆನ್ನಾಗಿತ್ತು ಗೊತ್ತಾ ಅಂತ ಅಶ್ವಥ್ ನಾರಾಯಣ ಹೇಳಿದ್ಯಾಕೆ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ. ನಾವು ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಗಣೇಶ ಚತುರ್ಥಿ ಹಾಗೂ ಗಣೇಶ ಮೂರ್ತಿಗಳ ವಿಸರ್ಜನೆಯ ಸಂದರ್ಭದಲ್ಲಿ ಒಂದೇ ಒಂದು ಗಲಾಟೆಯೂ ಆಗಿರಲಿಲ್ಲ. ಈಗ ರಾಜ್ಯದಲ್ಲಿ ಪರಿಸ್ಥಿತಿ ಹೇಗಿದೆ ನೋಡಿ ಎಂದು ಬಿಜೆಪಿ ಶಾಸಕ ಅಶ್ವಥ್ ನಾರಾಯಣ ಪ್ರಶ್ನೆ ಮಾಡಿದ್ದಾರೆ. ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಮಾಯಕರ ಮೇಲೆ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ನಮ್ಮ ಅವಧಿಯಲ್ಲಿ ಯಾವುದೇ ಗಲಾಟೆಗಳು ನಡೆದಿದರಲಿಲ್ಲ. ಇದೀಗ ರಾಜ್ಯದ 8ರಿಂದ 10 ಕಡೆ ಗಲಭೆಗಳಾಗಿವೆ. ಗಲಾಟೆ, ಅಶಾಂತಿ, ವಿನಾ ಕಾರಣ ಪ್ರಚೋದನೆ ಮಾಡುವುದು ನಡೆಯುತ್ತಿದೆ. ಇದೆಲ್ಲವನ್ನು ನೋಡಿದರೆ ಸರ್ಕಾರದಲ್ಲಿ ಏನಾಗ್ತಿದೆ ಅಂತ ತಿಳಿಯುತ್ತಿಲ್ಲ. ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳು ಬಾಂಗ್ಲಾ ದೇಶದ ಪರಿಸ್ಥಿತಿ ನಿರ್ಮಾಣ ಮಾಡುತ್ತೇವೆ ಎಂದರೆ, ಇನ್ನೂ ಕೆಲವರು ಗವರ್ನರ್ ಕಚೇರಿಗೆ ನುಗ್ತೀವಿ, ಮೋದಿ ಅವರಿಗೆ ಶೇಖ್ ಹಸೀನಾ ತರಹ ಪರಿಸ್ಥಿತಿ ತರುತ್ತೇವೆ ಎಂದು ಬಹಿರಂಗವಾಗಿಯೇ ಬೆದರಿಕೆ ಹಾಕುತ್ತಿದ್ದಾರೆ. ಆದರೆ, ಈ ರೀತಿ ಬಹಿರಂಗ ಹೇಳಿಕೆ ಕೊಟ್ಟವರ ಮೇಲೆ ಇಲ್ಲಿಯವರೆಗೂ ಒಂದೇ ಒಂದು ಕೇಸು ದಾಖಲಾಗಿರುವುದು ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ದ್ವೇಷದ ರಾಜಕೀಯ
ಕರ್ನಾಟಕದಲ್ಲಿ ಈಗ ದ್ವೇಷದ ರಾಜಕೀಯ ನಡೆಯುತ್ತಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ದ್ವೇಷದ ರಾಜಕಾರಣ ಎನ್ನುವುದು ಮಿತಿ ಮೀರಿದೆ. ಗಲಾಟೆ ಮಾಡುವವರನ್ನು ಬಿಟ್ಟು ಏನು ಮಾಡದ ಮುಗ್ಧ ಜನರ ಮೇಲೆ ಕೇಸ್ ಹಾಕಲಾಗುತ್ತಿದೆ ಎಂದು ಅಶ್ವಥ್ ನಾರಾಯಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ಮುಂದೆಯೇ ಕಾನೂನು ಸುವವ್ಯಸ್ಥೆ ಹಾಳಾಗುತ್ತಿದೆ. 8 ಜನ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆದಿದೆ. ಕಾನೂನು ದುರ್ಬಳಕೆಯಾಗುತ್ತಿದ್ದರು ಕ್ರಮ ತೆಗೆದುಕೊಂಡಿಲ್ಲ. ಗಣೇಶ ಚತುರ್ಥಿ ಮಾಡಿದವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಕಾಂಗ್ರೆಸ್‌ನ ಬ್ಲಾಕ್ ಅಧ್ಯಕ್ಷ ಗಲಾಟೆಯಲ್ಲಿ ಭಾಗಿಯಾಗಿದ್ದ ಅವನ ಮೇಲೆ ಯಾವುದೇ ಕ್ರಮವಾಗಿಲ್ಲ. ಎಲ್ಲೂ ಎಂಎಲ್‌ಸಿ ಆಗಿಲ್ಲ. ಪೊಲೀಸರು ಸಂಪೂರ್ಣ ರಕ್ಷಣೆ ನೀಡಲು ಸಾಧ್ಯವಾಗಿಲ್ಲ. ಗಲಾಟೆಯಲ್ಲಿ ಪೊಲೀಸರಿಗೂ ಗಾಯವಾಗಿದೆ. ಆದರೆ, ಅದು ಎಲ್ಲೂ ದಾಖಲಾಗಿಲ್ಲ. ಇದೆಲ್ಲವನ್ನು ನೋಡಿದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಹೀಗಾಗಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಕಲ್ಲು ತೂರುವುದಕ್ಕೆ ರಾಕೆಟ್ ವೇಗ
ರಾಜ್ಯದಲ್ಲಿ ಕಲ್ಲು ತೂರಾಟಕ್ಕೆ ರಾಕೆಟ್ ವೇಗ ಬಂದಿದೆ ಎಂದು ಕರ್ನಾಟಕ ಬಿಜೆಪಿ ಆರೋಪಿಸಿದೆ. ಈ ಸಂಬಂಧ ಸಾಮಾಜಿಕ ಜಾಲತಾಣ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದೆ. ಕರ್ನಾಟಕದ ಶಾಂತಿಗೆ ಕಲ್ಲು ಹಾಕುವುದಕ್ಕೆ ಕಾಂಗ್ರೆಸ್ ಸರ್ಕಾರ ಸದಾ "ಸಿದ್ದ" ಎಂದಿದ್ದಾರೆ.
ಕರ್ನಾಟಕದ ಶಾಂತಿಗೆ ಕಲ್ಲು ಹಾಕುವುದಕ್ಕೆ @INCKarnataka ಸರ್ಕಾರ ಸದಾ “ಸಿದ್ದ”.
— BJP Karnataka (@BJP4Karnataka) September 20, 2024
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೊಲೀಸರ ಮೇಲೆ ಹಾಗೂ ಹಿಂದೂಗಳ ಮೇಲೆ ಕಲ್ಲು ತೂರುವವರ ಸಂಖ್ಯೆ ರಾಕೆಟ್ ವೇಗದಲ್ಲಿ ಜಾಸ್ತಿಯಾಗುತ್ತಿದೆ.
ಇದಕ್ಕೆಲ್ಲಾ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅತಿಯಾದ ಓಲೈಕೆ ರಾಜಕಾರಣವೇ ಕಾರಣ!!… pic.twitter.com/8RBSgDcOkA
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೊಲೀಸರ ಮೇಲೆ ಹಾಗೂ ಹಿಂದೂಗಳ ಮೇಲೆ ಕಲ್ಲು ತೂರುವವರ ಸಂಖ್ಯೆ ರಾಕೆಟ್ ವೇಗದಲ್ಲಿ ಜಾಸ್ತಿಯಾಗುತ್ತಿದೆ. ಇದಕ್ಕೆಲ್ಲಾ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅತಿಯಾದ ಓಲೈಕೆ ರಾಜಕಾರಣವೇ ಕಾರಣ ಎಂದು ಬಿಜೆಪಿ ಹೇಳಿದೆ.












Click it and Unblock the Notifications