ದಿನೇಶ್ ಗುಂಡೂರಾವ್ ಏಟು, ಟ್ವಿಟರ್‌ನಲ್ಲಿ ಸದಾನಂದಗೌಡ ಎದಿರೇಟು

ಬೆಂಗಳೂರು, ಮಾರ್ಚ್‌ 01: ನಿನ್ನೆ (ಫೆ.01) ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು 'ನಮೋ' ಎಂದರೆ ನರೇಂದ್ರ ಮೋದಿ ಅಲ್ಲ 'ನಮಗೆ ಮೋಸ' ಎಂದು ಪ್ರಧಾನಿ ಅವರನ್ನು ವ್ಯಂಗ್ಯ ಮಾಡಿದ್ದರು, ಅದು ಬಿಜೆಪಿಗರನ್ನು ಕೆರಳಿಸಿದೆ.

ಬಿಜೆಪಿಗರ 'ಬಾಸ್' ಅನ್ನು ಅಣಕಿಸಿದ ದಿನೇಶ್ ಗುಂಡೂರಾವ್ ಅವರಿಗೆ ಬುದ್ಧಿ ಕಲಿಸಲು ಕಾಂಗ್ರೆಸ್ 'ಬಾಸ್' ಅನ್ನು ಅಣಕಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ ಬಿಜೆಪಿ ಕೇಂದ್ರ ಮಂತ್ರಿ ಸದಾನಂದಗೌಡ.

ಚುನಾವಣೆ ಹತ್ತಿರವಾದಂತೆಲ್ಲಾ ಟ್ವಿಟರ್‌ನಲ್ಲಿ ಹೆಚ್ಚು ಹೆಚ್ಚು ಸಕ್ರಿಯರಾಗುತ್ತಿರುವ ಸದಾನಂದಗೌಡ ಅವರು, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಅವರುಗಳು ಹೆಸರನ್ನು ಅಪ್ರಭ್ರಂಷ ಮಾಡಿ ಟೀಕಿಸಿ ಕಾಲೆಳೆದಿರುವದಲ್ಲದೆ ಜವಾಬ್ದಾರಿಯುತ ವರ್ತಿಸಿ ಎಂದು ಬುದ್ಧಿವಾದ ಕೂಡಾ ಹೇಳಿದ್ದಾರೆ.

BJP minister Sadananda Gowda lambasted on KPCC Dinesh GunduRao

ಟ್ವಿಟ್ಟರ್‌ನಲ್ಲಿ ದಿನೇಶ್ ಅವರ ಮೊದಲ ಅಕ್ಷರದ ಜತೆ ಶಾಬ್ದಿಕ ಚೆಲ್ಲಾಟ ಆಡಿರುವ ಸದಾನಂದ ಗೌಡ ಅವರು 'ದಿ' ಅಕ್ಷರದಿಂದ ದಿಕೆಟ್ಟ, ದಿಗಿಲಾದ ಎಂಬ ಅರ್ಥ ಬರುವಂತೆ ಬರೆದು ರಾಹುಲ್ ಗಾಂಧಿ ಅವರ ಮುದ್ದು ನಾಮ ರಾಗಾ ವನ್ನು 'ರಾಜ್ಯಕ್ಕೆ, ರಾಷ್ಟ್ರಕ್ಕೆ ಗಂಡಾಂತರ' ಎಂದು ನವೀನ ಅರ್ಥ ಪ್ರಧಾನ ಮಾಡಿದ್ದಾರೆ! ಇಷ್ಟಕ್ಕೆ ಸುಮ್ಮನಾಗದೆ ಜವಾಬ್ದಾರಿಯುತವಾಗಿ ರಾಜಕಾರಣ ಮಾಡಿರಿ ಎಂದು ಬುದ್ಧಿವಾದ ಹೇಳಿದ್ದಾರೆ.

ಸದಾನಂದಗೌಡ ಅವರು ಟ್ವಿಟರ್‌ನಲ್ಲಿ ಬರೆದಿರುವ ಯತಾವತ್ ಹೀಗಿದೆ. 'ಮೋದಿಯವರ ಹವಾಕ್ಕೆ ದಿ(ಕೆಟ್ಟ) , ದಿ(ಗಿಲಾದ) ಗುಂಡು ರಾಯರೇ ಪ್ರತಿಯೊಂದು ಪದಕ್ಕೆ ಅರ್ಥ ಕಟ್ಟುವುದು ನಮಗೂ ಚೆನ್ನಾಗಿ ಗೊತ್ತು ನೀವು ಕಾಂಗ್ರೆಸ್ ಸಂಸ್ಕೃತಿ ಸ್ವಲ್ಪ ಬಿಟ್ಟು ಗಂಭೀರ ರಾಜಕೀಯ ಮಾಡಿರಿ ನಾವೂನೂ ರಾಗಾ ಎಂದರೆ ರಾಜ್ಯಕ್ಕೆ , ರಾಷ್ಟ್ರಕ್ಕೆ ಗಂಡಾಂತರ ಎನ್ನೋಣವೇ?'.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+