ಮುಂದಿನ ಚುನಾವಣೆ ಗೆಲ್ಲಲು ಕಾಂಗ್ರೆಸ್ ಮಾಡಬೇಕಾಗಿರುವುದು ವೆರಿ ಸಿಂಪಲ್!

Posted By:
Subscribe to Oneindia Kannada
   ಮುಂದಿನ ಚುನಾವಣೆ ಗೆಲ್ಲಲು ಕಾಂಗ್ರೆಸ್ ಮಾಡಬೇಕಾಗಿರುವುದು ವೆರಿ ಸಿಂಪಲ್ | Oneindia Kannada

   ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಷಣ ಮಾಡಿದಲೆಲ್ಲಾ ಬಿಜೆಪಿಗೆ ಅನುಕೂಲವಾಗುತ್ತೆ ಎನ್ನುವ ಮಾತಿತ್ತು, ಆದರೆ, ಅದನ್ನೆಲ್ಲಾ ಮೀರಿ ಇತ್ತೀಚಿನ ದಿನಗಳಲ್ಲಿ ರಾಹುಲ್ ಅವರಲ್ಲಿ ರಾಜಕೀಯ ವೃತ್ತಿಪರತೆಯನ್ನು ಕಾಣಬಹುದಾಗಿದೆ.

   ಅದೇ ರೀತಿ ಕರ್ನಾಟಕದಲ್ಲಿನ ಕೆಲವು ಬಿಜೆಪಿ ಮುಖಂಡರೂ ಹಾಗೇ, ಈ ನಾಯಕರುಗಳು ತಾವೇನು ಮಾತನಾಡುತ್ತಿದ್ದೇವೆ, ಅದರಿಂದ ಪಕ್ಷಕ್ಕಾಗುವ ನಷ್ಟವೇನು, ಸಮಾಜಕ್ಕೆ ಯಾವ ಸಂದೇಶ ಬೀರುತ್ತೆ ಅನ್ನೋದನ್ನು ಅರಿಯದೇ, ಮನಬಂದಂತೇ ಹೇಳಿಕೆ ನೀಡುತ್ತಿದ್ದಾರೆ.

   ಗುಜರಾತ್, ಗೆಲುವು ಯಾರಿಗೆ? ಬಿಜೆಪಿ Vs ಕಾಂಗ್ರೆಸ್: ಒಂದು ಅವಲೋಕನ

   ಇಂತಹ ನಾಯಕರ ಬಾಯಿಗೆ ಬಿಜೆಪಿ ವರಿಷ್ಠರು ತುರ್ತಾಗಿ ಬೀಗ ಹಾಕದೇ ಇದ್ದಲ್ಲಿ, ಕರ್ನಾಟಕದಲ್ಲಿ ಈಗಲೇ ಗೆಲುವಿನ ವಿಶ್ವಾಸದಲ್ಲಿರುವ ಕಾಂಗ್ರೆಸ್ಸಿಗೆ, ಗೆಲುವು ಇನ್ನಷ್ಟು ಹತ್ತಿರವಾಗಲಿದೆ ಎನ್ನುವುದನ್ನು ಬಿಜೆಪಿ ರಾಷ್ಟ್ರಾಧ್ಯಕ್ಷರು ಬರೆದಿಟ್ಟುಕೊಳ್ಳುವುದು ಒಳ್ಳೆಯದು.

   ಪರಿಸ್ಥಿತಿ ಹೀಗಿರುವಾಗ, ಕಾಂಗ್ರೆಸ್ಸಿಗರು ಮತದಾರರನ್ನು ಓಲೈಸಲು ತಮ್ಮ ಸರಕಾರದ ಇದುವರೆಗಿನ ಸಾಧನೆಯನ್ನು ವಿವರಿಸಬೇಕಾಗಿಲ್ಲ. ಕೆಲವು ಬಿಜೆಪಿ ಮುಖಂಡರು ನೀಡುವ ಬೇಕಾಬಿಟ್ಟಿ, ಅಸಂಬದ್ದ ಹೇಳಿಕೆಗಳಿಂದ ವೋಟು ತನ್ ತಾನಾಗಿಯೇ ಕಾಂಗ್ರೆಸ್ಸಿಗೆ ಬರದೇ ಇರುತ್ತಾ? ಬಿಜೆಪಿ ನಾಯಕರ ಹೇಳಿಕೆಗೆ ಕೌಂಟರ್ ಅಟ್ಯಾಕ್ ಮಾಡಲು ಕಾಂಗ್ರೆಸ್ಸಿಗರು ಹುಷಾರಿನಿಂದ ಪ್ರತಿಕ್ರಿಯಿಸಬೇಕು.. ಅಷ್ಟೇ..

   ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾಕ್ ಸ್ವಾತಂತ್ರ್ಯ ಇದೆ ಎಂದು ಮನಬಂದತೇ ಹೇಳಿಕೆ ನೀಡಿದರೆ ಅದು ಕೊನೆಗೆ ಬಂದು ಬೀಳುವುದು ತಮ್ಮ ಪಕ್ಷದ ಬುಡಕ್ಕೇ ಎನ್ನುವುದನ್ನು ಅಮಿತ್ ಶಾ ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ, ಪ್ರಮುಖವಾಗಿ ಇಬ್ಬರು ಬಿಜೆಪಿ ಮುಖಂಡರಿಗೆ ವರಿಷ್ಠರು ತುರ್ತಾಗಿ ಕರೆದು ಎಚ್ಚರಿಕೆ ನೀಡಿದರೆ ಸೂಕ್ತ..

   ಕಾಂಗ್ರೆಸ್ಸಿಗರಿಂದ ಎಲುಬಿಲ್ಲದ ನಾಲಿಗೆ ಬಿರುದು

   ಕಾಂಗ್ರೆಸ್ಸಿಗರಿಂದ ಎಲುಬಿಲ್ಲದ ನಾಲಿಗೆ ಬಿರುದು

   ಕಾಂಗ್ರೆಸ್ಸಿಗರಿಂದ ಎಲುಬಿಲ್ಲದ ನಾಲಿಗೆ ಎಂದೇ ಹೆಸರು ಪಡೆದಿರುವ ಹಿರಿಯ ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ಅದೆಷ್ಟೋ ಬಾರಿ ಅಸಂಬದ್ದ ಹೇಳಿಕೆಯನ್ನು ನೀಡಿದ್ದರು. ಬಿಜೆಪಿ, ಸಂಘ ಪರಿವಾರದ ಹಿರಿಯರು ಬುದ್ದಿಮಾತನ್ನೂ ಹೇಳಿದ್ದರು. ಊಹೂಂ.. ಆವಯ್ಯಾ ಸುಧಾರಿಸಿಕೊಂಡ ಹಾಗೇ ಕಾಣಿಸುವುದಿಲ್ಲ... ಮುಂದುವರಿಯುತ್ತಲೇ ಇದೆ ಇವರ ಮಾತಿನ ಝರಿ.... ಇವರ ಕೆಲವೊಂದು ಡಿಸೈನ್ ಡಿಸೈನ್ ನುಡಿಮುತ್ತುಗಳ ಸ್ಯಾಂಪಲ್ ಕೆಳಗಿನ ಸ್ಲೈಡಿನಲ್ಲಿದೆ..

   ಸಂಸ್ಕಾರ ಇಲ್ಲದವನು ಎಂದು ಬೈಸಿಕೊಂಡಿದ್ದ ಪ್ರತಾಪ್

   ಸಂಸ್ಕಾರ ಇಲ್ಲದವನು ಎಂದು ಬೈಸಿಕೊಂಡಿದ್ದ ಪ್ರತಾಪ್

   ಇನ್ನೊಬ್ರು, ಪತ್ರಕರ್ತರೂ ಆಗಿರುವ, ಮೈಸೂರಿನ ಸಂಸದ ಪ್ರತಾಪ್ ಸಿಂಹ. ಇತ್ತೀಚಿನ ದಿನಗಳಲ್ಲಿ ತಮ್ಮ ತೀಕ್ಶ್ಣವಾದ ಮಾತಿನಿಂದ ಸದಾ ವಿವಾದವನ್ನೇ ತನ್ನತ್ತ ಸುತ್ತಿಕೊಂಡಿರುವ ಪ್ರತಾಪ್ ಸಿಂಹ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಸಂಸ್ಕಾರ ಇಲ್ಲದವನು ಎಂದು ಬೈಸಿಕೊಂಡಿದ್ದೂ ಆಗಿದೆ.. ಆದರೆ ಇದ್ಯಾವುದಕ್ಕೂ ಪ್ರತಾಪ್ ತಲೆಕೆಡಿಸಿಕೊಳ್ಳುತ್ತಲೇ ಇಲ್ಲ..

   ಉತ್ತರ ಪ್ರದೇಶದವರೆಗೂ ಹೋಗುವ ಅವಶ್ಯಕತೆಯಿರಲಿಲ್ಲ

   ಉತ್ತರ ಪ್ರದೇಶದವರೆಗೂ ಹೋಗುವ ಅವಶ್ಯಕತೆಯಿರಲಿಲ್ಲ

   ಸಿದ್ದರಾಮಯ್ಯ ಗಂಡೋ, ಹೆಣ್ಣೋ ಎಂಬ ಸಂಶಯ ಇದೆ, ಸಮಾಜ ಕಲ್ಯಾಣ ಇಲಾಖೆಯ ಆಂಜನೇಯನನ್ನು ಗಂಡು ಅಂತಾ ಕರೀಬೇಕೋ ಹೆಣ್ಣು ಅಂತಾ ಕರೀಬೇಕೋ ಅಂತಾ ಗೊತ್ತಿಲ್ಲ - ಈಶ್ವರಪ್ಪ.

   ಚಿಂತಕಿ ಪ್ರಭಾ ಬೆಳವಂಗಲ ಅವರಿಗೆ ಕೆಟ್ಟ ವಿಡಿಯೋ ನೋಡಬೇಕೆನ್ನುವ ಬಯಕೆಯಿದ್ದರೆ, ಉತ್ತರ ಪ್ರದೇಶದವರೆಗೂ ಹೋಗುವ ಅವಶ್ಯಕತೆಯಿರಲಿಲ್ಲ. ಮೇಟಿ ಅವರ ಚೇಂಬರ್ ಗೆ ಹೋಗಿದ್ದರೆ ಲೈವ್ ವಿಡಿಯೋ ನೋಡಿ ಅನುಭವ ಪಡೆಯಬಹುದಿತ್ತು - ಪ್ರತಾಪ್ ಸಿಂಹ.

    ಯುವಜನತೆ ಬೆಂಬಲ ಯಾರಿಗಿದೆ ಎಂಬುದನ್ನು ಸಾಬೀತು ಪಡಿಸೋಣ

   ಯುವಜನತೆ ಬೆಂಬಲ ಯಾರಿಗಿದೆ ಎಂಬುದನ್ನು ಸಾಬೀತು ಪಡಿಸೋಣ

   ರಮೇಶ್ ಕುಮಾರ್ ಒಬ್ಬ ರಾಕ್ಷಸ, ಇವನಿಗೆ ಕಾಯ್ದೆಯ ಬಗ್ಗೆ ಅರಿವಿಲ್ಲ. ಕಾಂಗ್ರೆಸ್ ನಾಯಕರುಗಳಿಗೆ ನಿಮ್ಮ ಮಗಳನ್ನ ಒಬ್ಬ ಡಾಕ್ಟರಿಗೆ ಕೊಡ್ತೀರಾ ಅಂತ ಕೇಳಿದರೆ ಅವರು ಜೈಲಿಗೆ ಹೋಗುತ್ತಾರೆ ನಾನು ಕೊಡೋಲ್ಲಾ ಅಂತಾರೆ. ನಮ್ಮ ಮುಖ್ಯಮಂತ್ರಿಗಳಿಗೆ ಹೆಣ್ಣುಮಕ್ಕಳು ಇಲ್ಲಾ ನೋಡಿ, ಅದಕ್ಕೆ ಈ ಕಾಯ್ದೆಯನ್ನು ತರಲು ಹೊರಟಿದ್ದಾರೆ -ಈಶ್ವರಪ್ಪ.

   ನಿಮಗೆ ಜನರನ್ನು ಎದುರಿಸುವ ಶಕ್ತಿ ಇದ್ದರೆ ರಾಜಕೀಯಕ್ಕೆ ಬನ್ನಿ, ಯುವಜನತೆ ಬೆಂಬಲ ಯಾರಿಗಿದೆ ಎಂಬುದನ್ನು ಸಾಬೀತು ಪಡಿಸೋಣ. ನಿಮ್ಮ ಎಷ್ಟನೇ ಹೆಂಡತಿಯ ಮಕ್ಕಳಿಗೆ ತಾಜ್ ಮಹಲ್ ತೋರಿಸಬೇಕೆಂದು ಇದ್ದೀರಾ - ಪ್ರತಾಪ್ ಸಿಂಹ, ನಟ ಪ್ರಕಾಶ್ ರೈ ಅವರನ್ನು ಉಲ್ಲೇಖಿಸಿ ಹೇಳಿದ್ದು.

   ಬಾಯಿ ತೆಗೆದರೆ ಚಂಪಾ ಅವರ ಬಾಯಿಯಿಂದ ಮೂತ್ರದ ವಾಸನೆ

   ಬಾಯಿ ತೆಗೆದರೆ ಚಂಪಾ ಅವರ ಬಾಯಿಯಿಂದ ಮೂತ್ರದ ವಾಸನೆ

   ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಟಿಪ್ಪು ರಕ್ತ, ನನ್ನ ಮೈಯಲ್ಲಿ ಕನಕದಾಸರ ರಕ್ತ ಹರಿಯುತ್ತಿದೆ, ಪಿಶಾಚಿ ರಕ್ತವಲ್ಲ. ಸಿದ್ದರಾಮಯ್ಯ ಮುಂದಿನ ಐದು ವರ್ಷಕ್ಕಲ್ಲ, ಐನೂರು ವರ್ಷಕ್ಕೂ ಅವರೇ ಸಿಎಂ- ಈಶ್ವರಪ್ಪ.

   ಯದುವಂಶದವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ, ಭುವನೇಶ್ವರಿ ತಾಯಿಗೆ ಪೂಜೆ ಸಲ್ಲಿಸಿಲ್ಲ, ಮೈಸೂರು ಪೇಟ ತೊಡಲಿಲ್ಲ. ಬಾಯಿ ತೆಗೆದರೆ ಚಂಪಾ ಅವರ ಬಾಯಿಯಿಂದ ಮೂತ್ರದ ವಾಸನೆ ಬರುತ್ತದೆ - ಪ್ರತಾಪ್ ಸಿಂಹ.

   ಪರಮ ಭ್ರಷ್ಟ ಡಿಕೆಶಿಯನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ

   ಪರಮ ಭ್ರಷ್ಟ ಡಿಕೆಶಿಯನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ

   ಚಂಪಾ ಅವರು ಸಿದ್ದರಾಮಯ್ಯನವರ ಬಹುದೊಡ್ಡ ಚಮಚಾ.. ಉಡುಪಿ ಶ್ರೀಕೃಷ್ಣನ ಮೇಲಾಣೆ.. ಪರಮ ಭ್ರಷ್ಟ ಡಿಕೆಶಿಯನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ. ಕೃಷ್ಣಮಠಕ್ಕೆ ಸಿಎಂ ಭೇಟಿ ನೀಡಿದರೆ ಮಠವೇ ಅಪವಿತ್ರವಾಗುತ್ತದೆ. ಮೌಢ್ಯ ನಿಷೇಧ ಮಾಡಿರುವ ಸಿಎಂ ಸುನ್ನತ್ ಅನ್ನೂ ನಿಷೇಧಿಸಲಿ - ಈಶ್ವರಪ್ಪ.

   ಸಿನಿಮಾಗಳಲ್ಲಿ ನೀವು ಖಳನಟ, ನಿಜ ಜೀವನದಲ್ಲು ಅದೇ ರೀತಿ ಆಗ್ಬೇಡಿ. ಇನ್ಮುಂದೆ ಪ್ರಧಾನಿ ಬಗ್ಗೆ ಬೀದಿಯಲ್ಲಿ ಹೇಳಿಕೆ ಕೊಟ್ಟರೆ ಅಂತಹ ಜಾಗದಲ್ಲೇ ಬಂದು ಅದೇ ರೀತಿಯ ಉತ್ತರ ಕೊಡಬೇಕಾಗುತ್ತದೆ ಮಗನ ಸಾವಿನ ದುಃಖದಲ್ಲಿದ್ದರೂ ಹೆಂಡತಿಯನ್ನು ಬಿಟ್ಟು ಬಾರ್ ಡಾನ್ಸರ್ ಹಿಂದೆ ಓಡಿದ ನಿಮಗೆ ಮೋದಿ - ಯೋಗಿಗೆ ಹೇಳುವಷ್ಟು ಯೋಗ್ಯತೆಯಿದೆಯಾ - ಪ್ರತಾಪ್ ಸಿಂಹ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   BJP High Command should warn two of their leaders in Karnataka ( K S Eshwarappa and Mysuru MP Pratap Simha) not to use unparliamentary words.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ