ರಾಜ್ಯಸಭೆಗೆ ಕರ್ನಾಟಕದಿಂದ ವೆಂಕಯ್ಯ ಬದಲಿಗೆ ನಿರ್ಮಲಾ

Posted By:
Subscribe to Oneindia Kannada

ಬೆಂಗಳೂರು, ಮೇ 29: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಸ್ಪರ್ಧಿಗಳ ನಾಮಾಂಕಿತರ ಪಟ್ಟಿಯಲ್ಲಿ ಭಾರಿ ಬದಲಾವಣೆಯಾಗಿದೆ. ಕರ್ನಾಟಕದಿಂದ ಈ ಬಾರಿ ಎಂ ವೆಂಕಯ್ಯ ನಾಯ್ಡು ಸ್ಪರ್ಧಿಸುತ್ತಿಲ್ಲ. ಅವರ ಬದಲಿಗೆ ನಿರ್ಮಲಾ ಸೀತಾರಾಮನ್ ಅವರಿಗೆ ಅವಕಾಶ ನೀಡಲಾಗಿದೆ. ವೆಂಕಯ್ಯ ಅವರ ವಿರುದ್ಧ ಐಟಿ ಕನ್ನಡಿಗರು ಸಂಘಟನೆಗಳು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವೆಂಕಯ್ಯ ನಾಯ್ಡು ಅವರು ಕರ್ನಾಟಕದ ಬದಲಿಗೆ ರಾಜಸ್ಥಾನದಿಂದ ಸ್ಪರ್ಧಿಸಲಿದ್ದಾರೆ. ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರನ್ನು ಜಾರ್ಖಂಡ್ ನಿಂದ ಸ್ಪರ್ಧಿಸಲು ಸೂಚಿಸಲಾಗಿದೆ. ಮಿಕ್ಕಂತೆ ಕಳೆದ ವಾರ ಬಿಡುಗಡೆಯಾದ ಪಟ್ಟಿಯಂತೆಯೇ ಹೊಸ ಪಟ್ಟಿ ಇದೆ.[ಕಾಂಗ್ರೆಸ್ ಪಟ್ಟಿಯಲ್ಲಿ ಬದಲಾವಣೆ, ರಾಮಮೂರ್ತಿಗಿಲ್ಲ ಟಿಕೆಟ್]

BJP announces RS nominations Nirmala Sitharaman From Karnataka

ಈ ನಡುವೆ ಎಂಎಲ್ಸಿ ಸ್ಥಾನಕ್ಕಾಗಿ ಮಾಜಿ ಸಚಿವ ವಿ. ಸೋಮಣ್ಣ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಅಂತಿಮಗೊಳಿಸಿದೆ.

ಎಂಎಲ್ಸಿ ಸ್ಥಾನಕ್ಕಾಗಿ ಕಟ್ಟಾ ಸುಬಮಣ್ಯ ನಾಯ್ಡು, ನಗರ ಬಿಜೆಪಿ ಅಧ್ಯಕ್ಷ ಸುಬ್ಬುನರಸಿಂಹ, ಮಾಜಿ ಸಚಿವ ವಿ ಸೋಮಣ್ಣ ಹೆಸರು ಚಾಲ್ತಿಯಲ್ಲಿದೆ. ಈ ಪೈಕಿ ವಿ ಸೋಮಣ್ಣ ಆಯ್ಕೆಗೆ ಯಡಿಯೂರಪ್ಪ ಅವರು ವಿರೋಧ ವ್ಯಕ್ತಪಡಿಸಿದ್ದು, ಜಗದೀಶ್ ಶೆಟ್ಟರ್ ಅವರು ಸೋಮಣ್ಣ ಪರ ನಿಂತಿದ್ದರು.[ರಾಜ್ಯಸಭೆ ಚುನಾವಣಾ ವೇಳಾಪಟ್ಟಿ 2016]

BJP announces RS nominations Nirmala Sitharaman From Karnataka

ಕೇಂದ್ರ ನಗರಾಭಿವೃದ್ಧಿ ಸಚಿವ ಬಿಜೆಪಿಯ ಎಂ.ವೆಂಕಯ್ಯನಾಯ್ಡು, ಆಯನೂರು ಮಂಜುನಾಥ್, ಕಾಂಗ್ರೆಸ್‌ನ ಆಸ್ಕರ್ ಫರ್ನಾಂಡೀಸ್ ಹಾಗೂ ಉದ್ಯಮಿ ವಿಜಯಮಲ್ಯ ಅವರ ಅವಧಿ ಜೂನ್ 30ಕ್ಕೆ ಮುಗಿಯಲಿದೆ.

ವೆಂಕಯ್ಯ ಸಾಕಯ್ಯ ಎಂಬ ಟ್ಯಾಗ್ ನೊಂದಿಗೆ ಇತ್ತೀಚೆಗೆ ಐಟಿ ಬಿಟಿ ಕನ್ನಡಿಗರು ಅಭಿಯಾನ ನಡೆಸಿ, ಕರ್ನಾಟಕದ ಮೂಲದವರನ್ನೇ ಶಿಫಾರಸು ಮಾಡುವಂತೆ ಆಗ್ರಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bharatiya Janata Party on Sunday announced its list of nominees for the Rajya Sabha. Union Ministers Venkaiah Naidu and Nirmala Sitharaman have been nominated from Rajasthan and Karnataka, respectively
Please Wait while comments are loading...