Breaking; ಹಾನಗಲ್, ಸಿಂಧಗಿ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೊಷಣೆ

ಬೆಂಗಳೂರು, ಅಕ್ಟೋಬರ್ 07; ಬಿಜೆಪಿ ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 2ರಂದು ಫಲಿತಾಂಶ ಪ್ರಕಟವಾಗಲಿದೆ.

ಗುರುವಾರ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಸಿಂಧಗಿ ಕ್ಷೇತ್ರಕ್ಕೆ ರಮೇಶ್ ಬೂಸನೂರು ಅಭ್ಯರ್ಥಿ. ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಉಪ ಚುನಾವಣೆಗೆ ಶಿವರಾಜ್ ಸಜ್ಜನರ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

BJP Announces Candidates For Hanagal And Sindagi By Elections

ಉಪ ಚುನಾವಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ಅಭ್ಯರ್ಥಿ ಘೋಷಣೆ ಮಾಡಿವೆ. ಅಕ್ಟೋಬರ್ 8ರ ಶುಕ್ರವಾರ ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನವಾಗಿದೆ. ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದೆ.

ಸಿಂಧಗಿ; ವಿಜಯಪುರ ಜಿಲ್ಲೆಯ ಸಿಂಧಗಿ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಎಂ. ಸಿ. ಮನಗೂಳಿ ನಿಧನದಿಂದಾಗಿ ಉಪ ಚುನಾವಣೆ ಎದುರಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ 61,560 ಮತಗಳನ್ನು ಪಡೆದು ಸೋಲು ಕಂಡಿದ್ದ ರಮೇಶ್ ಬೂಸನೂರುಗೆ ಈ ಬಾರಿಯೂ ಟಿಕೆಟ್ ನೀಡಲಾಗಿದೆ.

ಹಾನಗಲ್; ಬಿಜೆಪಿ ಶಾಸಕರಾಗಿದ್ದ ಸಿ. ಎಂ. ಉದಾಸಿ ನಿಧನದಿಂದಾಗಿ ಹಾನಗಲ್ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಸಿ. ಎಂ. ಉದಾಸಿ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಶಿವರಾಜ್ ಸಜ್ಜನರ್ ಟಿಕೆಟ್ ನೀಡಲಾಗಿದೆ.

ಉಪ ಚುನಾವಣೆ ಅಭ್ಯರ್ಥಿಗಳು

ಸಿಂಧಗಿ ಕ್ಷೇತ್ರ

* ಕಾಂಗ್ರೆಸ್ - ಅಶೋಕ್ ಮನಗೂಳಿ

* ಬಿಜೆಪಿ - ರಮೇಶ್ ಬೂಸನೂರು

* ಜೆಡಿಎಸ್- ನಾಜಿಯಾ ಶಕೀಲಾ ಅಂಗಡಿ

ಹಾನಗಲ್ ಕ್ಷೇತ್ರ

* ಕಾಂಗ್ರೆಸ್ - ಶ್ರೀನಿವಾಸ ಮಾನೆ

* ಬಿಜೆಪಿ - ಶಿವರಾಜ್ ಸಜ್ಜನರ್

* ಜೆಡಿಎಸ್ - ನಿಯಾಜ್ ಶೇಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+