ಬೆಂಗಳೂರು ವಿವಿ ಪ್ರವೇಶ ಪ್ರಕ್ರಿಯೆ ವೇಳಾಪಟ್ಟಿ ಪ್ರಕಟ
ಬೆಂಗಳೂರು,ಆ.03: ಬೆಂಗಳೂರು ವಿಶ್ವವಿದ್ಯಾಲಯ 2015-16 ನೇ ಸಾಲಿನ ಸ್ನಾತಕೋತ್ತರ ಪದವಿ, ಡಿಪ್ಲೋಮಾ ಕೋರ್ಸ್ ಗಳ ಪ್ರವೇಶ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಕನ್ನಡ ನಿಕಾಯ ಕೋರ್ಸ್ ಗಳ ಕೌನ್ಸೆಲಿಂಗ್ ಆಗಸ್ಟ್ 4 ರಂದು ಕನ್ನಡ ಅಧ್ಯಯನ ಕೇಂದ್ರ ಜ್ಞಾನಭಾರತಿಯಲ್ಲಿ ನಡೆಯಲಿದೆ.
ಆಗಸ್ಟ್ 4 ರಂದು ಎಲೆಕ್ಟ್ರಾನಿಕ್ ಮೀಡಿಯಾ, 5 ರಂದು ಕಲಾ ನಿಕಾಯ ಕೋರ್ಸ್ ಗಳು 5 ಮತ್ತು 6 ರಂದು ವಿಜ್ಞಾನ ವಿಭಾಗದ ಎಲ್ಲ ಕೋರ್ಸ್ ಗಳ ಕೌನ್ಸೆಲಿಂಗ್ ನಡೆಯಲಿದೆ.[ಬೆಂಗಳೂರು ವಿ.ವಿ. ತ್ರಿವಿಭಜನೆಗೆ ವಿಧಾನಸಭೆ ಅಸ್ತು]

ಆಗಸ್ಟ್ 4 ರಂದೇ ಎಂಕಾಂ, ಎಂಎ ಮತ್ತು 5 ರಂದು ವಿದೇಶಿ ಭಾಷೆಗಳ ಪ್ರವೇಶ ಪ್ರಕ್ರಿಯೆ ಸೆಂಟ್ರಲ್ ಕಾಲೇಜು ಆವರಣದ ವಾಣಿಜ್ಯ ವಿಭಾಗ ಮತ್ತು ವಿದೇಶಿ ಭಾಷಾ ಅಧ್ಯಯನ ಕೇಂದ್ರದಲ್ಲಿ ಬೆಳಗ್ಗೆ ನಡೆಯಲಿದೆ.
ಕೌನ್ಸೆಲಿಂಗ್ ಎಲ್ಲಿ?
* ಜ್ಞಾನಭಾರತಿ ಆವರಣದ ಪ್ರೋ. ಕೆ.ವೆಂಕಟಗಿರಿಗೌಡ ಮತ್ತು ಡಾ.ಎಚ್. ಎನ್ ಸಭಾಂಗಣ ಮತ್ತು ಮಾನಸ ಭವನ(ಆಗಸ್ಟ್ 4 ಮತ್ತು 5)
* ಸೆಂಟ್ರಲ್ ಕಾಲೇಜು ಆವರಣದ ವಾಣಿಜ್ಯ ವಿಭಾಗ ಮತ್ತು ವಿದೇಶಿ ಭಾಷಾ ಅಧ್ಯಯನ ಕೇಂದ್ರ(ಆಗಸ್ಟ್ 4 ಮತ್ತು 5) [ಎಂಎ, ಎಂಕಾಂ, ವಿದೇಶಿ ಭಾಷಾ ಕೋರ್ಸ್]












Click it and Unblock the Notifications