ಬೆಂಗಳೂರಲ್ಲಿ ದಿಢೀರ್ ಏರುಗತಿಗೆ ಬಂದಿದೆ ಕೋವಿಡ್
ಬೆಂಗಳೂರು, ಏ. 23: ಓಮೈಕ್ರಾನ್‌ನಿಂದ ಸೃಷ್ಟಿಯಾಗಿದ್ದ ಮೂರನೇ ಕೋವಿಡ್ ಅಲೆ ಬಹುತೇಕ ನಿಂತುಹೋಯಿತು ಎಂದು ನಿಟ್ಟುಸಿರುವ ಬಿಡುವ ಹೊತ್ತಲ್ಲೇ ದೇಶದೆಲ್ಲೆಡೆ ಕೊರೋನಾ ವೈರಸ್ ಸೋಂಕು ಹೆಚ್ಚಾಗತೊಡಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ದಿಢೀರ್ ಸೋಂಕು ಏರುಗತಿಗೆ ಬಂದಿರುವುದು ಅಂಕಿಅಂಶಗಳಿಂದ ಗೊತ್ತಾಗುತ್ತದೆ. ಗುರುವಾರ ಒಂದೇ ದಿನ ರಾಜ್ಯಾದ್ಯಂತ 100 ಪ್ರಕರಣಗಳು ದಾಖಲಾಗಿವೆ. ಅವುಗಳ ಪೈಕಿ ಬೆಂಗಳೂರು ಒಂದೇ ನಗರದಲ್ಲಿ 91 ಹೊಸ ಕೋವಿಡ್ ಪ್ರಕರಣಗಳಿವೆ.

ಮಾಮೂಲಿಗಿಂತ ಪ್ರಕರಣ ಏರಿಕೆ
ಇದಕ್ಕೂ ಹಿಂದಿನ ವಾರದಲ್ಲಿ, ಅಂದರೆ ಏಪ್ರಿಲ್ 12ರಿಂದ 19ನೇ ತಾರೀಖಿನ ಅವಧಿಯಲ್ಲಿ ನಿತ್ಯ 41-55 ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಇದೇ ರೇಖೆ ಮುಂದುವರಿಯಬಹುದು.
ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮೊನ್ನೆ ಮಾಮೂಲಿಗಿಂತ 35 ಹೆಚ್ಚು ಪ್ರಕರಣಗಳು ಕಂಡುಬಂದಿರುವುದು ಜನಸಾಮಾನ್ಯರಿಗೆ ತುಸು ಆತಂಕ ಮೂಡಿಸಿದೆ.
ಬೆಂಗಳೂರಿನಲ್ಲಿ ಸೋಂಕಿನ ಉತ್ಪತ್ತಿ ದರ (R0- Reproduction Number) ಶೇ. 1.04 ಇದೆ. ಅದರಲ್ಲಿ ಯಾವುದೇ ಏರಿಕೆ ಆಗಿಲ್ಲ. ಆದರೂ ಸೋಂಕಿನ ಸಂಖ್ಯೆ ದಿಢೀರ್ ಹೆಚ್ಚಿದೆ.

ಏನಿದು ರೀಪ್ರೊಡಕ್ಷನ್ ನಂಬರ್?
ಆರ್0 ಎಂದರೆ ಒಬ್ಬ ವ್ಯಕ್ತಿ ಎಷ್ಟು ಮಂದಿಗೆ ಸೋಂಕು ಹರಡುತ್ತಾನೆ ಎಂದು ಲೆಕ್ಕ. R0 ದರ 1 ಇದ್ದರೆ ಒಬ್ಬ ಸೋಂಕಿತ ವ್ಯಕ್ತಿ ಸರಾಸರಿಯಾಗಿ ಒಬ್ಬ ವ್ಯಕ್ತಿಗೆ ಸೋಂಕು ಹರಡುತ್ತಾನೆ ಎಂದಾಗುತ್ತದೆ.
ಡೆಲ್ಟಾ ರೂಪಾಂತರಿ ವೈರಸ್‌ನಿಂದ ಸೃಷ್ಟಿಯಾದ ಎರಡನೇ ಅಲೆ ಗರಿಷ್ಠ ಮಟ್ಟ ತಲುಪಿದ ವೇಳೆ ಆರ್0 ದರ 6ರವರೆಗೆ ಏರಿತ್ತು. ಈಗ ಈ ದರ ಶೇ. 1ರ ಸಮೀಪದಲ್ಲೇ ಇದೆ.
ಆತಂಕ ಪಡುವ ಅಗತ್ಯವಿಲ್ಲ
ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ದಿಢೀರ್ ತುಸು ಏರಿಕೆ ಆಗಿದ್ದರಿಂದ ತೀರಾ ಆತಂಕ ಪಡುವ ಅಗತ್ಯ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಒಂದು ವೇಳೆ ನಾಲ್ಕನೇ ಅಲೆ ಉದ್ಭವಿಸಿದರೆ ಬೆಂಗಳೂರು ಮತ್ತೊಮ್ಮೆ ಕರ್ನಾಟಕದ ಕೇಂದ್ರಬಿಂದುವಾಗುತ್ತದೆ. ಈಗ ಬೆಳಕಿಗೆ ಬಂದಿರುವ ಹೊಸ ಪ್ರಕರಣಗಳು ನಾಲ್ಕನೆ ಅಲೆಯ ಮುನ್ಸೂಚನೆ ಎಂದು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಕೋವಿಡ್ ಪರೀಕ್ಷೆಯ ಪಾಸಿಟಿವಿಟಿ ದರ ಕೂಡ ವಾರದಲ್ಲಿ ಶೇ. 1 ಮಾತ್ರ ಇದೆ. ಪಾಲಿಟಿವಿಟಿ ರೇಟ್ 5ಕ್ಕೆ ಮುಟ್ಟಿದರೆ ಆತಂಕ ಪಡಬೇಕಾಗುತ್ತದೆ ಎಂದು ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಬ್ಬರು ಮಾಹಿತಿ ನೀಡಿದರು ಎಂದು ಡೆಕನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.
ಭಾರತೀಯ ಗಣಕ ಸಂಸ್ಥೆಯ ಸಂಶೋಧಕರ ತಂಡವೊಂದು ರೂಪಿಸಿರುವ ಮಾದರಿಯ ಎಣಿಕೆ ಪ್ರಕಾರ ಬೆಂಗಳೂರಿನಲ್ಲಿ ಕೋವಿಡ್ ವೃದ್ಧಿ ದರ ಕೇವಲ ಶೇ. 0.105 ಮಾತ್ರ ಇದೆ. ಇನ್ನೂ ಸಮಾಧಾನದ ಅಂಶ ಎಂದರೆ, ಬೆಂಗಳೂರಿನಲ್ಲಿ ಇರುವ 1474 ಸಕ್ರಿಯ ಪ್ರಕರಣಗಳ ಪೈಕಿ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳು ಕೇವಲ ಎಂಟು ಮಾತ್ರ. ಸಾವು ದಾಖಲಾಗಿ ಬಹಳ ದಿನಗಳಾಗಿವೆ.
Recommended Video

ಬಿಬಿಎಂಪಿ ಅಧಿಕಾರಿ ಹೇಳುವುದೇನು?
ಬಿಬಿಎಂಪಿಯ ಸ್ಪೆಷಲ್ ಕಮಿಷನಲ್ ಡಾ. ಕೆ.ವಿ. ತ್ರಿಲೋಕ್ ಚಂದ್ರ ಅವರು, 'ನಿರಾಳವಾಗಿಯಂತೂ ಇರಲು ಸಾಧ್ಯವಿಲ್ಲ. ಯಾಕೆಂದರೆ ಇದೇ ರೀತಿ ಸೋಂಕಿನ ಗತಿ ಐದಾರು ದಿನಗಳ ಕಾಲ ಏರುತ್ತಲೆ ಇದ್ದರೆ ಆಗ ಆತಂಕ ಪಡಬೇಕಾಗಬಹುದು,' ಎಂದು ಹೇಳಿದ್ದಾರೆ.
ಮಾರ್ಚ್ 1ರಿಂದ ಇಲ್ಲಿಯವರೆಗೆ ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾದ ರೋಗಿಗಳ ಸ್ಯಾಂಪಲ್‌ಗಳ ಪೈಕಿ 714 ಮಂದಿಯ ವರದಿ ಬಂದಿದೆ. ಅದರಲ್ಲಿ 574 ಜನರಲ್ಲಿ Ba.2 ಓಮೈಕ್ರಾನ್ ರೂಪಾಂತರಿ ವೈರಸ್ ಇರುವುದು ಪತ್ತೆಯಾಗಿದೆ. ಅಂದರೆ, ಶೇ. 82.70ರಷ್ಟು ಸೋಂಕಿತರಲ್ಲಿ ಈ ರೂಪಾಂತರಿ ಇದೆ. ಇನ್ನು, ದೆಹಲಿಯಲ್ಲಿ ಕಂಡು ಬಂದ Ba.2.12.1 ರೂಪಾಂತರಿ ತಳಿ ಬೆಂಗಳೂರಿನ ಸೋಂಕಿತರಲ್ಲಿ ಪತ್ತೆಯಾಗಿಲ್ಲ ಎಂದು ಬೆಂಗಳೂರಿನ ಹೆಲ್ತ್ ಕಮಿಷನರ್ ಡಿ ರಣದೀಪ್ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ











Click it and Unblock the Notifications