ಬೆಂಗಳೂರಿನ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬೆಂಗಳೂರು: ಮನುಷ್ಯರಿಗೆ ಸಾವು ಹೇಗೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಂತೂ ಹದಿ ಹರೆಯದವರು ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಇದೀಗ ಬೆಂಗಳೂರಿನ ರೆಸ್ಟೋರೆಂಟ್ ವೊಂದರಲ್ಲಿ ಕೂತು ಊಟ ಮಾಡುತ್ತಿದ್ದ ವ್ಯಕ್ತಿಯೊಬ್ಬರು ದಿಢೀರ್ ಪ್ರಾಣ ಬಿಟ್ಟ ದುರದೃಷ್ಟಕರ ಘಟನೆ ನಡೆದಿದೆ. ಹೋಟೆಲ್ ಸಿಸಿಟಿವಿಯಲ್ಲಿ ದೃಶ್ಯ ರೆಕಾರ್ಡ್ ಆಗಿದೆ. ಈ ಸಾವಿಗೆ ಸಾರ್ವಜನಿಕ ವಲಯದಲ್ಲಿ ಮರುಕ ವ್ಯಕ್ತವಾಗಿದೆ.

ಬೆಂಗಳೂರಿನ ಗೊಟ್ಟಿಗೆರೆಯಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಊಟ ಮಾಡುತ್ತಿದ್ದ 42 ವರ್ಷದ ವ್ಯಕ್ತಿಯೊಬ್ಬರು, ಹೃದಯಾಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆಯು ಅಕ್ಟೋಬರ್ 30 ರಂದು ನಡೆದಿದೆ. ಮೃತರನ್ನು ಚನ್ನರಾಯಪಟ್ಟಣ ಮೂಲದ ಚಂದ್ರು ಎಂದು ಗುರುತಿಸಲಾಗಿದೆ.

Bengaluru Restaurant Incident

ಮೃತ ಚಂದ್ರ ಅವರು, ಕೆಲವು ವರ್ಷಗಳಿಂದ ಇಲ್ಲಿನ 'ಗುರು ಗ್ರೀನ್ಸ್ ಫ್ಯಾಮಿಲಿ ರೆಸ್ಟೋರೆಂಟ್'ನ ಬಾರ್ ವಿಭಾಗದಲ್ಲಿ ಕ್ಯಾಷಿಯರ್ ಆಗಿದ್ದರು ಎಂದು ತಿಳಿದು ಬಂದಿದೆ. ಈ ಸಾವಿಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರಿಗೆ ರೆಸ್ಟೋರೆಂಟ್ ಮಾಲೀಕರು ಮಾಹಿತಿ ನೀಡಿದ್ದು, ಪ್ರಕರಣ ದಾಖಲಾಗಿದೆ.

ಅಂದು ರೆಸ್ಟೋರೆಂಟ್‌ನಲ್ಲಿ ಆಗಿದ್ದೇನು?

ಅ.30ರಂದು ಬೆಳಗ್ಗೆ ಅಂದಾಜು 11:40 ಗಂಟೆ ಹೊತ್ತಿಗೆ ಮೃತ ಚಂದ್ರು ಅವರು ಟೇಬಲ್ ಮುಂದೆ ಕೂತು ಎಂದಿನಂತೆ ಊಟ ಮಾಡುತ್ತಿದ್ದರು. ಅವರಿಗೆ ದಿಢೀರನೆ ಎದೆನೋವು ಕಾಣಿಸಿಕೊಂಡಿದೆ. ಅವರು ತೀವ್ರವಾಗಿ ಒದ್ದಾಡಿ, ಬಳಿಕ ಟೇಬಲ್ ಮೇಲೆಯೇ ಕುಸಿದು ಬಿದ್ದಿದ್ದಾರೆ. ಮೊದಲು ಎಡಭಾಗಕ್ಕೆ ಬಿದ್ದ ಅವರು, ನಂತರ ಸ್ವಲ್ಪ ಸಾವರಿಸಿಕೊಂಡಿದ್ದಾರೆ, ಸುಧಾರಿಕೊಳ್ಳುತ್ತಿದ್ದಂತೆ ನೋಡ ನೋಡುತ್ತಿದ್ದಂತೆ ಬಲಕ್ಕೆ ನೆಲಕ್ಕೆ ಬಿದ್ದಿದ್ದಾರೆ ಎಂದು ರೆಸ್ಟೋರೆಂಟ್ ಸಿಬ್ಬಂದಿ ಹೇಳಿದ್ದಾರೆ.

ಈ ದೃಶ್ಯ ಕಂಡು ಸಿಬ್ಬಂದಿ ಧಾವಿಸಿ ಬಂದು, ಅವರನ್ನು ಬದುಕಿಸಲು ಸಿಪಿಆರ್ (CPR) ನೀಡಿದ್ದಾರೆ. ಅವರಿಗೆ ಗಾಳಿ ಬೀಸಿದ್ದಾರೆ, ತಲೆ ಮೇಲೆ ನೀರು ಹಾಕಿದ್ದಾರೆ. ಬದುಕಿಸಲು ಸರ್ವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಅವರ ಪ್ರಯತ್ನಗಳು ಫಲ ನೀಡಿಲ್ಲ. ಕೂಡಲೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವೈದ್ಯರು ಅವರ ಸಾವನ್ನು ಖಚಿತಪಡಿಸಿದ್ದಾರೆ.

ಅಂದಿನ ಸಂಪೂರ್ಣ ಘಟನೆಯು ಹೋಟೆಲ್ ಸಿಸಿಟಿವಿ (CCTV) ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಹುಳಿಮಾವು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಂದಿನ ದಿನಮಾನಗಳಲ್ಲಿ ಮನುಷ್ಯರ ಒತ್ತಡದ ಜೀವನ, ಆಹಾರ ಕ್ರಮದಲ್ಲಿನ ವ್ಯತ್ಯಾಸ, ನಿದ್ದೆ ಹಾಗೂ ಇನ್ನಿತರ ಕಾರಣಗಳು ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಕೋರೊನಾ ಬಳಿಕ ಹೃದಯಾಘಾತ ಪ್ರಕರಣ ಹೆಚ್ಚಾಗುತ್ತಿವೆ ಎಂದು ವರಿದಿಯೊಂದು ಬಹಿರಗಂಪಡಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+