Bengaluru Rain: ಬೆಂಗಳೂರು ಪ್ರಜೆಗಳೇ ಗಮನಿಸಿ, ಮುಂದಿನ 24 ಗಂಟೆಗಳ ಕಾಲ ಭಾರಿ ಮಳೆ... ಮಳೆ...
ಬಂಗಾಳ ಕೊಲ್ಲಿ ಮತ್ತೆ ಚಂಡಮಾರುತಕ್ಕೆ ಸಾಕ್ಷಿಯಾಗಿದೆ, ಭಾರಿ ಮಳೆ ಅಬ್ಬರಿಸಲು ಬಂಗಾಳ ಕೊಲ್ಲಿ ಕಾರಣವಾಗುತ್ತಿದೆ. ಅಂದಹಾಗೆ ಮಳೆರಾಯ ಬಿಟ್ಟೂ ಬಿಡದೆ ಅಬ್ಬಿರಿಸುತ್ತಿದ್ದು, ಹೀಗೆ ಮಳೆ ಅಬ್ಬರದ ಕಾರಣಕ್ಕೆ ಬೆಂಗಳೂರಿನ ಜನರು ಬೆಳ್ಳಂ ಬೆಳಗ್ಗೆ ಭಯಗೊಂಡಿದ್ದಾರೆ. ಆದರೆ ಅಸಲಿ ಸುದ್ದಿ ಇದಲ್ಲ, ಇನ್ನು ಕೆಲವೇ ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಭಾರಿ ಮಳೆ ಆರಂಭ ಆಗಲಿದೆ. ಅಲ್ಲದೆ ಮುಂದಿನ 24 ಗಂಟೆಗಳ ಕಾಲ ಭಾರಿ ಮಳೆ... ಮಳೆ...
ಬೆಂಗಳೂರಿನಲ್ಲಿ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಭಾರಿ ಮಳೆ ಸುರಿದಿತ್ತು. ಹೀಗಾಗಿಯೇ ಡಿಸೆಂಬರ್ ತಿಂಗಳಲ್ಲಿ ಮಳೆ ಬರಲ್ಲ ಬಿಡು, ಬರೀ ಚಳಿ ಇರುತ್ತೆ ಅಂತಾ ಬೆಂಗಳೂರಿನ ಜನರು ನಿರ್ಧಾರ ಮಾಡಿಕೊಂಡಿದ್ದರು. ಆದರೆ ಬೆಂಗಳೂರಿನಲ್ಲಿ ಡಿಸೆಂಬರ್ ತಿಂಗಳಲ್ಲೂ ಭಾರಿ ಮಳೆ ಶುರುವಾಗಿದೆ. ಡಿಸೆಂಬರ್ ಆರಂಭಕ್ಕೆ ಮೊದಲೇ ಶುರುವಾಗಿದ್ದ ಮಳೆ ಡಿಸೆಂಬರ್ ತಿಂಗಳಲ್ಲಿ ಮಧ್ಯ ಭಾಗಕ್ಕೆ ಬಂದರೂ ನಿಲ್ಲುತ್ತಿಲ್ಲ. ಹಾಗೇ ಮುಂದಿನ 24 ಗಂಟೆ ಕಾಲ ಬೆಂಗಳೂರಿನ ಈ ಪ್ರದೇಶಗಳಲ್ಲಿ ಭಾರಿ ಮಳೆ ಅಬ್ಬರಿಸುವುದು ಗ್ಯಾರಂಟಿ ಆಗಿದೆ.

ಬೆಂಗಳೂರಲ್ಲಿ ಮಳೆ.. ಮಳೆ.. ಭಾರಿ ಮಳೆ!
ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಜನರಿಗೆ ಇವತ್ತು ಬೆಳಗ್ಗೆ ಎದ್ದ ತಕ್ಷಣವೇ ಆಶ್ಚರ್ಯ ಕಾದಿತ್ತು. ಯಾಕಂದ್ರೆ ಬೆಂಗಳೂರಲ್ಲಿ ಇವತ್ತು ಬೆಳಗ್ಗೆ 9 ಗಂಟೆ ಕಳೆದರೂ ವಾತಾವರಣ ಮಾತ್ರ ಕತ್ತಲೆ, ಕತ್ತಲೆ ರೀತಿ ಆಗಿತ್ತು. ಇದನ್ನ ನೋಡಿ ಬೆಂಗಳೂರಿನ ಪ್ರಜೆಗಳಿಗೆ ಆಶ್ಚರ್ಯ ಆಗುವ ಜೊತೆಗೆ, ಇವತ್ತು ಮಳೆ ಗ್ಯಾರಂಟಿ ಗುರೂ ಅಂತಾನೂ ಕನ್ಫರ್ಮ್ ಆಗಿತ್ತು. ಆದರೆ, ಇದೀಗ ಬರೀ ಮಳೆ ಮಾತ್ರವಲ್ಲ, ಘೋರ ಮಳೆ ಜೊತೆಗೆ ಚಳಿ ಕೂಡ ಬೆಂಗಳೂರಿಗೆ ಅಪ್ಪಳಿಸಲು ಈ ಸಮಯದಲ್ಲಿ ಸನ್ನದ್ಧವಾಗಿದೆ! ಹಾಗಾದ್ರೆ ಯಾವೆಲ್ಲಾ ಪ್ರದೇಶದಲ್ಲಿ ಮಳೆ ಹೆಚ್ಚಾಗಿ ಬೀಳುವ ಸಾಧ್ಯತೆ ಇದೆ?
ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ....
ಅಂದಹಾಗೆ ಬೆಳಗ್ಗೆಯಿಂದಲೇ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮಳೆ ಶುರುವಾಗಿದೆ. ಈ ಪೈಕಿ ಬೆಂಗಳೂರಿನ ದಕ್ಷಿಣ ಭಾಗ ಅಂದ್ರೆ ತಮಿಳುನಾಡಿಗೆ ಹತ್ತಿರ ಇರುವ ಬೆಂಗಳೂರಿನ ಜಾಗ & ಪ್ರದೇಶಗಳಲ್ಲಿ ಇಂದು ಬೆಳಗ್ಗೆಯಿಂದ ಮಳೆರಾಯ ಅಬ್ಬರಿಸಲು ಶುರು ಮಾಡಿದ್ದಾನೆ. ಈ ಮೂಲಕ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಚಂದಾಪುರ, ಆನೇಕಲ್ ಸೇರಿ, ಬೊಮ್ಮನಹಳ್ಳಿ, ಮಡಿವಾಳ, ಗಾರೇಪಾಳ್ಯ, ಆಡುಗೋಡಿ, ಬನಶಂಕರಿ, ಜಯನಗರ ಸೇರಿ ಬೆಂಗಳೂರಿನ ಹೃದಯ ಭಾಗದಲ್ಲೂ ಮಳೆ ಶುರುವಾಗಿತ್ತು. ಹೀಗಿದ್ದಾಗ ಕೆಲಸಕ್ಕೆ ಹೊರಡಲು ಅರ್ಜೆಂಟ್ ಆಗಿದ್ದ ಜನರು ಮಳೆಯಲ್ಲಿ ಪರದಾಡಿಬಿಟ್ಟರು.












Click it and Unblock the Notifications