ಬೆಂಗಳೂರು ಪ್ರೆಸ್ ಕ್ಲಬ್ 2018ರ ವಾರ್ಷಿಕ ಪ್ರಶಸ್ತಿ ಪ್ರಕಟ
ಬೆಂಗಳೂರು, ಡಿಸೆಂಬರ್ 28 : ಬೆಂಗಳೂರು ಪ್ರೆಸ್ ಕ್ಲಬ್ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಿದೆ. ಇನ್ಪೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಅವರನ್ನು ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಶುಕ್ರವಾರ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ 31 ಸೋಮವಾರ ಪ್ರೆಸ್ ಕ್ಲಬ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಬೆಂಗಳೂರು ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಇನ್ಪೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಹಲವು ಹಿರಿಯ ಪತ್ರಕರ್ತಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತ ಪತ್ರಕರ್ತರು
* ಕೆ.ಎನ್.ತಿಲಕ್ ಕುಮಾರ್
* ರವಿ ಹೆಗಡೆ
* ಕೆ.ಎಸ್.ಸಚ್ಚಿದಾನಂದ ಮೂರ್ತಿ (ಸಚ್ಚಿ)
* ತಿಮ್ಮಪ್ಪ ಭಟ್
* ಎ.ಬಾಲಚಂದ್ರ
* ವೆಂಕಟನಾರಾಯಣ
* ರಾಮಣ್ಣ ಎಚ್. ಕೋಡಿ ಹೊಸಳ್ಳಿ
* ತುಂಗಾ ರೇಣುಕಾ
* ಕೆ.ವಿ.ಪ್ರಭಾಕರ್
* ಡಿ.ಸಿ.ನಾಗೇಶ್
* ರಾಜಶೇಖರ್ ಹತ್‌ಗುಂದಿ
* ವೇದಂ ಜಯಶಂಕರ್
* ರಾಜಶೇಖರ ಅಬ್ಬೂರು
* ಶಿವಾಜಿ ಗಣೇಶನ್
* ಕೆ.ಬದ್ರುದ್ದೀನ್ ಮಾಣಿ












Click it and Unblock the Notifications