ಲೋಕಸಭೆ ಚುನಾವಣೆಗೆ ಮತ ಹಾಕಿದರೆ ಬಿಯರ್ ಫ್ರೀ.. ಫ್ರೀ..!

2024ರ ಲೋಕಸಭೆ ಚುನಾವಣೆಗೆ 2ನೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿದೆ. ಹಾಗೇ ಕರ್ನಾಟಕದಲ್ಲಿ ಕೂಡ ಇಂದು ಮೊದಲ ಹಂತದ ವೋಟಿಂಗ್ ಶುರುವಾಗಿದೆ. ಹೀಗಿದ್ದಾಗಲೇ ಮತದಾರರನ್ನ ಸೆಳೆಯಲು ಹಲವು ರೀತಿಯ ಜಾಹೀರಾತು ನಿಡಿತ್ತು ಚುನಾವಣಾ ಆಯೋಗ ಮತ್ತು ಚುನಾವಣಾ ಅಧಿಕಾರಿಗಳು. ಇದರ ಜೊತೆಗೆ ಮತದಾನ ಹೆಚ್ಚಿಸಲು ಹೋಟೆಲ್‌ಗಳು & ಪಬ್ ಮಾಲೀಕರು ಉಚಿತ ಬಿಯರ್ ಕೊಡುವುದಾಗಿ ಘೋಷಣೆ ಮಾಡಿದ್ದಾರೆ!

ಹೌದು, ಭಾರತದ ಭವಿಷ್ಯ ನಿರ್ಧಾರ ಮಾಡಲು ಕೋಟಿ ಕೋಟಿ ಭಾರತೀಯರು ಮತದಾನ ಮಾಡುತ್ತಿದ್ದಾರೆ. ಭಾರತದ 544 ಲೋಕಸಭೆ ಕ್ಷೇತ್ರಕ್ಕೂ 7 ಹಂತದಲ್ಲಿ ಮತದಾನ ನಡೆಯುತ್ತಿದೆ. ಇಂದು 2ನೇ ಹಂತದಲ್ಲಿ ವೋಟಿಂಗ್ ಆರಂಭವಾಗಿದೆ. ಹೀಗಿದ್ದಾಗ ಬೆಂಗಳೂರಿನಲ್ಲಿ ಕೆಲವು ಪಬ್ ಮತ್ತು ರೆಸ್ಟೋಬಾರ್ ಮಾಲೀಕರು ಗ್ರಾಹಕರಿಗೆ ಚಿತ್ರ ವಿಚಿತ್ರ ಆಫರ್ ನೀಡುತ್ತಿದ್ದಾರೆ.

Bengaluru Hotel Offers Customers For Free Beer Who Will Vote For 2024 Lok Sabha Elections

ಈಗಾಗಲೇ ಹಲವು ದರ್ಶಿನಿ ಹೋಟೆಲ್‌ಗಳಲ್ಲಿ ಹಾಗೂ ಸಾಗರ್ ಹೋಟೆಲ್‌ಗಳಲ್ಲಿ ಮತದಾನ ಮಾಡಿ ಬಂದು ಬೆರಳು ತೋರಿಸಿದ ಭಾರತೀಯರಿಗೆ ಉಚಿತವಾಗಿ ಊಟ & ತಿಂಡಿ ನೀಡಿದ್ದು, ಇದರ ಜೊತೆಗೆ ಪಬ್ ಮತ್ತು ರೆಸ್ಟೋಬಾರ್ ಮಾಲೀಕರು ವೋಟಿಂಗ್ ಮಾಡಿ ಬಂದ ತಮ್ಮ ಗ್ರಾಹಕರಿಗೆ ಉಚಿತ ಬಿಯರ್ ನೀಡಲು ಮುಂದಾಗಿದ್ದಾರೆ. ಹಾಗಾದ್ರೆ ನೀವು ಉಚಿತ ಬಿಯರ್ ಕುಡಿಯಲು ಏನು ಮಾಡಬೇಕು ಗೊತ್ತೆ? ಮುಂದೆ ಓದಿ.

ಬಾರ್ & ಪಬ್ ಬಂದ್ ಆಗಿವೆ!

ಅಂದಹಾಗೆ ಮತದಾನದ ಹಿನ್ನೆಲೆಯಲ್ಲಿ 2 ದಿನಗಳ ಹಿಂದೆಯೇ ಕರ್ನಾಟಕದ ದಕ್ಷಿಣದಲ್ಲಿ, ಎಲ್ಲಾ ಬಾರ್, ಎಂಆರ್‌ಪಿ & ರೆಸ್ಟೋಬಾರ್ ಬಂದ್ ಮಾಡಲಾಗಿದೆ. ಹೀಗಿದ್ದರೂ ವೋಟ್ ಮಾಡಿ ಬರುವ ಮತದಾರರಿಗೆ ಬಿಯರ್ ಎಲ್ಲಿಂದ ಸಿಗುತ್ತೆ? ಅಂತಾ ನಿಮಗೆ ಪ್ರಶ್ನೆ ಮೂಡಿದೆ ಅಂದರೆ, ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ಅದು ಏನೆಂದರೆ ಇಂದು ಲೋಕಸಭೆ ಚುನಾವಣೆ ಹಿನ್ನೆಲೆ ಮತ ಹಾಕುವ ಭಾರತದ ಪ್ರಜೆಗಳಿಗೆ ನಾಳೆ ಮತ್ತು ನಾಡಿದ್ದು ಅಂದ್ರೆ ಏಪ್ರಿಲ್ 27 & 28 ರಂದು ಉಚಿತವಾಗಿ ಬಿಯರ್ ಕೊಡುವುದಾಗಿ ಬೆಂಗಳೂರಿನ ಹಲವು ರೆಸ್ಟೋಬಾರ್ & ಪಬ್‌ಗಳು ಘೋಷಣೆ ಮಾಡಿವೆ.

ಮತದಾನದ ಪ್ರಮಾಣ ಹೆಚ್ಚಾಗಬೇಕು

ಭಾರತದಲ್ಲಿ ಸಂವಿಧಾನ ಎಲ್ಲಾ ವಯಸ್ಕರಿಗೂ ಮತದಾನದ ಹಕ್ಕು ನೀಡಿದೆ. ಮತದಾನದ ಹಕ್ಕು ದೊಡ್ಡ ಶಕ್ತಿಯಾಗಿದ್ದು ಒಂದು ದೇಶದ ಭವಿಷ್ಯ ಕಟ್ಟುವ ಶಕ್ತಿ ಹೊಂದಿದೆ. ಹೀಗಾಗಿ ಮತದಾನ ಎನ್ನುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. 18 ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯ ಪ್ರಜೆ ಕೂಡ ಮತದಾನ ಮಾಡಲು ಅರ್ಹನಾಗಿರುತ್ತಾನೆ. ಆದರೆ ಎಷ್ಟೋ ಜನ ಮತ ಹಾಕದೆ, ತಮ್ಮ ಹಕ್ಕನ್ನು ಕೂಡ ಕಳೆದುಕೊಳ್ಳುತ್ತಾರೆ. ಅಲ್ಲದೆ ಭವಿಷ್ಯದ ಭಾರತಕ್ಕು ಇದು ಮಾರಕ. ಹೀಗಾಗಿಯೇ ಕರ್ನಾಟಕದ ಹೋಟೆಲ್ ಮಾಲೀಕರು ಇದೀಗ ಉತ್ತಮವಾಗಿ, ಮತದಾನ ಹೆಚ್ಚಾಗುವಂತೆ ಮಾಡಲು ಹಲವು ಕ್ರಮ ಕೈಗೊಂಡಿದ್ದಾರೆ. ಅದ್ರಲ್ಲೂ ವೋಟ್ ಮಾಡಿ ಬಂದವರಿಗೆ ಉಚಿತವಾಗಿ ಬಿಯರ್ ಕೊಡುವ ಘೋಷಣೆ ಗಮನ ಸೆಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+